ಯುಗಾದಿ ಎಂದರೆ ಕೇವಲ ಹೊಸ ವರ್ಷದ ಪ್ರಾರಂಭವಲ್ಲ; ಅದು ಪ್ರಕೃತಿ ಮತ್ತು ಮಾನವ ಜೀವನದ ನಡುವಿನ ಆಳವಾದ ಸಂಬಂಧವನ್ನು ನೆನಪಿಸುವ ಮಹತ್ವದ ಕ್ಷಣ. ಆಯುರ್ವೇದದ ದೃಷ್ಟಿಯಿಂದ, ಯುಗಾದಿ ವಸಂತ ಋತುವಿನ ಆರಂಭವನ್ನು ಸೂಚಿಸುತ್ತದೆ.

ಶಿಶಿರ ಋತುವಿನಲ್ಲಿ ಮನುಷ್ಯನ ದೇಹದಲ್ಲಿ ಸಂಗ್ರಹವಾಗಿದ್ದ ಕಫ ದೋಷ ಕರಗಲು ಪ್ರಾರಂಭಿಸಿ ದೇಹದಲ್ಲಿ ವಿವಿಧ ಬದಲಾವಣೆಗಳನ್ನು ಉಂಟುಮಾಡುತ್ತದೆ. ಇದರಿಂದ ದೇಹದಲ್ಲಿ ಭಾರ, ಮಂದಾಗ್ನಿ, ಆಲಸ್ಯ, ಅಲರ್ಜಿ, ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ನಮ್ಮ ಪೂರ್ವಜರು ರೂಪಿಸಿದ ಯುಗಾದಿಯ ಆಚರಣೆಗಳು ದೇಹ ಮತ್ತು ಮನಸ್ಸನ್ನು ಸಮತೋಲನದಲ್ಲಿಡುವ ವೈಜ್ಞಾನಿಕ ವಿಧಾನಗಳಾಗಿವೆ.

ಆಯುರ್ವೇದದ ʼಯಥಾ ಪಿಂಡೆ ತಥಾ ಬ್ರಹ್ಮಾಂಡೆʼ ಎಂಬ ಲೋಕ–ಪುರುಷ ಸಿದ್ಧಾಂತದ ಪ್ರಕಾರ, ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ಬದಲಾವಣೆಯೂ ಮಾನವ ದೇಹದಲ್ಲಿಯೂ ಪ್ರತಿಬಿಂಬಿಸುತ್ತದೆ. ವಸಂತದಲ್ಲಿ ಮರಗಳು ಹಸಿರಾಗುತ್ತವೆ, ಹೂವುಗಳು ಅರಳುತ್ತವೆ, ಹೊಸ ಚೈತನ್ಯ ಪ್ರಕೃತಿಯಲ್ಲಿ ಮೂಡುತ್ತದೆ. ಅದೇ ರೀತಿ ನಮ್ಮ ದೇಹದಲ್ಲಿಯೂ ಹೊಸ ಚಲನೆಗಳು ಉಂಟಾಗುತ್ತವೆ.

ಪಂಚಮಹಾಭೂತಗಳಿಂದ ನಿರ್ಮಿತವಾದ ನಮ್ಮ ದೇಹವು ಋತು ಬದಲಾವಣೆಗೆ ಅನುಗುಣವಾಗಿ ತನ್ನ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಆಹಾರ, ಆಚರಣೆ ಮತ್ತು ದಿನಚರಿಯಲ್ಲಿ ಬದಲಾವಣೆ ಅಗತ್ಯವಾಗುತ್ತದೆ. ಈ ಬದಲಾವಣೆಗಳನ್ನು ಸುಲಭವಾಗಿ ಅಳವಡಿಸಿಕೊಳ್ಳಲು ಯುಗಾದಿ ಸಂಪ್ರದಾಯಗಳು ಮಾರ್ಗದರ್ಶನ ನೀಡುತ್ತವೆ.

