ಅದ್ಯಾವುದೋ ಘಳಿಗೆಯಲ್ಲಿ ಅಂತಹದ್ದೊಂದು ಮಾತು ಬಾಯಿ ತಪ್ಪಿ ಬಂದಿರುತ್ತದೆ. ವಾದ ಮಾಡುವ ಭರದಲ್ಲಿ ತೀರ ಖಾಸಗಿ ವಿಚಾರಕ್ಕೆ ತಲೆಹಾಕುವ ಜಾಯಮಾನದವರು ನಾವಲ್ಲವಾದರೂ ಯಾವುದೋ ಮೈಮರೆವಿನಿಂದ ಆ ಮಾತನ್ನು ಆಡಿಬಿಡುತ್ತೇವೆ. ಅದರ ಪರಿಣಾಮದ ಬಗ್ಗೆ ಆ ಕ್ಷಣ ಯೋಚಿಸುವುದೇ ಇಲ್ಲ.

ಹಾಗೆಯೇ ಮಾಡುವ ಎಲ್ಲ ತಪ್ಪುಗಳ ಬಗ್ಗೆಯೂ ಇದು ಅನ್ವಯ. ಕೆಲವೊಮ್ಮೆ ಅರಿವೆ ಬಂದೋ ಬಾರದೆಯೋ ನಾವು ತಪ್ಪು ಮಾಡುತ್ತೇವೆ, ತಪ್ಪಾಗಿ ಮಾತಾಡುತ್ತೇವೆ. ತಪ್ಪು ಎಂದು ಗೊತ್ತಿದ್ದೂ ಮಾಡುವವರ ಸಂಖ್ಯೆ ಬಹುತೇಕ ಸಂದರ್ಭದಲ್ಲಿ ಕಡಿಮೆಯೇ ಇರುತ್ತದೆ. ಆದರೆ ಅದು ತಪ್ಪು ಎಂದು ಗೊತ್ತಾದ ಬಳಿಕವೂ ಅದನ್ನು ಒಪ್ಪಿಕೊಳ್ಳುವವರ ಸಂಖ್ಯೆಯಂತೂ ಇಲ್ಲವೇ ಇಲ್ಲವೆಂಬಷ್ಟರ ಮಟ್ಟಿಗಿದೆ. ತಪ್ಪನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ನಾವು ಇನ್ನೂ ಚಿಕ್ಕವರಾಗುತ್ತ ಸಾಗುತ್ತೇವೆ. ನೋಡಿ ಬೇಕಿದ್ದರೆ, ನೀವು ಯಾರದ್ದೋ ತಪ್ಪನ್ನು ತೋರಿಸಿದಾಕ್ಷಣ, ಆ ಮನುಷ್ಯ ’ ಅಯ್ಯೋ ಇದೇನು ಮಹಾ, ಅವರೆಲ್ಲ ಎಂತೆಂಥಾ ತಪ್ಪು ಮಾಡುತ್ತಾರೆ ಗೊತ್ತಾ?’ ಎಂದು ತಮ್ಮ ತಪ್ಪನ್ನು ಮರೆಮಾಚಲು ಯತ್ನಿಸಲಾರಂಭಿಸುತ್ತಾನೆ. ಇನ್ನು ಕೆಲವರು, ಏನೇನೋ ಕಥೆಯನ್ನು ಹೇಳತ್ತಾ, ವ್ಯವಸ್ಥೆಯಲ್ಲಿನ ದೋಷಗಳನ್ನೆಲ್ಲ ಪಟ್ಟಿ ಮಾಡುತ್ತಾ. ‘ವ್ಯವಸ್ಥೆಯೇ ಇಷ್ಟು ಗಬ್ಬೆದ್ದು ಹೋಗಿರುವಾಗ ನಾನೇನು ಮಹಾ’ ಎಂಬಂತೆ ಪೋಸುಕೊಟ್ಟು ಮುಂದಕ್ಕೆ ಹೋಗುತ್ತಾರೆ. ಇನ್ನೂ ಕೆಲವರು, ‘ಅಯ್ಯೋ, ನಾನಾಗಿದ್ದಕ್ಕೆ ಇಷ್ಟೇ ಆಗಿದೆ, ಬೇರೆಯವರಾಗಿದ್ದರೆ ಏನೆಲ್ಲ ಆಗ್ತಿತ್ತು ಗೊತ್ತಾ?’ ಎಂದು ತಮ್ಮ ತಪ್ಪು ತೀರಾ ಕ್ಷುಲ್ಲಕ ಎಂದು ತೋರಿಸಲು ಯತ್ನಿಸುತ್ತಾರೆ. ಇನ್ನೂ ಅಪಾಯಕಾರಿಯೆಂದರೆ, ಈ ತಪ್ಪನ್ನು ಎತ್ತಿ ತೋರಿಸಿದ್ದರ ಹಿಂದೆ, ಅವರ ಕೈವಾಡ ಇದೆ, ಇವರ ಪಿತೂರಿ ಇದೆ. ಉದ್ದೇಶಪೂರ್ವಕವಾಗಿಯೇ ನನ್ನನ್ನು ಹಣಿಯಲೆಂದೇ ಇಂಥ ತಂತ್ರ ಹೂಡಲಾಗಿದೆ... ಎಂದೆಲ್ಲ ವ್ಯಾಖ್ಯಾನಿಸುವುದು.
.ಪಿವಿ ವೈಬ್ಸ್: ನಿಮ್ಮ ಮಕ್ಕಳು ಯಾರನ್ನೂ ನಂಬುತ್ತಿಲ್ಲವೇ? ನೀವೇ ಕಾರಣ ಇರಬಹುದು!.ಪಿವಿ ವೈಬ್ಸ್: ಒಮ್ಮೆ ನೀವು ನಂಬಿ ನೋಡಿ, ಅದರ ಕತೇನೇ ಬೇರೆ.
ಇನ್ನೂ ಮುಂದಕ್ಕೆ ಹೋಗಿ‘ ನೀವೇನು ಸುಭಗರಾ, ನೀವು ಮಾಡಿದ್ದೆಲ್ಲ ಸರಿಯಾ, ಸುಮ್ಮನಿರಿ. ನಿಮ್ಮ ಬಗ್ಗೆ ಎಲ್ಲಾ ಗೊತ್ತು’ ಎಂಬ ದಾರ್ಷ್ಟ್ಯವನ್ನು ತೋರುವವರಿಗೇನೂ ಕಡಿಮೆ ಇಲ್ಲ. ಆ ಮಾತು ಉಂಟುಮಾಡುವ ಪರಿಣಾಮ ಅಷ್ಟಿಷ್ಟಲ್ಲ. ಇನ್ಯಾವತ್ತೂ ಅವರು ನಮ್ಮನ್ನು ಕ್ಷಮಿಸುವುದಿಲ್ಲ. ಆರೋಗ್ಯಕರವಾಗಿದ್ದ ಸಂಬಂಧ ಅದೊಂದೇ ಮಾತಿನಿಂದ ಹದಗೆಟ್ಟುಹೋಗಿರುತ್ತದೆ. ನಮ್ಮೊಂದಿಗೆ ವಾದಕ್ಕಿಳಿಯುವುದು ಕೊಚ್ಚೆ ಮೇಲೆ ಕಲ್ಲು ಹಾಕಿದಂತೆ ಎಂದು ಅವರು ನಿರ್ಧಾರ ಮಾಡಿಬಿಡುತ್ತಾರೆ. ಆನಂತರ ನಮ್ಮ ತಪ್ಪಿನ ಅರಿವು ನಮಗಾಗಿರಬಹುದು. ಪಶ್ಚಾತ್ತಾಪ ಪಟ್ಟಿರಲೂಬಹುದು. ಆದರೆ, ಕ್ಷಮಾಪಣೆ ಕೇಳಲು ಅಹಂ ಅಡ್ಡಬರುತ್ತದೆ.

