ಅಳವಂಡಿ: ‘ಹೇಮರಡ್ಡಿ ಮಲ್ಲಮ್ಮ ಒಬ್ಬ ಆದರ್ಶ ಮಡದಿ ಹೇಗಿರಬೇಕು ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿದ ಮಹಾನ್ ಸಾದ್ವಿ. ಅವರ ಆದರ್ಶಮಯ ಬದುಕು ನಡೆಸುವ ಮೂಲಕ ಹೆಣ್ಣುಕುಲಕ್ಕೆ ಮಾದರಿಯಾಗಿದ್ದಾರೆ’ ಎಂದು ಮುಂಡರಗಿಯ ಸಮಾಜದ ಮುಖಂಡ ಕರಬಸಪ್ಪ ಹಂಚಿನಾಳ ಹೇಳಿದರು.

ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಮಲ್ಲಮ್ಮ ಒಬ್ಬ ಮಹಿಳಾ ಸಂತರಾಗಿದ್ದು ನಾಡಿನ ಸಮಾಜದ ಬೆಳವಣಿಗೆ ಬಯಸುವಲ್ಲಿ ತಮ್ಮನ್ನು ತಾವು ಅರ್ಪಿಸಿದ ಮಹಾತಾಯಿ’ ಎಂದರು.

ಅಲಂಕೃತ ವಾಹನದಲ್ಲಿ ಮಲ್ಲಮ್ಮನ ಮೂರ್ತಿ ಹಾಗೂ ವೇಮನರ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂದಿಕೋಲು ನೃತ್ಯ ಸೇರಿದಂತೆ ವಿವಿಧ ವಾದ್ಯ ಮೇಳಗಳು ಗಮನ ಸೆಳೆದವು. ಮಹಿಳೆಯರು ಕುಂಭ ಹಾಗೂ ಕಳಸ ಹೊತ್ತು ಸಾಗಿದರು.

ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕರಡ್ಡಿ ಕಲಾದಗಿ, ಪ್ರಮುಖರಾದ ಬಸವರಡ್ಡೆಪ್ಪ ಹಳ್ಳಿಕೇರಿ, ಸುರೇಶ ಭೂಮರಡ್ಡಿ, ಭರಮಪ್ಪ ನಗರ, ಅಜ್ಜಪ್ಪಗೌಡ ಪಾಟೀಲ್, ಭೀಮಪ್ಪ ಹವಳಣ್ಣವರ, ತೋಟಪ್ಪ, ವೆಂಕರಡ್ಡಿ, ಗುರುಬಸವರಾಜ ಹಳ್ಳಿಕೇರಿ, ಹನುಮಂತಗೌಡ, ಹೊನ್ನಪ್ಪಗೌಡ, ಸಂಜೀವರಡ್ಡಿ, ಅನ್ವರಹುಸೇನ್, ಚೌಡಪ್ಪ, ಪ್ರಕಾಶಸ್ವಾಮಿ, ತೋಟಯ್ಯ, ಶ್ರೀನಿವಾಸ, ರಮೇಶ , ದೇವಪ್ಪ ಕಟ್ಟಿಮನಿ, ನಜೀರ್, ಇಸ್ಮಾಯಿಲ್, ನಿಂಗಪ್ಪ ಮೇಟಿ, ಈಶಪ್ಪ ಗದ್, ಪರಶುರಾಮ, ಬಸವರಡ್ಡಿ, ರವೀಂದ್ರ, ಸಿದ್ದಪ್ಪ, ಮಂಜುನಾಥಗೌಡ, ವಸಂತ, ಮಲ್ಲಪ್ಪ, ಸತೀಶ, ಮಂಜುನಾಥ, ಉಮೇಶಗೌಡ, ಚನ್ನಪ್ಪ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-35-391772597

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.