ಕೆಲವರನ್ನು ನೋಡಿ. ಅವರು ಯಾರನ್ನೂ ನಂಬುವುದಿಲ್ಲ. ಹತ್ತಿರದ ಬಂಧುಗಳಿಂದ ಹಿಡಿದು, ಮಡದಿ, ಮಕ್ಕಳು, ಸ್ನೇಹಿತರನ್ನು ಸಹ ನಂಬುವುದಿಲ್ಲ. ಎಲ್ಲರಲ್ಲೂ ಏನಾದರೂ ಒಂದು ಕೊರತೆ ಕಂಡುಹಿಡಿದು ಅದನ್ನೇ ಎತ್ತಿ ಆಡುತ್ತಿರುತ್ತಾರೆ. ‘ಅವರು ಹಾಗೆ’,‘ಅವರು ಹೀಗೆ’ಎಂದು ಕಾಮೆಂಟ್ ಮಾಡುತ್ತಿರುತ್ತಾರೆ. ಎಷ್ಟೇ ಹತ್ತಿರದವರನ್ನೂ ಸಹ ಅವರು ಹತ್ತಿರ ಬಿಟ್ಟುಕೊಳ್ಳುವುದಿಲ್ಲ.

ಅವರ ಈ ಸ್ವಭಾವಕ್ಕೆ ಕಾರಣಗಳು ಏನೇ ಇರಬಹುದು. ದೊಡ್ಡವರನ್ನು ನೋಡಿ ಅನುಕರಿಸಿರುವುದೂ ಕಾರಣವಿರಬಹುದು. ಯಾರನ್ನೂ ನಂಬದ ಅವರ ತಾಯಿಯ ಗಾಢವಾದ ಪ್ರಭಾವವೂ ಇರಬಹುದು. ಹೌದು, ಮನಃಶಾಸಜ್ಞರ ಪ್ರಕಾರ, ಇಂತಹ ಸ್ವಭಾವಕ್ಕೆ ತಾಯಿಯೂ ಮಕ್ಕಳ ಮೇಲೆ ತುಂಬ ಪ್ರಭಾವ ಬೀರುತ್ತಾಳೆ. ಕೆಲವು ಅಮ್ಮಂದಿರನ್ನು ನೋಡಿ, ಅದರಲ್ಲೂ ಒಟ್ಟು (ಅವಿಭಜಿತ) ಕುಟುಂಬದಿಂದ ಬಂದ ಅಮ್ಮಂದಿರು, ‘ಆ ಹಿರಿಯರು ಹಾಗೆ ಮಾಡಿದ್ದರು’, ‘ಇವರು ಹೀಗೆ ಮಾಡಿದ್ದರು’ ಎಂದು ಮಕ್ಕಳೆದುರು ಹಳಿಯುತ್ತಲೇ ಇರುತ್ತಾರೆ. ಅವರು ಅನುಭವಿಸಿರುವ ಕಷ್ಟವನ್ನು ಅವರು ಹೇಳಿಕೊಳ್ಳುತ್ತಿದ್ದಿರಬಹುದು. ಆದರೆ, ಅದು ಮಕ್ಕಳ ಮೇಲೆ ಬೀರುವ ಪರಿಣಾಮ ಅಗಾಧ. ಹಾಗೆ ಹೇಳುತ್ತಿದ್ದರೆ ಮಕ್ಕಳು ಮನೆಯ ಹಿರಿಯರನ್ನು, ಅದರಲ್ಲೂ ಅಮ್ಮ ಕಷ್ಟ ಅನುಭವಿಸುವಂತೆ ಮಾಡಿರುವವರನ್ನು ಕ್ಷಮಿಸುವುದೇ ಇಲ್ಲ. ಒಂದು ರೀತಿಯ ಪೂರ್ವಾಗ್ರಹದಲ್ಲೇ ಬೆಳೆಯುತ್ತಾರೆ. ಆ ಹಿರಿಯರು ಅವರ ತಾಯಿಗೆ ಏನೋ ಮಾತು ಹೇಳಿರಲೂಬಹುದು, ಅದು ಬೇರೆ ವಿಚಾರ.

