ಮಂಗಳವಾರ, 9 ಜೂನ್ 2026
×
ADVERTISEMENT

ದಾಂಪತ್ಯವೋ ಸಾಂಗತ್ಯವೋ

Published : 18 ಮೇ 2026, 12:00 IST
Last Updated : 18 ಮೇ 2026, 12:00 IST
ADVERTISEMENT
ಫಾಲೋ ಮಾಡಿ
Comments
ಬೇರೆ ಯಾವುದೇ ಸಂಬಂಧಗಳಿಲ್ಲ ಎಂದು ಅವರು ಸುಳ್ಳು ಹೇಳಿದರೆ!! ಎನ್ನುವ ಮಾತು ಬರುವುದು ಸಹಜ, ಆದರೆ ವಿವಾಹದ ಮುದ್ರೆ ನೀಡುವ ಅವಕಾಶಗಳನ್ನು ತಪ್ಪು ದಾರಿಯಲ್ಲಿ ಬಳಸಿಕೊಳ್ಳಲು ಬಾರದ ತಡೆಗಳಿಗೆ ಇದು ಸಹಕಾರಿಯಾಗಬಲ್ಲದು. ಅಲ್ಲದೇ, ಈಗಾಗಲೇ ವಿವಾಹವಾಗಿ ಅಥವಾ ಬೇರೊಂದು ಸಂಬಂಧದಲ್ಲಿದ್ದು, ಅದನ್ನು ಮರೆಮಾಚಿ ಮತ್ತೊಂದು ಸಹಜೀವನವನ್ನು ‘ಶಾಶ್ವತ ಸಂಬಂಧ’ ಎಂದು ಘೋಷಿಸಿಕೊಂಡು ‘ವಿವಾಹಿತ’ ಮುದ್ರೆ ಪಡೆದು, ಮೊದಲ ಸಂಗಾತಿಗೆ ಮಾಡುವ ದ್ರೋಹಗಳನ್ನೂ ಗುರುತಿಸಬಹುದು.
–ಧನಂಜಯ್ ಎನ್‌., ಪ್ರಕಾಶಕ
ಆಯ್ಕೆಯ ಮೇಲೆ ಹೇರಿಕೆ ಸಲ್ಲ
ಲಿವ್‌-ಇನ್ ಎನ್ನುವುದು ಸಂಪೂರ್ಣ ವೈಯಕ್ತಿಕ ಆಯ್ಕೆ. ಮದುವೆ ಎನ್ನುವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದವರು ಸಹಜೀವನವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂಥ ಅಪರೂಪ ಎನಿಸುವ ಆಯ್ಕೆಯ ಮೇಲೂ ಕಾನೂನಿನ ವ್ಯಾಖ್ಯಾನ ಹೇರುವುದು ಸರಿ ಎನಿಸುವುದಿಲ್ಲ. ‘ರಕ್ಷಣೆ’ಯ ಹೆಸರಿನಲ್ಲಿ ಸಂಬಂಧಗಳನ್ನು ಮರುವ್ಯಾಖ್ಯಾನ ಮಾಡುವುದು ಒಂದು ರೀತಿಯಲ್ಲಿ ಸ್ವಾತಂತ್ರ್ಯಕ್ಕೆ ಮಾಡುವ ಧಕ್ಕೆಯೇ ಆಗುತ್ತದೆ. ಸರ್ಕಾರದ ಈ ಆಲೋಚನೆ ಸಹಜೀವನವೆಂಬುದು ಇನ್ನೊಂದು ‘ಮದುವೆ’ ಎನ್ನುವ ಅರ್ಥವನ್ನು ನೀಡುವಂತಿದೆ. ಮುಂದುವರಿದಂತೆ ಸಹಜೀವನವೆಂಬುದು ಒಂದು ಬಂಧನದ ಚೌಕಟ್ಟಾಗಬಹುದು. ಇದು ತನ್ನ ಸ್ವತ್ತು ಎನ್ನುವ ಪರಿಭಾಷೆಯೂ ಹುಟ್ಟಿಕೊಳ್ಳಬಹುದು. ಸಹಜವಾದ ಬದುಕಿನ ಆವರಣಕ್ಕೆ ಈ ಆಲೋಚನೆ ಕಾನೂನಿನ ಒತ್ತಡದಂತೆ ನನಗೆ ಭಾಸವಾಗುತ್ತಿದೆ.
ಸಹಜೀವನದ ವಿಚಾರದಲ್ಲಿ ಕೇಂದ್ರ ಸರ್ಕಾರದ ಆಲೋಚನಾ ಕ್ರಮ ದೇಶದ ಸಂಪ್ರದಾಯವಾದೀ ಮನಸ್ಸುಗಳನ್ನು ಸಮಾಧಾನಗೊಳಿಸುವ ಒಂದು ತಂತ್ರವಾಗಿಯೂ ನನಗೆ ಕಾಣುತ್ತಿದೆ. ವಿವಿಧ ನಂಬಿಕೆಗಳಿರುವ ಜನರು ಪರಸ್ಪರ ಗೌರವದಿಂದ ಬದುಕಿದಾಗ ಮಾತ್ರ ಆರೋಗ್ಯಕರ ಸಮಾಜವನ್ನು ರೂಪಿಸಬಹುದು. ನಮ್ಮ ಸಂವಿಧಾನದ ಉದ್ದೇಶವೂ ಇದೇ ಅಲ್ಲವೇ?
–ನವ್ಯಾ ಕಡಮೆ, ಸಿನಿಮಾಟೋಗ್ರಾಫರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT