ಆಲೂರು: ‘ಮಾನವ ಸೇವೆ ಮಾಡುವುದು ಮಹಾದೇವನ ಸೇವೆ ಮಾಡಿದಂತೆ’ ಎಂದು ಕಾರ್ಜುವಳ್ಳಿ ಮಠದ ಸದಾಶಿವ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಅಗಿಲೆ ಗ್ರಾಮದಲ್ಲಿರುವ ತೇಜೋದಯ ನಿರಾಶ್ರಿತರ ಆಶ್ರಮದಲ್ಲಿ ‘ಮನೆ ಮನೆಗೆ-ಮನ ಮನಕೆ ರೇಣುಕ’ ಎಂಬ ಧರ್ಮ ಜಾಗೃತಿ ಹಾಗೂ ತತ್ವ ಪ್ರಚಾರ ಕಾರ್ಯಕ್ರಮಕ್ಕೆ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

‘ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಧರ್ಮ ಪ್ರಚಾರದ ಜೊತೆಗೆ ದೀನ ದಲಿತರ, ನಿರಾಶ್ರಿತರ ಹಾಗೂ ಅಗತ್ಯವಿರುವವರಿಗೆ ನೆರವಾಗುವುದು ಪ್ರತಿಯೊಬ್ಬರ ಕರ್ತವ್ಯ, ಅಭಿಯಾನ 36 ಸಂಚಿಕೆ ಪೂರೈಸಿದೆ’ ಎಂದರು.

‘ಸಮಾಜದಲ್ಲಿ ಧಾರ್ಮಿಕ ಮೌಲ್ಯ, ಸನಾತನ ಸಂಸ್ಕೃತಿ, ವೀರಶೈವ ಸಿದ್ಧಾಂತ ಹಾಗೂ ಮಾನವೀಯತೆ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಸಮಾರಂಭದ ಅಂಗವಾಗಿ ಆಶ್ರಮದಲ್ಲಿರುವ ನಿರಾಶ್ರಿತರಿಗೆ ಹಾಗೂ ಅಗತ್ಯವಿರುವವರಿಗೆ ತರಕಾರಿ, ಅಕ್ಕಿ, ಬೇಳೆ, ಎಣ್ಣೆ ಸೇರಿ ವಿವಿಧ ದಿನಸಿ ಪದಾರ್ಥಗಳನ್ನು ವಿತರಿಸಲಾಗಿದೆ’ ಎಂದು ತಿಳಿಸಿದರು.

ಆಶ್ರಮದ ಸ್ಥಾಪಕ ಗಿರಿತೇಜ್, ಸಿದ್ಧಾಂತ ಶಿಖಾಮಣಿಯ ತತ್ವ ಪ್ರಚಾರ ಸಮಿತಿಯ ನಿರ್ದೇಶಕರಾದ ಡಿ.ಎ ದೇವರಾಜ್ ಶಾಸ್ತ್ರಿ, ಹೊನ್ನಸ್ವಾಮಿ ಶೆಟ್ಟಿಹಳ್ಳಿ, ಮಂಜುನಾಥ ಶ್ರೀಧರ್, ವಿರೂಪಾಕ್ಷಯ್ಯ, ಎಚ್.ಸಿ. ನೀಲಕಂಠಪ್ಪ, ಯಶ್ವಂತ್ ಕಾರ್ಜುವಳ್ಳಿ, ಜಶ್ವಂತ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-36-1827122276

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.