ಚಾಮರಾಜನಗರ: ‘ಕೈವಾರ ಸದ್ಗುರು ನಾರೇಯಣ ಯೋಗಿಗಳು ನಾಡು ಕಂಡ ಅಪರೂಪದ ಶ್ರೇಷ್ಠ ಸಂತ ಹಾಗೂ ತಪಸ್ವಿ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಚಾಮರಾಜನಗರ ವಿಶ್ವವಿದ್ಯಾಲಯ, ಯೋಗಿ ನಾರೇಯಣ ಯುತೀಂದ್ರರ ಪ್ರಚಾರ ಸಭಾ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಕೈವಾರ ಸದ್ಗುರು ನಾರೇಯಣ ಯೋಗಿಗಳ ಪರಿಚಯ, ಆತ್ಮಬೋಧೆ ಮತ್ತು ನಾರೇಯಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೈವಾರ ತಾತಯ್ಯನವರು 19ನೇ ಶತಮಾನದಲ್ಲಿ ದ್ವಿಭಾಷಾ ಕವಿಯಾಗಿ, ಜ್ಞಾನಯೋಗಿಯಾಗಿ ಪ್ರಸಿದ್ಧಿ ಪಡೆದಿದ್ದರು. ಅಮರ ನಾರೇಯಣ ಅವರ ಪರಮ ಭಕ್ತರಾಗಿದ್ದ ಕೈವಾರ ತಾತಯ್ಯ ಕಾಲಜ್ಞಾನ, ಭವಿಷ್ಯ ವಾಣಿ ನುಡಿಯುವುದರ ಜೊತೆಗೆ ತತ್ವ ಪದಗಳನ್ನು ರಚನೆ ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದರು.

‘ಬಾಲ್ಯದಲ್ಲಿ ಹೆತ್ತವರನ್ನು ಕಳೆದುಕೊಂಡು ಅರ್ಚಕರ ಆಶ್ರಯದಲ್ಲಿ ಬೆಳೆದ ತಾತಯ್ಯನವರ ಜನನದಿಂದ ಕೊನೆಯ ಘಟ್ಟದವರೆಗೂ ಹಲವು ಪವಾಡಗಳು ಜರುಗಿದವು. ಬಳೆ ಮಾರುವ ವೃತ್ತಿಯ ಜೊತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡು ಯೋಗ, ಧ್ಯಾನ, ಅಧ್ಯಾತ್ಮಿಕತೆಯ ಮೇರು ಶಿಖರವನ್ನೇರಿದರು’ ಎಂದು ತಿಳಿಸಿದರು.

‘110 ವರ್ಷಗಳ ಕಾಲ ಬದುಕಿದ್ದ ತಾತಯ್ಯ ಜೀವಂತ ಸಮಾಧಿಯಾದರು. ತಾತಯ್ಯ ತಪಸ್ಸುಗೈದ ಪುಣ್ಯಭೂಮಿ ಕೈವಾರ ಪುಣ್ಯ ಕ್ಷೇತ್ರವಾಗಿ ಭಕ್ತರನ್ನು ಸೆಳೆಯುತ್ತಿದೆ. ಪ್ರಮುಖ ಪ್ರವಾಸಿ ತಾಣವಾಗಿ, ಪುಣ್ಯ ಕ್ಷೇತ್ರವಾಗಿ ಬೆಳೆದಿದೆ. ಉದ್ಯಮಿ ಎಂ.ಎಸ್.ರಾಮಯ್ಯ ಹಾಗೂ ಅವರ ಪುತ್ರರು ಕೈವಾರ ಕ್ಷೇತ್ರವನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಹಳ್ಳಿಗಳಲ್ಲಿ ನಾರೇಯಣರ ಕೀರ್ತನೆ ಹಾಗೂ ತತ್ವಪದಗಳನ್ನು ಪ್ರಚುರ ಪಡಿಸುವ ಮೂಲಕ ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಾಜಿ ಮಹಾರಾಜ್ ಅವರಿಗೆ ನಾರೇಯಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ರಾಮಕೃಷ್ಣ ಅಶ್ರಮದ ಸೇವೆ ಗುರುತಿಸಿ ಯೋಗಿ ನಾರೇಯಣರ ಪ್ರಶಸ್ತಿ ನೀಡಿರುವುದು ಹೆಮ್ಮೆಯ ವಿಚಾರವಾಗಿದ್ದು ಜವಾಬ್ದಾರಿ ಮತ್ತಷ್ಟು ಹೆಚ್ಚಿಸಿದೆ ಎಂದರು.

