ಅರಸೀಕೆರೆ: ‘ವೀರಶೈವ ಲಿಂಗಾಯತ ಮಹಾಸಭಾ ಘನತೆ ಹೆಚ್ಚಿಸುವ ಹೊಣೆಗಾರಿಕೆ ನೂತನ ಪದಾಧಿಕಾರಿಗಳ ಮೇಲಿದೆ’ ಎಂದು ಸಹಾಯಕ ಚುನಾವಣಾಧಿಕಾರಿ ಎ.ಎಲ್.ಮೋಹನ್ ಕುಮಾರ್ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನಗರದ ಪ್ರವಾಸಿ ಮಂದಿರದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ‘ಸಂಘಟನೆ ಕೊರತೆಯಿಂದ ಸಮುದಾಯ ಹಿನ್ನಡೆ ಅನುಭವಿಸುವಂತಾಗಿದೆ. ಮಹಾಸಭಾ ಗೌರವಕ್ಕೆ ಧಕ್ಕೆ ಬಾರದಂತೆ ಹಾಗೂ ಅರ್ಹರಿಗೆ ಸವಲತ್ತುಗಳನ್ನು ತಲುಪಿಸುವ ಕೆಲಸ ಮಾಡಬೇಕು’ ಎಂದರು.

ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎ.ಬಿ.ಗುರುಸಿದ್ದೇಶ್ ಮಾತನಾಡಿ, ‘ಸಮುದಾಯದ ಏಳಿಗೆಗೆ ಎಲ್ಲರೂ ಒಗ್ಗೂಡಿ ಕೆಲಸ ಮಾಡೋಣ. ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಸಮುದಾಯವನ್ನು ಕಡೆಗಣನೆ ಮಾಡಲಾಗುತ್ತಿದೆ. ವೀರಶೈವ ಲಿಂಗಾಯತ ಒಳ ಪಂಗಡಗಳ ವಿಭಜನೆ ಲಾಭ ಪಡೆಯಲು ಅವಕಾಶ ನೀಡಬಾರದು. ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಂಘಟಿತರಾಗುವ ಅನಿವಾರ್ಯ ಎದುರಾಗಿದೆ. ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗೂಡಿ ನಡೆಯೋಣ’ ಎಂದು ಹೇಳಿದರು.

ನೂತನ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ ಮಾತನಾಡಿ, ‘ನಿರ್ದೇಶಕರು ಹಾಗೂ ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ದೊರೆತಿರುವ ಅವಕಾಶ ಸದ್ಬಳಕೆ ಮಾಡಿಕೊಂಡು ಸಮುದಾಯದ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ಸಮುದಾಯದ ನಾಗಸಮುದ್ರ ಶಶಿಧರ್, ಜಗದೀಶ್, ಚಂದ್ರಶೇಖರ್ ಮಾತನಾಡಿದರು.

ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಶೇಖರಪ್ಪ (ಶೇಖರ್ ಸಂಕೋಡನಹಳ್ಳಿ) ಅಧ್ಯಕ್ಷ, ಎಸ್ ಎಂ.ಎಸ್ ಕುಮಾರ್, ಆರ್.ಜಿ.ರಾಘವೇಂದ್ರ, ಆನಂದ್, ಚಂದ್ರಶೇಖರ್, ಶಶಿಧರ್, ಪವನ್ ಎ.ಪಿ, ಜಗದೀಶ್, ವಿರೂಪಾಕ್ಷಪ್ಪ, ಭರತೇಶ್, ಲೋಕೇಶ್ ನೀರಗುಂದ, ಓಂಕಾರಮೂರ್ತಿ, ಮಲ್ಲೇಶ್ (ಸಾಮಾನ್ಯ) ಹೇಮಾವತಿ, ಗೌರಮ್ಮ, ಸರೋಜಾ, ಪ್ರೇಮಾ ಅವರಿಗೆ ಸಹಾಯಕ ಚುನಾವಣಾಧಿಕಾರಿ ಎ.ಎಲ್.ಮೋಹನ್ ಕುಮಾರ್ ಪ್ರಮಾಣ ಪತ್ರ ವಿತರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-36-293238173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.