ಆ ಕ್ಷಣದ ಸೋಲು ಎಂದಿಗೂ ಸೋಲಲ್ಲ. ಕಾಯಬೇಕಷ್ಟೇ. ಸೋಲಿನ ಹಿಂದೆ ಹಿಂದೆಯೇ ಗೆಲುವೆಂಬುದು ಇಣುಕುತ್ತಿರುತ್ತದೆ. ಅದು ಗೊತ್ತಿದ್ದದ್ದೇ ಆದರೂ ತೀರಾ ಮುಗ್ಧರಂತೆ ನಾವು ಅಧೀರರಾಗಿ ಬಿಡುವುದೇಕೋ ?

ಇದಕ್ಕಿಂತಲೂ ಕುತೂಹಲಕಾರಿ ಸಂಗತಿಯೊಂದು ನಿಮಗೆ ಗೊತ್ತೇ ? ನಾವು ಎಷ್ಟೋ ಬಾರಿ ಸೋಲು ಅಂತಂದುಕೊಂಡಿರುವುದು ಅಂತರಂಗದಲ್ಲಿ ನಮ್ಮ ಗೆಲುವೇ ಆಗಿರುತ್ತದೆ. ಮೇಲ್ನೋಟಕ್ಕೆ ನಾವು ಅದನ್ನು ನಮ್ಮ ಅವನತಿ ಎಂಬಂತೆ ಭಾವಿಸಿಬಿಟ್ಟಿರುತ್ತೇವೆ. ಎಷ್ಟೋ ಗೆಲವುಗಳು ಹಾಗೆಯೇ, ಅವು ನಮ್ಮನ್ನು ವಂಚಿಸಿಯೇ ಮುಡಿಗೇರಿರುತ್ತವೆ. ಅದು ಹಾಗೆ ನಮ್ಮ ತಲೆ ಹತ್ತಿ ಕುಳಿತದ್ದನ್ನು ಗಮನಿಸುವ ತಾಳ್ಮೆಯಾಗಲಿ, ಸೂಕ್ಷ್ಮತೆಯಾಗಲೀ ನಮ್ಮಲ್ಲಿ ಇರುವುದೇ ಇಲ್ಲ. ಮತ್ತದೇ ಹ್ಯಾಪು ಮೋರೆ ಹಾಕಿಕೊಂಡು, ನಮ್ಮ ಹಣೆ ಬರಹವನ್ನು ಹಳಿಯುತ್ತಾ ನಮ್ಮನ್ನು ನಾವೇ ಇನ್ನಷ್ಟು ಪ್ರಪಾತಕ್ಕೆ ಇಳಿಸಿಕೊಂಡು ಕುಳಿತುಕೊಂಡು ಬಿಟ್ಟಿರುತ್ತೇವೆ.

ಹಾಗೆಂದು ಏನೋ ದಿಗ್ವಿಜಯಕ್ಕೆ ಸಜ್ಜಾದ, ಪ್ರಾಣಾರ್ಪಣೆಗೂ ಸಿದ್ಧನಾದ ಯೋಧನಂತೆ ಮತ್ತಷ್ಟು ಮುನ್ನುಗ್ಗಿ, ಕೊನೆಕ್ಷಣದ ಹೋರಾಟವಾಗಿ ಮನಬಂದಂತೆ ಕತ್ತಿ ಬೀಸಬೇಕೆಂದೇನೂ ಹೇಳುತ್ತಿಲ್ಲ. ಪರಿಸ್ಥಿತಿಯನ್ನು ತಣ್ಣಗೆ ಅವಲೋಕಿಸುವ, ನಾವಿರುವ ತಾಣ ಯಾವುದು, ಎಂಥಾ ಸನ್ನಿವೇಶದಲ್ಲಿ ಇದು ಎದುರಾಯಿತು ಎಂಬುದನ್ನೂ ನಿರಕಿಸುವ ತಾಳ್ಮೆಯನ್ನೂ ಉಳಿಸಿಕೊಂಡಿರುವುದಿಲ್ಲ.

ನಾವು ಹೀಗೇಕೆ ? ಪಾತ್ರೆಯಿಂದ ಹಬೆಯಾಡುತ್ತಿದೆ ಎಂದಾಕ್ಷಣ ಅದರೊಳಗಿರುವ ಪದಾರ್ಥವೂ ಬಿಸಿಯಾಗಿದೆಯೆಂದೇ ನೋಟದಲ್ಲೇ ನಿರ್ಧರಿಸಿಬಿಡಲಿಕ್ಕಾಗುವುದಿಲ್ಲ. ಎಷ್ಟೋ ವೇಳೆ ಅತ್ಯಂತ ತಣ್ಣಗೆ ಕೊರೆಯುವ ಹಿಮಗಡ್ಡೆಯಿಂದಲೂ ಹಬೆಯೇಳುತ್ತಿರುತ್ತಿದೆ. ನೀವು ನೋಡಿದ ಪಾತ್ರೆಯೊಳಗಿದ್ದುದು ಬಿಸಿಯಾಗಿದೆಯೋ, ತಣ್ಣಗೆ ಕೊರೆಯುತ್ತಿದೆಯೋ ಎಂಬುದನ್ನು ನಿರ್ಧರಿಸಲು ಅದನ್ನು ಮುಟ್ಟಿಯೇ ನೋಡಬೇಕೆಂದೇನೂ ಇಲ್ಲ. ಬಿಸಿ ಮತ್ತು ತಣ್ಣನೆಯ ಗುಣವನ್ನು ಕಣ್ಣೋಟದಲ್ಲೇ ಅಳೆಯುವ ಜಾಣ್ಮೆಯೊಂದು ನಿಮಗಿರಬೇಕಾಗುತ್ತದೆ. ಸೋಲು ಗೆಲುವುಗಳನ್ನೂ ಅದೇ ಜಾಣ್ಮೆಯಿಂದ ಅಳೆದು ನೋಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.