ಕರ್ನಾಟಕದಲ್ಲಿ ಯುಗಾದಿಯಂದು ಬೇವು–ಬೆಲ್ಲ ಸೇವಿಸುವ ಪದ್ಧತಿ ಬಹಳ ಪ್ರಸಿದ್ಧವಾಗಿದೆ. ಇದು ಕೇವಲ ಆಚರಣೆಯ ಭಾಗವಲ್ಲ. ಇದು ದೇಹದ ಆರೋಗ್ಯ ಸಮತೋಲನವನ್ನು ಕಾಪಾಡುವ ಔಷಧೀಯ ಸಂಯೋಜನೆಯಾಗಿದೆ. ಬೇವು ತನ್ನ ಕಹಿತನದಿಂದ ಕಫವನ್ನು ಕಡಿಮೆ ಮಾಡುತ್ತದೆ. ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ಸೋಂಕುಗಳಿಂದ ರಕ್ಷಿಸುತ್ತದೆ.

ಬೆಲ್ಲ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ಪಿತ್ತವನ್ನು ಸಮತೋಲನದಲ್ಲಿಡುತ್ತದೆ ಮತ್ತು ದೇಹದ ಪೋಷಣೆಯನ್ನು ಹೆಚ್ಚಿಸುತ್ತದೆ. ವಸಂತದಲ್ಲಿ ಕಫ ಹೆಚ್ಚಾಗುವ ಸಂದರ್ಭದಲ್ಲಿ ಈ ಎರಡು ರಸಗಳ ಸಂಯೋಜನೆ ದೇಹವನ್ನು ಶುದ್ಧಗೊಳಿಸಿ, ಹೊಸ ಋತುವಿಗೆ ಸಜ್ಜುಗೊಳಿಸುತ್ತದೆ. ಜೊತೆಗೆ ಯುಗಾದಿಯಲ್ಲಿ ಬಳಸುವ ಕಾಯಿ ಮಾವು ದೇಹಕ್ಕೆ ಅಗತ್ಯವಾದ ವಿಟಮಿನ್ಗಳನ್ನು ನೀಡುತ್ತದೆ. ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ರೀತಿಯಾಗಿ ಷಡ್ರಸಗಳ ಸಂಯೋಜನೆ ದೇಹದ ಸಮಗ್ರ ಆರೋಗ್ಯವನ್ನು ಕಾಪಾಡುತ್ತದೆ.

ಇದಕ್ಕೂ ಮೀರಿದಂತೆ, ಯುಗಾದಿ ಸಂದರ್ಭದಲ್ಲಿ ವಿಶೇಷವಾಗಿ ಗಮನಿಸಬೇಕಾದ ಒಂದು ಮುಖ್ಯ ಸಂಪ್ರದಾಯವೆಂದರೆ ತೈಲಾಭ್ಯಂಗ (ಎಣ್ಣೆ ಮಸಾಜ್). ವಸಂತ ಋತುವಿನಲ್ಲಿ ದೇಹದಲ್ಲಿ ಕಫ ಕರಗುವುದರಿಂದ ಸ್ಥಬ್ಧತೆ ಮತ್ತು ಭಾರ ಹೆಚ್ಚಾಗಬಹುದು. ಈ ಸಂದರ್ಭದಲ್ಲಿ ತೈಲಾಭ್ಯಂಗವು ದೇಹಕ್ಕೆ ಚೈತನ್ಯ ನೀಡುವ ಅತ್ಯುತ್ತಮ ವಿಧಾನವಾಗಿದೆ. ತೈಲದಿಂದ ದೇಹಕ್ಕೆ ಮೃದುವಾಗಿ ಮಸಾಜ್ ಮಾಡುವುದರಿಂದ ರಕ್ತಸಂಚಾರ ಸುಧಾರಿಸುತ್ತದೆ. ಸ್ನಾಯುಗಳು ಮತ್ತು ಸಂಧಿಗಳು ಬಲವಾಗುತ್ತವೆ. ಚರ್ಮಕ್ಕೆ ತೇವಾಂಶ ದೊರೆಯುತ್ತದೆ. ಆಯುರ್ವೇದದಲ್ಲಿ ತೈಲಾಭ್ಯಂಗವನ್ನು ದಿನಚರಿಯ ಭಾಗವಾಗಿಯೇ ಪರಿಗಣಿಸಲಾಗಿದೆ, ಆದರೆ ಋತುಬದಲಾವಣೆಯ ಸಮಯದಲ್ಲಿ ಇದಕ್ಕೆ ಇನ್ನಷ್ಟು ಮಹತ್ವ ಇದೆ.

