ನಂಜನಗೂಡು: ‘ಪರಸ್ಪರ ದ್ವೇಷ, ಅಸೂಯೆ, ಅಪನಂಬಿಕೆ, ಯುದ್ಧದಿಂದ ಹೊತ್ತಿ ಉರಿಯುತ್ತಿರುವ ಜಗತ್ತು ಶಾಂತಿಯಿಂದ ಬಾಳಬೇಕಾದರೆ ಗಾಂಧೀಜಿಯ ತತ್ವ, ಆದರ್ಶಗಳು ಅನಿವಾರ್ಯ’ ಎಂದು ಅರಸೀಕೆರೆ ಕಸ್ತೂರ್ಬಾ ಗಾಂಧಿ ಆಶ್ರಮದ ಕಾರ್ಯ ದರ್ಶಿ ಪ್ರೊ.ಜಿ.ಬಿ.ಶಿವರಾಜು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಬುಧವಾರ ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಬಹುತ್ವ ಭಾರತ– ಗಾಂಧೀಜಿ ವಿಚಾರಧಾರೆ’ ವಿಚಾರ ಸಂಕಿರಣ ಸಮಾರೋಪದಲ್ಲಿ ಮಾತನಾಡಿದರು.

‘ಗಾಂಧಿಜೀಯ ಸತ್ಯ, ಅಹಿಂಸೆ ತತ್ವ, ಆದರ್ಶಗಳು ಉಳಿಯದಿದ್ದರೆ ಜಗತ್ತು ಉಳಿಯುವುದಾದರೂ ಹೇಗೆ ?. ಮನುಷ್ಯತ್ವ ಅಸ್ತಿತ್ವದಲ್ಲಿರುವವಗೆ ಗಾಂಧೀಜಿ ಪ್ರಸ್ತುತರಾಗಿರುತ್ತಾರೆ, ಇಂದಿನ ತಲೆಮಾರಿಗೆ ಗಾಂಧಿಯ ವಿಚಾರಧಾರೆ ತಲುಪಿಸಬೇಕು, ಇಲ್ಲದಿದ್ದರೆ ಯುವಜನತೆ ದಾರಿ ತಪ್ಪುತ್ತಾರೆ’ ಎಂದು ಹೇಳಿದರು.

ಪ್ರಗತಿಪರ ಚಿಂತಕ ಕೆ.ವೆಂಕಟರಾಜು ಮಾತನಾಡಿ, ‘ಅಂಬೇಡ್ಕರ್ ಅವರ ಕಾರ್ಮಿಕ ಹಾಗೂ ಮಹಿಳೆಯರ ಪರ ನಿಲುವು, ತಂದ ಸುಧಾರಣೆಗಳು ಸಂವಿಧಾನದಲ್ಲಿ ಅಡಕವಾಗಲು ಗಾಂಧಿಜೀ ನಡೆಸಿದ ಹೋರಾಟಗಳೂ ಕಾರಣ. ವಿದ್ಯಾರ್ಥಿಗಳು ಗಾಂಧೀಜೀ ಯವರ ‘ನನ್ನ ಸತ್ಯಾನ್ವೇಷಣೆ’, ‘ಹಿಂದ್ ಸ್ವರಾಜ್’ ಕೃತಿಗಳ ಓದಬೇಕು’ ಎಂದರು.

ಕಾರ್ಯಕ್ರಮದಲ್ಲಿ ವಿಚಾರಸಂಕಿರಣದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಮಾನಸಗಂಗೋತ್ರಿ ಗಾಂಧಿ ಅಧ್ಯಯನ ಕೇಂದ್ರ ನಿರ್ದೇಶಕ ಎಸ್.ನರೇಂದ್ರ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಬಿ.ಎಂ.ನಾಗೇಶ್ ರಾಜ್, ಪ್ರಾಂಶುಪಾಲ ಪ್ರೊ.ಬಿ.ಕೆ.ಕೇಂಪೇಗೌಡ, ಪ್ರೊ.ಶಿವಸ್ವಾಮಿ, ಎಂ.ಡಿ.ಉಮೇಶ್, ಎನ್.ಎಸ್.ಮಹದೇವ ಪ್ರಸಾದ್, ಪ್ರೊ.ಈಶಪ್ಪ, ಪ್ರೊ.ಕೆಂಪಮ್ಮ, ಜಿ.ಆರ್.ಮಂಜುನಾಥ್, ಶಿವಪ್ರಸಾದ ಪಟ್ಟಣಗೆರೆ, ಎಂ.ಸಿ.ನರೇಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-38-1429111612

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.