ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವ ದಸರಾ ಸ್ಥಳ ಬದಲಾವಣೆ: ಹೋಟೆಲ್‌ ಮಾಲೀಕರ ಸಂಘ ಸ್ವಾಗತ

Published : 25 ಸೆಪ್ಟೆಂಬರ್ 2024, 14:04 IST
Last Updated : 25 ಸೆಪ್ಟೆಂಬರ್ 2024, 14:04 IST
ಫಾಲೋ ಮಾಡಿ
Comments

ಮೈಸೂರು: ‘ಯುವ ದಸರಾ ಕಾರ್ಯಕ್ರಮವನ್ನು ಹೊಸ ಸ್ಥಳದಲ್ಲಿ (ಉತ್ತನಹಳ್ಳಿ ಸಮೀಪ) ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿರುವುದು ಅತ್ಯುತ್ತಮ ನಿರ್ಧಾರವಾಗಿದೆ’ ಎಂದು ಜಿಲ್ಲಾ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಸ್ವಾಗತಿಸಿದ್ದಾರೆ.

‘ನಗರದ ಮಧ್ಯ ಭಾಗದಲ್ಲಿ ಯುವ ದಸರಾ ನಡೆಯುವುದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಆಗುತ್ತಿತ್ತು. ಸಾರ್ವಜನಿಕರು ಹಾಗೂ ಪ್ರವಾಸಿಗರು ಹಲವು ಗಂಟೆಗಳು ಟ್ರಾಫಿಕ್ ಜಾಮ್‌ನಿಂದ ರಸ್ತೆಯಲ್ಲೇ ಸಮಯ ಕಳೆಯಬೇಕಾದ ಸ್ಥಿತಿ ಉಂಟಾಗುತ್ತಿತ್ತು. ಅವರು ಯಾವ ಕಾರ್ಯಕ್ರಮಕ್ಕೂ ಭಾಗವಹಿಸಲು ಆಗುತ್ತಿರಲಿಲ್ಲ’ ಎಂದಿದ್ದಾರೆ.

‘ವಿದ್ದುದ್ದೀಪಾಲಂಕಾರವನ್ನು 21 ದಿನಗಳವರೆಗೆ ವಿಸ್ತರಿಸಿರುವುದು ಕೂಡ ಸರಿಯಾದ ಕ್ರಮವಾಗಿದೆ. ಆದರೆ, ಒಂದು ದಿನದ ಟಿಕೆಟ್‌ ಬೆಲೆಯನ್ನು ₹8 ಸಾವಿರ ಹಾಗೂ ₹5 ಸಾವಿರ ಮಾಡಿರುವುದು ದುಬಾರಿಯಾಗಿದೆ. ಇದನ್ನು ಪುನರ್‌ ಪರಿಶೀಲಿಸಬೇಕು. ಸರಾಸರಿ ₹2 ಸಾವಿರಕ್ಕೆ ಇಳಿಸಬೇಕು’ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT