ಅರಸೀಕೆರೆ: ಅಂಬಿಗರ ಚೌಡಯ್ಯನವರು ಇದ್ದದ್ದನ್ನು ಇದ್ಹಂಗೆ ಹೇಳಿ ಸತ್ಯವನ್ನು ನೇರವಾಗಿ ನುಡಿಯುವವರಾಗಿದ್ದರು. ಅವರ ಆದರ್ಶ, ತತ್ವ ವಿಶ್ವ ಮಟ್ಟದಲ್ಲಿ ಪ್ರಖ್ಯಾತವಾಗಿವೆ. ಯಾರನ್ನೂ ಮೇಲು– ಕೀಲು ಎನ್ನದೆ, ಜಾತಿ ಭೇದ ಮರೆತು ಎಲ್ಲರನ್ನು ದಡ ಸೇರಿಸುವ ಕಾಯಕವನ್ನು ಮಾಡಿದ್ದಾರೆ ಎಂದು ನಿಜಶರಣ ಅಂಬಿಗರ ಚೌಡಯ್ಯ ಮಠದ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.

ಅಂಬಿಗರ ಚೌಡಯ್ಯ ಸಂಘ ಮತ್ತು ಗಂಗಾಮತಸ್ಥರ ಸಂಘದ ತಾಲ್ಲೂಕು ಘಟಕ, ಗಂಗಾಸೇನ ಸಹಕಾರ ಸಂಘದ ವತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಗಂಗಾಪರಮೇಶ್ವರಿ ಅಮ್ಮನವರ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾಯಕನಿಷ್ಠೆಯ ಮತ್ತು ಪ್ರಾಮಾಣಿಕತೆಯಿಂದ ಜೀವನ ಸಾಗಿಸಿದ ಅಂಬಿಗರ ಚೌಡಯ್ಯ, 12 ನೇ ಶತಮಾನದ ಶ್ರೇಷ್ಠ ಶರಣರಾಗಿದ್ದರು. ತಮ್ಮ ಹರಿತವಾದ ವಚನಗಳ ಮೂಲಕ ಸಮಾಜದಲ್ಲಿ ಜಾತಿ ಪದ್ಧತಿ ತೊಡೆದು ಹಾಕಲು ಶ್ರಮಿಸಿದ ಮಹಾಪುರುಷರು. ಎಲ್ಲರಿಗೂ ಎಲ್ಲಿಲ್ಲದ ಚಿಂತೆ ಇರುತ್ತದೆ. ಆದರೆ ಶಿವನ ಚಿಂತೆ ಯಾರಲ್ಲೂ ಇಲ್ಲವಲ್ಲ ಎಂದು ನೇರವಾಗಿ ಹೇಳಿದವರು. ಡಾಂಭಿಕ ಭಕ್ತರನ್ನು ಎಂದಿಗೂ ನಂಬುತ್ತಿರಲಿಲ್ಲ ಎಂದು ಹೇಳಿದರು.

ಸಮಾಜದವರು ನಮ್ಮ ಕುಲದೇವರಾದ ಗಂಗಮಾತೆ ಹಾಗೂ ಅಂಬಿಗರ ಚೌಡಯ್ಯನವರ ಆರಾಧಕರಾಗಬೇಕು. ಅವರ ಜಯಂತಿಗಳನ್ನು ಮನೆ, ಹಬ್ಬದಂತೆ ಎಲ್ಲರೂ ಒಗ್ಗೂಡಿ ಆಚರಿಸಬೇಕು. ಸಮಾಜದಲ್ಲಿ ಸಂಘಟನೆ ಬಹುಮುಖ್ಯವಾಗಿದೆ. ಎಲ್ಲರೂ ತಮ್ಮ ಮಕ್ಕಳನ್ನು ಉನ್ನತ ಉತ್ತಮ ಶಿಕ್ಷಣವನ್ನು ಕೊಡಿಸುವಲ್ಲಿ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಗೃಹ ಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಗಂಗಾಪರಮೇಶ್ವರಿ ಅಮ್ಮನವರ ಜಯಂತಿ ಹಾಗೂ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸಗಳು ನಾಡಿನ ಭಕ್ತಿ ಪರಂಪರೆ ಮತ್ತು ಒಗ್ಗಟ್ಟಿನ ಸಂಕೇತವಾಗಿದೆ. ಗಂಗಾಮತಸ್ಥ ಸಮಾಜವು ಶ್ರೇಷ್ಠ ಸಮಾಜವಾಗಿದೆ. ಇವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ಸಮಾಜದ ಅಭ್ಯುದಯಕ್ಕೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದರು.

ಗಂಗಾಮತಸ್ಥ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷಣ್ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು. ಸಮಾಜದ ಕೆಲಸಕ್ಕಾಗಿ ಮುಂದೆ ಇರಬೇಕು ಎಂದರು.

ಇದಕ್ಕೂ ಮುನ್ನ ನಗರದ ಭವಾನಿ ಶಂಕರ ದೇವಸ್ಥಾನದಿಂದ ಗಂಗಾಮಾತೆಯ ಭಾವಚಿತ್ರ ಮತ್ತು ನಿಜಶರಣ ಅಂಬಿಗರ ಚೌಡಯ್ಯ ಪೀಠಾಧಿಪತಿ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರ ಮೆರವಣಿಗೆಯೂ ಪ್ರಮುಖ ರಸ್ತೆಗಳ ಮೂಲಕ ಗಂಗಾ ಪರಮೇಶ್ವರಿ ಸಮುದಾಯ ಭವನದವರೆಗೆ ಕಲಾ ತಂಡಗಳೊಂದಿಗೆ ಸಾಗಿತು.

ಅಂಬಿಗರ ಚೌಡಯ್ಯ, ಗಂಗಾಮತಸ್ಥರ ಸಂಘ, ಗಂಗಾಸೇನ ಸಹಕಾರ ಸಂಘದ ಪದಾಧಿಕಾರಿಗಳಾದ ರವಿಶಂಕರ್, ಸತೀಶ್, ವೈ.ಡಿ. ಪುಟ್ಟಸ್ವಾಮಿ, ಜೆ.ಸಿ. ಸಿದ್ದೇಶ್ , ಪುಟ್ಟಸ್ವಾಮಿ , ವಿಶ್ವಂಬರ, ವಿಜಯಕುಮಾರ್, ಜಗನ್ನಾಥ್, ಕೃಷ್ಣಮೂರ್ತಿ, ಕೇಶವಮೂರ್ತಿ, ಜಗದೀಶ್, ಪ್ರಭಾಕರ್, ರಾಜೇಂದ್ರ, ಕೆ.ಎಸ್.ಬಸವರಾಜು, ಶಿವಮೂರ್ತಿ, ಮಾರುತಿ, ದಿನೇಶ್ ಸೇರಿದಂತೆ ಮುಖಂಡರು ಹಾಗೂ ಸಮಾಜದವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-36-2086194644

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.