ಮೇಲುಕೋಟೆ: ‘ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯು 6 ಲಕ್ಷ ತಾಳೆಗರಿಗಳನ್ನು ಸಂರಕ್ಷಿಸಿ ಡಿಜಿಟಲೀಕರಣ ಮಾಡಿರುವುದು ದೇಶದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿ ಸಾರ್ಥಕತೆ ಮೆರೆಯುತ್ತಿದೆ’ ಎಂದು ಪ್ರೊ.ಭಾಷ್ಯಂ ಸ್ವಾಮೀಜಿ ಹೇಳಿದರು.

ಇಲ್ಲಿನ ಸಂಸ್ಕೃತ ಸಂಶೋಧನಾಲಯದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹಾಗೂ ಭಗವದ್ ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು.

ರಾಮಾನುಜಾಚಾರ್ಯರ ತಪೋಭೂಮಿ ಮೇಲುಕೋಟೆಯಲ್ಲಿ ಸಂಶೋಧನಾ ಸಂಸ್ಥೆ ಆರಂಭಿಸಲು ಅಂದಿನ ಉಪರಾಷ್ಟ್ರಪತಿ ಬಿ.ಡಿ.ಜತ್ತಿ ರಾಜ್ಯ ಸರ್ಕಾರಕ್ಕೆ ಆದೇಶ ಮಾಡಿದ್ದರಿಂದ ಸಂಶೋಧನಾ ಸಂಸ್ಥೆ ಆರಂಭವಾಗಿ 50 ವರ್ಷ ಪೂರೈಸುತ್ತಿದೆ. ಆಚಾರ್ಯರ ಸಂದೇಶಗಳನ್ನು ಹಾಗೂ ತಾಳೆಗರಿಯಲ್ಲಿ ಅಡಗಿರುವ ಉಪಯುಕ್ತ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯವನ್ನು ನಿರಂತವಾಗಿ ಸಂಸ್ಥೆ ಅಚ್ಚುಕಟ್ಟಾಗಿ ತಲುಪಿಸುತ್ತಿದೆ’ ಎಂದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ವಿ. ಗಿರೀಶ್ ಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಆಧುನಿಕ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆಗೆ ಸಂಸ್ಕೃತ ಭಾಷೆ ಆಧಾರವಾಗಬೇಕಿದೆ. ದೇಶದ ಎಲ್ಲಾ ಭಾಷೆಗಳಿಗೂ ಸಂಸ್ಕೃತ ಆಧಾರವಾಗಿದೆ. ಯುವಪೀಳಿಗೆಗೆ ಸಂಸ್ಕೃತ ಭಾಷೆಯ ಅರಿವು ಮೂಡಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕು. ಈ ಸಂಸ್ಥೆ ತಾಳೆಗರಿ ಡಿಜಿಟಲೀಕರದಿಂದಾಗಿ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ’ ಎಂದರು.

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ ನಿರ್ದೇಶಕ ಪ್ರೊ.ಸಿ. ಪಾಲಯ್ಯ ಮಾತನಾಡಿ, ‘ತಾಳೆಗರಿಯಲ್ಲಿ ಅಡಗಿರುವ ವಿಚಾರಧಾರೆಗಳು ದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿವೆ’ ಎಂದರು.

ಕುಲಸಚಿವ ಎಸ್. ಕುಮಾರ್, ಋಷಿದೇವ್ ಭಾರ್ಗವ್, ರಮೇಶ್ ಎಸ್. ಪುಟ್ಟಣ್ಣನವರ್, ಅರುಣ್ ಕುಮಾರ್ ಎಚ್.ಎಸ್. ಕವಿತಾ ಬಿರಾದಾರ್, ಶೆಲ್ಪತಿರುನಾರಾಯಣ, ಚಂದ್ರಶೇಖರ್, ಆರ್.ಕೆ. ನಾರಾಯಣ ಅಯ್ಯಂಗಾರ್, ಸಂಪತ್ ಕುಮಾರ್, ಆನಂದಾಳ್ವರ್, ರಂಗಪ್ರಿಯ ಕೆ.ಎನ್. ಶ್ರೀನಿವಾಸ ಪಾಲ್ಗೊಂಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-40-36132423

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.