ಸಂಬಂಧವೊಂದು ಗಟ್ಟಿಯಾಗಿ ಉಳಿಯಬೇಕಾದರೆ ಏನು ಮಾಡಬೇಕು ಎಂಬ ಪ್ರಶ್ನೆ ಒಮ್ಮೆಯಾದರೂ ಎಲ್ಲರಲ್ಲೂ ಮೂಡುವುದು ಸಹಜ. ಏಕೆಂದರೆ, ಸಂಬಂಧಗಳ ಅಸ್ತಿತ್ವವೇ ವಿಚಿತ್ರ. ಅದು ವಿಸ್ಮಯವೂ ಹೌದು. ಅದಕ್ಕೆ ಜಾತಿ, ಲಿಂಗ, ವಯಸ್ಸಿನ ಬೇಧವಿಲ್ಲ.

ಅದಿರಲಿ, ಅಂತಹ ಸಂಬಂಧ ಗಟ್ಟಿಯಾಗಿ, ಯಾವ ಸಮಯ, ಸಂದರ್ಭಗಳಲ್ಲೂ ಸೋಲದೇ ಉಳಿಯಬೇಕಾದರೆ ಮೂಲಾಧಾರವಾಗಿರಬೇಕಾಗಿದ್ದುದು ನಂಬಿಕೆ. ನಿಮಗೆ ನಿಮ್ಮ ಸ್ನೇಹಿತರಲ್ಲಿ ನಂಬಿಕೆಯೇ ಇಲ್ಲವಾದರೆ, ಬೇರೆ ಏನು ಸಹಾಯ ಮಾಡಿದರೂ ಹೆಚ್ಚು ಕಾಲ ಉಳಿಯಲಾರದು. ಕಷ್ಟಕಾಲದಲ್ಲಿ ಹಣಕಾಸು ಸಹಾಯವೂ ಪ್ರಮುಖವಾಗಬಹುದು. ಆದರೆ, ಸ್ನೇಹಿತರಲ್ಲಿ ಹಣಕಾಸು ವ್ಯವಹಾರ ಸುಳಿದರೆ ಸಂಬಂಧವೇ ಹಾಳಾಗುವ ಎಷ್ಟೋ ಪ್ರಕರಣಗಳನ್ನು ನಿತ್ಯ ನಾವು ನೋಡುತ್ತೇವೆ. ಹೀಗಾಗಿ ಅಲ್ಲೂ ನಂಬಿಕೆ ಮುಖ್ಯ ಪಾತ್ರ ವಹಿಸುತ್ತದೆ. ಸ್ನೇಹಿತ ಕಷ್ಟಕ್ಕೂ ಆಗಬೇಕು, ಸುಖಕ್ಕೂ ಇರಬೇಕು ಎಂದಾದರೆ, ಅಲ್ಲಿ ಭದ್ರವಾದ ನಂಬಿಕೆಯ ಬುನಾದಿ ಇರಬೇಕು. ಅದರಲ್ಲೂ ಕುಟುಂಬವನ್ನು ಒಳಗೊಂಡು ಸ್ನೇಹ ಕಾಪಾಡುವುದಿದೆಯಲ್ಲ? ಅಲ್ಲಂತೂ ನಂಬಿಕೆಯೇ ಸಂಬಂಧವನ್ನು ಕಾಪಿಸುವ ಶಕ್ತಿ. ಅಷ್ಟೇ ಏಕೆ? ಒಬ್ಬ ಬಾಸ್ ತನ್ನ ಸಹೋದ್ಯೋಗಿಗಳನ್ನು ಅಥವಾ ಕೈ ಕೆಳಗಿನ ಉದ್ಯೋಗಿಗಳನ್ನು ನಂಬದೇ ಹೋದರೆ ಉತ್ತಮ ಬಾಸ್ ಎನಿಸಿಕೊಳ್ಳಲು ಸಾಧ್ಯವೇ ಇಲ್ಲ.

ಎಲ್ಲರನ್ನೂ ಅನುಮಾನಿಸುವುದು ಬೇರೆ. ನಂಬದೇ ಇರುವುದು ಬೇರೆ. ಬಾಸ್ ನಮ್ಮನ್ನು ನಂಬುತ್ತಿಲ್ಲ ಎಂಬುದು ಅವರಿಗೆ ಗೊತ್ತಾದರೆ, ಕಚೇರಿ ಕೆಲಸವನ್ನು ಅವರು ರಿಸ್ಕ್ ತೆಗೆದುಕೊಂಡು ಮಾಡಲು ಮುಂದಾಗುವುದಿಲ್ಲ. ಇದು ಮನುಷ್ಯ ಸಹಜ ಗುಣ. ಏಕೆಂದರೆ, ನೀವೇ ಗಮನಿಸಿ. ‘ಇವರು ನಮ್ಮನ್ನು ನಂಬುತ್ತಿದ್ದಾರೆ’ ಎಂಬುದು ಅರಿವಿಗೆ ಬಂದರೆ, ಹೆಚ್ಚು ಕೇರ್ಫುಲ್ ಆಗಿ ಕೆಲಸ ಮಾಡುತ್ತೇವೆ. ಕಾಳಜಿಯಿಂದ, ಶ್ರದ್ಧೆಯಿಂದ ಆ ಸಂಬಂಧವನ್ನು ಉಳಿಸಿಕೊಳ್ಳಲು ಆಸಕ್ತಿ ತೋರುತ್ತೇವಲ್ಲವೇ? ಆಗಲೇ ನಮ್ಮ ಸುತ್ತಲ ಪ್ರಪಂಚ ತುಂಬ ಸುಂದರವಾಗುತ್ತದೆ. ನಾವೂ ಅಲ್ಲಿ ಸಂತಸದಿಂದ ಇರಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.