ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಷ ದಸರೆ ಆಚರಣೆಗೆ ವಿರೋಧ ಸಲ್ಲ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

Published : 24 ಸೆಪ್ಟೆಂಬರ್ 2024, 16:15 IST
Last Updated : 24 ಸೆಪ್ಟೆಂಬರ್ 2024, 16:15 IST
ಫಾಲೋ ಮಾಡಿ
Comments

ಮೈಸೂರು: ‘ಮಹಿಷ ದಸರೆ ಆಚರಣೆ ವಿರುದ್ಧ ಬಿಜೆಪಿ ಮುಖಂಡ ಪ್ರತಾಪಸಿಂಹ ದ್ವೇಷದ ಹೇಳಿಕೆ ನೀಡುತ್ತಿದ್ದಾರೆ. ಆಚರಣೆಯು ವೈಯಕ್ತಿಕವಾಗಿದ್ದು, ವಿರೋಧ ಸಲ್ಲದು’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮುಂಡೇಶ್ವರಿ ದೇವಿ, ನಂಬಿಕೆಗೆ ದಕ್ಕೆ ಆಗುವುದಿಲ್ಲ. ಮಹಿಷ ಪ್ರತಿಮೆಯೇ ಚಾಮುಂಡಿಬೆಟ್ಟದಲ್ಲಿದೆ. ಅಲ್ಲಿ ಪೂಜೆ ಮಾಡಿದರೆ ತಪ್ಪೇನು’ ಎಂದು ಪ್ರಶ್ನಿಸಿದರು.

‘ಸಂಸದ ಯದುವೀರ್‌ ಅವರಿಗೆ ತಮ್ಮ ಆಸ್ತಿಗಳ ರಕ್ಷಣೆಯೇ ಮುಖ್ಯವಾಗಿದೆ. ಅವರಿಗೆ ಜನರ ಕಷ್ಟ ಗೊತ್ತಿಲ್ಲ. ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಯನ್ನೂ ವಿರೋಧಿಸಿದ್ದರು’ ಎಂದು ಬೇಸರ ವ್ಯಕ್ತಪಡಿಸಿದರು.

‘ಪಾರಿವಾಳಗಳ ಹಿಕ್ಕೆ ಅರಮನೆಗೇನೂ ತೊಂದರೆ ನೀಡದು. ನೂರಾರು ವರ್ಷಗಳಿಂದಲೂ ಪಾರಿವಾಳಗಳಿವೆ. ಅವುಗಳನ್ನು ಓಡಿಸಬೇಕೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT