ಅಳವಂಡಿ: ‘ಹೇಮರಡ್ಡಿ ಮಲ್ಲಮ್ಮ, ವೇಮನರು ರಡ್ಡಿ ಕುಲದಲ್ಲಿ ಹುಟ್ಡಿದರೂ ಸಹ ಎಲ್ಲಾ ಸಮಾಜವನ್ನು ಸಮಾನವಾಗಿ ಕೊಂಡೊಯ್ದರು. ಇವರ ಆದರ್ಶ ಗುಣಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸಬೇಕು. ಸಮಾಜದ ಯಶಸ್ವಿಗೆ ಸಂಘಟನೆ ಒಂದು ಶಕ್ತಿಯಾಗಿದೆ. ಹೀಗಾಗಿ ಎಲ್ಲರೂ ಒಗ್ಗಟ್ಟಾಗಿ ಸದೃಢ ಸಮಾಜವನ್ನು ಕಟ್ಟಿಕೊಳ್ಳಿ’ ಎಂದು ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯ ಸಿ.ವಿ.ಚಂದ್ರಶೇಖರ ಹೇಳಿದರು.

ಗ್ರಾಮದ ಸಿದ್ದೇಶ್ವರ ಸಂಯುಕ್ತ ಕಾಲೇಜಿನ ಆವರಣದಲ್ಲಿ ಹೇಮರಡ್ಡಿ ಮಲ್ಲಮ್ಮನ ಜಯಂತಿ ಪ್ರಯುಕ್ತ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಕ್ಷೇಮಾಭಿವೃದ್ದಿ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ಹೇಮರಡ್ಡಿ ಮಲ್ಲಮ್ಮ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹೇಮರಡ್ಡಿ ಮಲ್ಲಮ್ಮ ಅನೇಕ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಿ, ಶ್ರೀಶೈಲ ಮಲ್ಲಿಕಾರ್ಜುನನ ಪೂಜಿಸಿ, ಎಲ್ಲರಿಗೂ ಮಾದರಿ ತಾಯಿಯಾಗಿದ್ದಾಳೆ. ಮಲ್ಲಮ್ಮ ರೈತರಿಗೆ ಯಾವುದೇ ಕಷ್ಟವನ್ನು ಕೊಡಬಾರದು ಎಂದು ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ಬೇಡಿದ್ದಾಳೆ. ತನ್ನ ಬದುಕಿನೊಂದಿಗೆ ಎಲ್ಲರಿಗೂ ಒಗ್ಗಟ್ಟಿನ ಬದುಕು ಕಟ್ಟಿಕೊಡುವಲ್ಲಿ ಯಶಸ್ವಿಯಾದರು’ ಎಂದರು.

ರಡ್ಡಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಭಾಸರಡ್ಡಿ ಕಿನ್ನಾಳ ಮಾತನಾಡಿ, ‘ಒಬ್ಬ ಮಹಿಳೆ ಜಗತ್ತನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತಾಳೆ ಎಂಬುದಕ್ಕೆ ಹೇಮರಡ್ಡಿ ಮಲ್ಲಮ್ಮ ಸಾಕ್ಷಿಯಾಗಿದ್ದಾರೆ’ ಎಂದರು.

ಪ್ರಕಾಶಸ್ವಾಮಿ ಇನಾಮದಾರ, ಪ್ರಭು ಹೆಬ್ಬಾಳ, ಕಾಶಿನಾಥರಡ್ಡಿ ಆವೋಜಿ, ಬಸವರಡ್ಡೆಪ್ಪ ಹಳ್ಳಿಕೇರಿ, ಹನುಮಂತಗೌಡ ಗಾಳಿ, ಶಂಕ್ರಪ್ಪ ಕಲಾದಗಿ, ಹೇಮರಡ್ಡಿ ಕಲ್ಗುಡಿ, ಚೌಡಪ್ಪ ಜಂತ್ಲಿ, ಲಿಂಗನಗೌಡ ಮಾಲಿಪಾಟೀಲ್, ಯಂಕಣ್ಣ ಬರಡ್ಡಿ, ಭೀಮರಡ್ಡೆಪ್ಪ ಗದ್ದಿಕೇರಿ, ದೇವಪ್ಪ ಕಟ್ಟಿಮನಿ, ಪರಪ್ಪ ನಾಗರಹಳ್ಳಿ, ಬಸವರಾಜ ಹಾರೋಗೇರಿ ಮತ್ತಿತರರು ಇದ್ದರು. ಗುರು ಬಸವರಾಜ ಹಳ್ಳಿಕೇರಿ, ಸುರೇಶ ದಾಸರಡ್ಡಿ, ವೆಂಕರಡ್ಡಿ ಇಮ್ಮಡಿ ಕಾರ್ಯಕ್ರಮ ನಿರ್ವಹಿಸಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ವಿಜಯನಗರ ಜಿಲ್ಲೆಯ ಸೂಲದಹಳ್ಳಿ ಕಂದಗಲ್ ಹನುಮಂತರಾಯ ಕಲಾ ಸಂಘದ ಕಲಾವಿದರಿಂದ ಸಂಪೂರ್ಣ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂಬ ನಾಟಕ ಪ್ರದರ್ಶನ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-35-1773565463

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.