ಅಜ್ಜಂಪುರ: ‘ಇಂದು ವ್ಯಕ್ತಿ ಪ್ರತಿಷ್ಠೆಯಿಂದ ಜಗತ್ತು ಯುದ್ಧದಿಂದ ಕುದಿಯುತ್ತಿದೆ. ಎಲ್ಲಿಯೋ ನಡೆದ ಯುದ್ಧದ ಬಿಸಿ ಮತ್ತೆಲ್ಲೋ ತಾಗುತ್ತದೆ. ಅಮಾಯಕರು ಕಾರಣವಿಲ್ಲದೇ ಸಾವು–ನೋವು ಅನುಭವಿಸುವಂತಾಗಿದೆ’ ಎಂದು ಜಾನಪದ ಸಾಹಿತಿ ನಾಡೋಜ ಗೊ.ರು. ಚನ್ನಬಸಪ್ಪ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ಗೊಂಡೇದಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಜಿಲ್ಲಾಮಟ್ಟದ ಜಯಂತ್ಯುತ್ಸವ ಹಾಗೂ ಧಾರ್ಮಿಕ ಸಮಾರಂಭ’ದಲ್ಲಿ ಅವರು ಮಾತನಾಡಿದರು.

ವ್ಯಕ್ತಿ ಸುಧಾರಣೆಯಾಗಬೇಕು. ವ್ಯಕ್ತಿ ಸಭ್ಯ ಸಂಭಾವಿತನಾದಾಗ ಸಾತ್ವಿಕ ಸಮಾಜ ನಿರ್ಮಾಣವಾಗುತ್ತದೆ. ಶಾಂತಿಯುತ ಜಗತ್ತು ಸೃಷ್ಟಿಯಾಗುತ್ತದೆ. ಯುದ್ಧದಂತಹ ಭೀಕರ ಪರಿಸ್ಥಿತಿಯಲ್ಲಿರುವ ಜಗತ್ತಿಗೆ ಇಂದು, ಹೇಮರೆಡ್ಡಿ ಮಲ್ಲಮ್ಮನವರು ಸಾರಿದ ಸಹನೆ, ತಾಳ್ಮೆ, ಸಹಿಷ್ಣುತೆ ಪಾಲನೆ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.

ಪ್ರತಿಯೊಬ್ಬರೂ ಹುಟ್ಟೂರಿನ ಮೇಲೆ ಪ್ರೀತಿ, ವಾತ್ಸಲ್ಯ, ಆತ್ಮಾಭಿಮಾನ ಬೆಳಸಿಕೊಳ್ಳಬೇಕು. ಗ್ರಾಮದ ಹೊರಗಿರುವ ಯುವಕರು ಹುಟ್ಟೂರಿಗೆ ಕೊಡುಗೆ ನೀಡಬೇಕು. ಅದು, ಚಳವಳಿಯಾಗಿ ರೂಪುಗೊಳ್ಳಬೇಕು. ಆಗ, ಗ್ರಾಮಗಳು ಅಭಿವೃದ್ಧಿಯಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್. ರಾಜು ಮಾತನಾಡಿ, ಪ್ರತಿ ಗ್ರಾಮಗಳು ಶಿಕ್ಷಣ ಮತ್ತು ಸ್ವಚ್ಛತೆಯನ್ನು ಆದ್ಯತೆಯಾಗಿ ಪರಿಗಣಿಸಬೇಕು. ಗುಣಮಟ್ಟದ ಶಿಕ್ಷಣದ ಮೂಲಕ ಶಾಲೆಗಳು ಮಕ್ಕಳನ್ನು ಸೆಳೆಯಬೇಕು. ಜನರಲ್ಲಿ ಜಾಗೃತಿ ಮೂಡಿ, ಊರು ಸ್ವಚ್ಛಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ತಾಳ್ಮೆ ಸಮಾನತೆಯ ಸಂದೇಶ ಸಾರಿದ್ದಾರೆ. ಸರ್ಕಾರ, ಮಹಿಳೆಯರಿಗೆ ಗೃಹಲಕ್ಷ್ಮಿ ಸೇರಿದಂತೆ ಹಲವು ಭಾಗ್ಯಗಳ ಮೂಲಕ ಆರ್ಥಿಕ ಬಲ ಹೆಚ್ಚಿಸಿದೆ ಎಂದರು.

ಯಡಿಯೂರು ರೇಣುಕ ಶಿವಾಚಾರ್ಯ ಸ್ವಾಮೀಜಿ, ತಾವರೆಕೆರೆಯ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಗೊರುಚ ಗ್ರಾಮ ವಿಕಾಸ ಪ್ರತಿಷ್ಠಾನ ಅಧ್ಯಕ್ಷ ಚಿಕ್ಕರಿಯಪ್ಪ, ಉಪಾಧ್ಯಕ್ಷ ಪ್ರಭು ಕುಮಾರ್, ಜಯಂತೋತ್ಸವ ಸಮಿತಿ ಅಧ್ಯಕ್ಷ ಜಿ.ಪಿ. ಜಯಪ್ರಸಾದ್, ಕಾರ್ಯದರ್ಶಿ ದಕ್ಷಿಣ ಮೂರ್ತಿ, ಕೋಶಾಧಿಕಾರಿ ಅಮಿತ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಆರ್. ಆನಂದಪ್ಪ ಮಾತನಾಡಿದರು.

ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ಜನಾಂಗ ಸಂಘ ಕಾರ್ಯದರ್ಶಿ ಶಿವಲಿಂಗ ಮೂರ್ತಿ, ಗಿರಿಯಾಪುರ ಕೇಂದ್ರ ಗೌರವಾಧ್ಯಕ್ಷ ಮುರುಗೇಶ್, ಅಧ್ಯಕ್ಷ ಹೇಮಂತ್ ಕುಮಾರ್, ಗೊಂಡೇದ ಹಳ್ಳಿ ಘಟಕ ಅಧ್ಯಕ್ಷ ನೀಲಕಂಠಪ್ಪ ಇದ್ದರು.

ಬಸವೇಶ್ವರ ಭಜನಾ ತಂಡ ಗಾಯನ ಮಾಡಿದ ಗೊ.ರು.ಚ ರಚನೆಯ ಕರವ ಬಾಗಿಸು, ನಮಿಸುವೆವು ನಾವು..ಪ್ರಾರ್ಥನಾ ಗೀತೆ ಗಮನ ಸೆಳೆಯಿತು. ಉಪ ನ್ಯಾಸಕ ಕುಮಾರ ಸ್ವಾಮಿ ಹೇಮರೆಡ್ಡಿ ಮಲ್ಲಮ್ಮ ಕುರಿತು ಉಪನ್ಯಾಸ ನೀಡಿದರು.

ವಿಶೇಷ ಸಾಧನೆ ಮಾಡಿದ ಸುದರ್ಶನ್, ಜಿ.ಎಂ.ಶಾಂತ ಕುಮಾರ್, ಜಿ.ಎಂ. ಹಾಲಪ್ಪ, ಜಿ.ಎಸ್. ಶಶಿಧರ್, ತಿಪ್ಪೇಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ, ವೈದ್ಯಕೀಯ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ವೇಳೆ ಈಚೆಗೆ ನಿಧನರಾದ ಸಚಿವ ಡಿ. ಸುಧಾಕರ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-126-1149689527

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.