ಆಗಿ ಹೋದ ಘಟನೆಗಳನ್ನೇ ಮೆಲುಕು ಹಾಕುತ್ತಿರುವುದು ಸುಂದರ ಭವಿಷ್ಯಕ್ಕೆ ಒಳ್ಳೆಯದೇನೂ ಅಲ್ಲ. ಹಳೆಯದನ್ನೇ ಸಾಸುತ್ತಿರುವುದರಿಂದ ಯಾವುದೇ ಪ್ರಯೋಜನವೂ ಇಲ್ಲ. ಅಷ್ಟಕ್ಕೂ ಅವರು ‘ಎಲ್ಲರೂ ಮನುಷ್ಯರು’ ಎಂಬ ಸರಳ ಸತ್ಯವನ್ನು ಅರಿಯುವುದೇ ಇಲ್ಲ.

‘ಎಲ್ಲರಲ್ಲೂ ಏನಾದರೊಂದು ಕೊರತೆ ಇದ್ದೇ ಇರುತ್ತದೆ, ಅದರಾಚೆಯೂ ಅವರು ನಮ್ಮವರು’ ಎಂದುಕೊಳ್ಳುವುದೇ ಇಲ್ಲ. ಎಂತಹ ಮೇಧಾವಿಯೇ ಆಗಲೀ, ಎಷ್ಟೇ ಜನಪ್ರಿಯ ವ್ಯಕ್ತಿಯಾಗಿರಲಿ, ಮನುಷ್ಯ ಎಂದ ಮೇಲೆ ಅವರೊಳಗೆ ಏನಾದರೊಂದು ಕೊರತೆ, ಬೇರೆಯವರಿಗೆ ಇಷ್ಟವಾಗದೇ ಇರುವ ಸ್ವಭಾವ ಇದ್ದೇ ಇರುತ್ತದೆ. ಅದನ್ನೇ ದೊಡ್ಡದು ಮಾಡಿಕೊಂಡು ಅವರನ್ನು ದೂರ ಮಾಡಿದರೆ, ಆಗುವ ನಷ್ಟ ನಮಗೇ.

ಅಷ್ಟಕ್ಕೂ ನಾವು ಎಲ್ಲದರಲ್ಲೂ ತುಂಬ ಪರ್ಫೆಕ್ಟ್ ಆಗಿದ್ದೇವಾ? ಯಾರೊಬ್ಬರೂ ಬೊಟ್ಟು ಮಾಡಿ ತೋರಿಸದಂತೆ ಬದುಕು ರೂಪಿಸಿಕೊಂಡಿದ್ದೇವಾ? ಯಾರೊಬ್ಬರಿಗೂ ಬೇಸರವಾಗದಂತೆ ಬದುಕಿದ್ದೇವಾ? ಎಂಬುದನ್ನು ಮೊದಲು ಕೇಳಿಕೊಳ್ಳಬೇಕು. ಅಲ್ಲದೇ ಎಲ್ಲರನ್ನೂ ಮೆಚ್ಚಿಸುತ್ತ ಬದುಕುವುದು ಸಾಧ್ಯವೂ ಇಲ್ಲ. ಆಗ ಜೀವನದ ಸರಳ ಗುಟ್ಟುಗಳು ಒಂದರ ಹಿಂದೆ ಒಂದರಂತೆ ಬಿಚ್ಚಿಕೊಳ್ಳುತ್ತ ಹೋಗುತ್ತವೆ.
.ಪಿವಿ ವೈಬ್ಸ್: ಸಿಕ್ಕಸಿಕ್ಕವರ ಬಳಿ ನಿಮ್ಮ ಗೋಳು ಹೇಳೋದು ನಿಲ್ಸಿ.ಪಿವಿ ವೈಬ್ಸ್: ಒಮ್ಮೆ ನೀವು ನಂಬಿ ನೋಡಿ, ಅದರ ಕತೇನೇ ಬೇರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.