ಧರ್ಮದಿಂದ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದ್ದು, ಜ್ಞಾನ ಇದ್ದ ಕಡೆ ಧರ್ಮ ಸದಾ ಪ್ರಜ್ವಲಿಸುತ್ತದೆ. ಸ್ವಾಮಿ ವಿವೇಕಾನಂದರ ತತ್ವ, ಅದರ್ಶಗಳು ಹಾಗೂ ರಾಮಕೃಷ್ಣ ಪರಮಹಂಸರ ಸೇವೆ ಸಮಾಜಕ್ಕೆ ದಾರಿದೀಪ ಹಾಗೂ ಸ್ಫೂರ್ತಿ ಎಂದರು.

ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಹಿಂದುಳಿದ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಉನ್ನತ ಶಿಕ್ಷಣ ಸಂಸ್ಥೆ ತೆರೆಯುವ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೇಯ ಜೆಎಸ್ಎಸ್ ಶಿಕ್ಷಣ ಸಂಸ್ಥೆಗೆ ಸಲ್ಲುತ್ತದೆ. ಹಾಗೆಯೇ ರಾಮಕೃಷ್ಣ ಆಶ್ರಮ ಹಾಗೂ ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆಗಳು ಕೂಡ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಕೊಡುಗೆ ನೀಡಿವೆ ಎಂದರು.

ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಎಲ್ಲರ ಕೈಗೆಟುಕುತ್ತಿಲ್ಲ. ಶಾಲಾ ಹಾಗೂ ಕಾಲೇಜು ಹಂತದ ಶಿಕ್ಷಣ ಪಡೆಯುವ 100 ವಿದ್ಯಾರ್ಥಿಗಳ ಪೈಕಿ ಕೇವಲ 10 ವಿದ್ಯಾರ್ಥಿಗಳು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿರುವುದು ಕಳವಳಕಾರಿ ವಿಚಾರ. ಸರ್ಕಾರ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲು ಎಂಜಿನಿಯರಿಂಗ್, ಮೆಡಿಕಲ್, ಕಾನೂನು ಕಾಲೇಜು, ವಿಶ್ವವಿದ್ಯಾಲಯ ತೆರೆದಿದ್ದ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀಯೋಗಿ ನಾರೇಯಣ ಯತೀಂದ್ರರ ಪ್ರಚಾರ ಸಭಾದ ಪ್ರಧಾನ ಸಂಚಾಲಕ ಎಚ್.ಎ.ವೆಂಕಟೇಶ್ ಸ್ವಾಗತಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜು, ಶ್ರೀಮುದ್ದಾನೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಎಂ.ಎನ್.ಕವಿತಾ, ಶ್ರೀನಿವಾಸಶೆಟ್ಟಿ, ದಾಸ ಬಣಜಿಗರ ಸಂಘದ ಅಧ್ಯಕ್ಷ ಚಂದ್ರಶೇಖರ್, ಎಂ.ಜಿ.ಸುದೀಪ್, ಹಿರಿಯ ಲೆಕ್ಕಪರಿಶೋಧಕ ಸುರೇಂದ್ರ ಹೆಗಡೆ, ಶಿವಕುಮಾರ್, ಮೈಸೂರು ವಿ.ವಿ ವಿಶ್ರಾಂತ ಪ್ರಾಧ್ಯಾಪಕ ಶಿವರಾಜಪ್ಪ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-38-2011784988

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.