ತೈಲಾಭ್ಯಂಗವು ಕೇವಲ ದೇಹದ ಆರೈಕೆ ಮಾತ್ರವಲ್ಲ

ಅದು ಮನಸ್ಸಿನ ಶಾಂತಿಗೂ ಸಹಕಾರಿ. ಇದು ವಾತದೋಷವನ್ನು ಸಮತೋಲನದಲ್ಲಿಡುತ್ತದೆ. ದೇಹದ ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ದೆಯನ್ನು ಸುಧಾರಿಸುತ್ತದೆ. ಮಕ್ಕಳಿಂದ ವೃದ್ಧರ ತನಕ ಎಲ್ಲರಿಗೂ ಇದು ಉಪಯುಕ್ತವಾದ ಸಂಪ್ರದಾಯವಾಗಿದೆ. ಯುಗಾದಿಯಂತಹ ಶುಭ ಸಂದರ್ಭದಲ್ಲಿ ತೈಲಾಭ್ಯಂಗವನ್ನು ಆಚರಿಸುವುದು ದೇಹವನ್ನು ಶುದ್ಧಗೊಳಿಸಿ ಹೊಸ ವರ್ಷವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ನೆರವಾಗುತ್ತದೆ.

ಈ ಎಲ್ಲ ಆಚರಣೆಗಳನ್ನು ನೋಡಿದಾಗ, ಸನಾತನ ಹಿಂದೂ ಸಂಪ್ರದಾಯವು ಕೇವಲ ಭಕ್ತಿಭಾವದ ಪ್ರತೀಕವಲ್ಲ, ಅದು ಜೀವನ ವಿಜ್ಞಾನವಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಪ್ರತಿಯೊಂದು ಆಚರಣೆಯ ಹಿಂದೆಯೂ ದೇಹದ ಸಮತೋಲನ, ಮನಸ್ಸಿನ ಸ್ಥೈರ್ಯ ಮತ್ತು ಪರಿಸರದೊಂದಿಗೆ ಹೊಂದಾಣಿಕೆ ಎಂಬ ವೈಜ್ಞಾನಿಕ ಅರ್ಥ ಅಡಗಿದೆ. ಯುಗಾದಿ ಹಬ್ಬವು ಈ ಸಮಗ್ರ ದೃಷ್ಟಿಕೋನವನ್ನು ನಮಗೆ ಪರಿಚಯಿಸುತ್ತದೆ.

ಆಧುನಿಕ ಜೀವನಶೈಲಿಯಲ್ಲಿ ನಾವು ಈ ಸಂಪ್ರದಾಯಗಳನ್ನು ಕೆಲವೊಮ್ಮೆ ಕೇವಲ ಆಚರಣೆಯ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸುತ್ತೇವೆ. ಆದರೆ ಅವುಗಳ ಹಿಂದಿರುವ ವೈಜ್ಞಾನಿಕ ಮಹತ್ವವನ್ನು ಅರಿತು ಅನುಸರಿಸಿದರೆ, ನಮ್ಮ ಆರೋಗ್ಯವನ್ನು ಸುಧಾರಿಸಲು ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಹೀಗಾಗಿ, ಈ ಯುಗಾದಿಯಲ್ಲಿ ಬೇವು–ಬೆಲ್ಲ ಸೇವನೆ, ಕಾಯಿ ಮಾವಿನ ಉಪಯೋಗ ಮತ್ತು ತೈಲಾಭ್ಯಂಗದಂತಹ ಸಂಪ್ರದಾಯಗಳನ್ನು ಕೇವಲ ಆಚರಣೆಗಳಾಗಿ ನೋಡದೇ, ಅವುಗಳ ವೈಜ್ಞಾನಿಕ ಅರ್ಥವನ್ನು ತಿಳಿದು ಜೀವನದಲ್ಲಿ ಅಳವಡಿಸೋಣ. ಸನಾತನ ಸಂಪ್ರದಾಯವು ನಮಗೆ ನೀಡಿರುವ ಈ ಅಮೂಲ್ಯ ಆರೋಗ್ಯ ಮಾರ್ಗವನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.