ಸಾಂಪ್ರದಾಯಿಕ ಪೂಜೆ. ಪುಷ್ಪಾರ್ಚನೆ. ಚಂಡೆಮೇಳ, ತಮಟೆ ವಾದನ. ವೀರಗಾಸೆ ಪ್ರದರ್ಶನ. ನಂತರ, ಗಾಂಭೀರ್ಯದಲ್ಲಿ ಹೆಜ್ಜೆ ಹಾಕುತ್ತಿರುವ ಗಜಪಡೆ. ಈ ದೃಶ್ಯ ಕಂಡು ಬಂದಿದ್ದು ಗಜ ಪಯಣದಲ್ಲಿ. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಸೇರಿ 9 ಆನೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ, ಬೆಳಿಗ್ಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಈ ವೇಳೆ, ಜಾನಪದ ಕಲಾ ತಂಡಗಳ ಪ್ರದರ್ಶನ ಕಣ್ಮನ ಸೆಳೆಯಿತು.