‘ಸಾರಿ’ ಎಂದು ಕೇಳಿದರೆ ಚಿಕ್ಕವರಾಗಿಬಿಡುತ್ತೇವೆ ಎಂಬ ಭಯ ನಮ್ಮಲ್ಲಿರುತ್ತದೆ. ಅದೊಂದು ಸಂಬಂಧ ಹಗುರಾದರೆ ಏನೀಗ ಎಂಬ ಅಸಡ್ಡೆಯೂ ಮೂಡಬಹುದು. ಆದರೆ, ಒಂದು ಬಾರಿ ಯೋಚಿಸಿ. ಅವರು ನಿಮ್ಮ ಎಷ್ಟೆಲ್ಲ ಕಷ್ಟಕಾಲದಲ್ಲಿ ಜತೆಯಾಗಿದ್ದಾರೆ. ಎಲ್ಲ ಸಮಯದಲ್ಲೂ ಅವರು ಹಣಕಾಸು ಸಹಾಯ ನೀಡದೇ ಇರಬಹುದು. ಆದರೆ, ಮಾನಸಿಕವಾಗಿ ನಿಮ್ಮನ್ನು ಯಾವಾಗಲೂ ಒಂಟಿಯನ್ನಾಗಿ ಮಾಡಿಲ್ಲ.

ಅಲ್ಲದೇ ಸಾರಿ ಕೇಳಿದರೆ ಚಿಕ್ಕವರಾಗಿಬಿಡುತ್ತೇವೆ ಎನ್ನುವುದೇ ದೊಡ್ಡ ಸುಳ್ಳು. ನಿಜವೆಂದರೆ, ಅದರಿಂದ ಇನ್ನಷ್ಟು ದೊಡ್ಡವರಾಗುತ್ತೇವೆ. ಅವರೂ ಖಂಡಿತ ನಮ್ಮನ್ನು ಕ್ಷಮಿಸುತ್ತಾರೆ. ಹಾಗೆ ಸ್ನೇಹ ಉಳಿಸಿಕೊಳ್ಳುವ ದೊಡ್ಡತನವನ್ನೂ ನಾವು ತೋರಬೇಕು. ಅವರು ಕ್ಷಮಿಸಲಿ, ಬಿಡಲಿ. ನಾವಂತು ಹಗುರಾಗಿಬಿಡುತ್ತೇವೆ. ಹೀಗಾಗಿ, ಒಮ್ಮೆ ಸಾರಿ ಕೇಳಿನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.