ಮೈಸೂರು: ‘ಕನ್ನಡ ವಿಜ್ಞಾನ ಸಾಹಿತ್ಯ ಬೆಳೆಯಬೇಕೆಂದು ಲೇಖಕ ಬಿಜಿಎಲ್ ಸ್ವಾಮಿ ಐದು ದಶಕದ ಹಿಂದೆಯೇ ಹೇಳಿದ್ದರು. ಅದು ಕನಸಾಗಿಯೇ ಉಳಿದಿದೆ’ ಎಂದು ವಿಜ್ಞಾನ ಲೇಖಕ ಕೊಳ್ಳೇಗಾಲ ಶರ್ಮ ಅಭಿಪ್ರಾಯಪಟ್ಟರು.

ಕೃಷ್ಣಮೂರ್ತಿಪುರಂನ ಬಿಜಿಎಸ್ ವಿದ್ಯೋದಯ ಶಾಲೆ ಸಭಾಂಗಣದಲ್ಲಿ ಭಾನುವಾರ ‘ಡಿವಿಜಿ ಬಳಗ ಪ್ರತಿಷ್ಠಾನ’ವು ನೀಡಿದ ಬಿಜಿಎಲ್ ಸ್ವಾಮಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಕನ್ನಡದಲ್ಲಿ ವಿಜ್ಞಾನ ಸಾಹಿತ್ಯ ಹೆಚ್ಚಬೇಕು. ವಿಜ್ಞಾನಿಗಳೇ ಬರೆದರೆ ಚೆನ್ನ. ಬೇರೆಯವರೂ ವಿಜ್ಞಾನ ಕಲಿತು ಆಸಕ್ತಿಕರವಾಗಿ ಬರೆಯುವಂತೆ ತರಬೇತಿ ಕೊಡುವುದು ಅತ್ಯಗತ್ಯವೆಂದು ಬಿಜಿಎಲ್ ಸ್ವಾಮಿ ಹೇಳಿದ್ದರು’ ಎಂದರು.

‘ಐವತ್ತು ವರ್ಷಗಳ ನಂತರವೂ ಅದೇ ಮಾತನ್ನು ಈಗ ಹೇಳಬೇಕಿದೆ. ಆ ಮಟ್ಟಿಗೆ ಈ ಕ್ಷೇತ್ರವನ್ನು ಎಲ್ಲರೂ ಮರೆತಿದ್ದಾರೆ. ಸರ್ಕಾರವಲ್ಲದೆ ಖಾಸಗಿ ಉದ್ಯಮಗಳು, ಸಂಸ್ಥೆಗಳು ವಿಜ್ಞಾನ ಸಂವಹನ, ಸಾಹಿತ್ಯದತ್ತ ಗಮನ ಹರಿಸಬೇಕಿದೆ’ ಎಂದು ಹೇಳಿದರು.

ಡಿವಿಜಿ ಪ್ರಶಸ್ತಿ ಸ್ವೀಕರಿಸಿದ ‘ಮಂಕುತಿಮ್ಮನ ಕಗ್ಗ’ ಕೃತಿಯ ಇಂಗ್ಲಿಷ್ ಅನುವಾದಕ ಕೆ.ನಟರಾಜನ್ ಮಾತನಾಡಿ, ‘ಕರ್ಮದ ಹಾದಿಯಲ್ಲಿ ಸಾಗಿದರೆ ಅದೇ ಧರ್ಮವಾಗುತ್ತದೆ. ಆಡಂಬರವಿಲ್ಲದ ಸರಳತೆಯೇ ಕರ್ಮದ ಪರಿಕಲ್ಪನೆ. ಯಾವುದೇ ಅಪೇಕ್ಷೆಯಿರದೆ ಪ್ರಾಮಾಣಿಕವಾಗಿ ದುಡಿಯಬೇಕು’ ಎಂದರು.

‘ನನ್ನ ಬರಹಕ್ಕೆ ತಾತ ಡಿ.ವಿ.ಗುಂಡಪ್ಪ ಅವರೇ ಪ್ರೇರಣೆ. ಷೇಕ್ಸ್ಪಿಯರ್ನ ಕೃತಿಗಳನ್ನು ಕೈಗಿಟ್ಟು ಓದಿಸಲು ಉತ್ತೇಜನ ನೀಡಿದ್ದರು’ ಎಂದು ಸ್ಮರಿಸಿದರು. ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಕೇಂದ್ರದ ಅಧ್ಯಕ್ಷ ಸ್ವಾಮಿ ಮಂಗಳನಾಥಾನಂದ, ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಲಹೆಗಾರ ಎಂ.ಆರ್.ಸೀತಾರಾಂ, ಡಿವಿಜಿ ಬಳಗ ಪ್ರತಿಷ್ಠಾನದ ಸಂಸ್ಥಾಪಕ ಸಿ.ಕನಕರಾಜು, ಎಸ್.ಟಿ.ರಾಧಾಕೃಷ್ಣ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-39-1827687107

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.