ಮುಂಡರಗಿ: ‘ಕಾಯಕ ನಿಷ್ಠೆಗೆ ಹೆಸರಾಗಿದ್ದ ಮಡಿವಾಳ ಮಾಚಿದೇವರು ಬಸವಾದಿ ಶರಣ ಸಂಕುಲದ ಕಣ್ಮಣಿಯಾಗಿದ್ದರು. ಕಾಯಕದ ಮೂಲಕ ಜನರು ಬಟ್ಟೆಗಳನ್ನು ಶುದ್ಧಗೊಳಿಸುವುದರ ಜೊತೆಗೆ ವಚನ ಸಾಹಿತ್ಯದ ಮೂಲಕ ಮನದ ಮೈಲಿಗೆಯನ್ನು ತೊಳೆದರು’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ತಿಳಿಸಿದರು.

ಇಲ್ಲಿನ ಪ್ರಿಯದರ್ಶಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕದಳಿ ಮಹಿಳಾ ವೇದಿಕೆ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕು ಕದಳಿ ವೇದಿಕೆಯ ಅಧ್ಯಕ್ಷೆ ಸೀತಾ ಬಸಾಪೂರ ಮಾತನಾಡಿ, ‘ಶರಣರು ನುಡಿದಂತೆ ನಡೆದವರು. ಕಾಯಕ ದಾಸೋಹಗಳು ಶರಣರ ಎರಡು ಕಣ್ಣುಗಳಾಗಿದ್ದವು. ನಾವೆಲ್ಲರೂ ಶರಣ ಮಾರ್ಗದಲ್ಲಿ ನಡೆಯಬೇಕು’ ಎಂದು ಸಲಹೆ ನೀಡಿದರು.

ಹಿರಿಯ ಉಪನ್ಯಾಸಕಿ ಶಶಿಕಲಾ ಕುಕನೂರ ಮಾತನಾಡಿ, ‘ಮಡಿವಾಳ ಮಾಚಿದೇವರು ನೇರ ನುಡಿಯ ವ್ಯಕ್ತಿತ್ವವನ್ನು ಹೊಂದಿದವರು. ಅವರ ವಚನಗಳು ಮನುಕುಲಕ್ಕೆ ದಾರಿದೀಪವಾಗಿವೆ’ ಎಂದು ತಿಳಿಸಿದರು.

ಪ್ರಾಚಾರ್ಯ ಎಸ್.ಕೆ. ಚುರ್ಚಿಹಾಳಮಠ ಮಾತನಾಡಿ, ‘ಶರಣರು ನಡೆ, ನುಡಿ ಹಾಗೂ ವಚನಗಳಿಂದ ಸಮಾಜದಲ್ಲಿನ ಜಾತಿ ಅಸಮಾನತೆಯನ್ನು ಹೊಗಲಾಡಿಸಿ ಮಾನವೀಯ ಧರ್ಮ ಸ್ಥಾಪಿಸಿದರು’ ಎಂದು ಹೇಳಿದರು.

ಶೈಲಜಾ ಕಲ್ಮಠ ಸ್ವಾಗತಿಸಿದರು. ಮಲ್ಲಮ್ಮ ಕಾರ್ಯಕ್ರಮ ನಿರೂಪಿಸಿದರು. ಸೋಮರಡ್ಡಿ ಬಸಾಪೂರ ವಂದಿಸಿದರು. ಉಪನ್ಯಾಸಕರಾದ ಜಿ.ಸಿ. ಜೀವಣ್ಣವರ, ವಿನಯ ಗುಜ್ಜಟ್ಟಿ, ಬಸವರಾಜ ಉಮಚಗಿ, ಶ್ರುತಿ ಅಂಗಡಿ, ಶೈಲಜಾ ಕಲ್ಮಠ, ವೀರಣ್ಣ ಮಡಿವಾಳರ, ಶಂಕ್ರಮ್ಮ ಮಡಿವಾಳರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-23-2111256739

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.