ಬಾಗಲಕೋಟೆ: ಮಹಿಳಾ ಕುಲಕ್ಕೆ ಸ್ಫೂರ್ತಿಯಾಗಿರುವ ಹೇಮರಡ್ಡಿ ಮಲ್ಲಮ್ಮ ಪ್ರೀತಿ, ತ್ಯಾಗ, ಸಹನೆಯ ಸಂಕೇತವಾಗಿದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದರು.

ನಗರದ ಹೇಮರಡ್ಡಿ ಮಲ್ಲಮ್ಮ ಸೇವಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮನ 604ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಲ್ಲಮ್ಮ ಸದ್ಗುಣಿಯಾಗಿ ಆದರ್ಶದ ಬದುಕು ಬಾಳಿ ದೇವತೆಯ ಸ್ಥಾನ ಪಡೆದು ಪೂಜಿತಗೊಳ್ಳುವ ಮೂಲಕ ಮಹಿಳಾ ಕುಲಕ್ಕೆ ಸ್ಫೂರ್ತಿಯಾಗಿದ್ದಾರೆ. ಮಲ್ಲಮ್ಮನ ತತ್ವಾದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಸಂಸದ ಪಿ.ಸಿ.ಗದ್ಧಿಗೌಡರ ಮಾತನಾಡಿ, ಹೇಮರಡ್ಡಿ ಮಲ್ಲಮ್ಮನ ಆದರ್ಶಮಯ ಬದುಕು ಜೀವನದ ಸಾರ್ಥಕತೆಗೆ ಪ್ರೇರಣೆಯಾಗಿದೆ. ಮಹಾತ್ಮರು, ಶರಣರ ಜಯಂತಿ ಆಚರಣೆಗಳು ಮನುಕುಲದ ಬದುಕಿಗೆ ಪೂರಕವಾಗಿವೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ಭಕ್ತಿ, ಪ್ರೀತಿ, ಸಹಕಾರದ ಸಾಕಾರಮೂರ್ತಿ ಎನಿಸಿಕೊಂಡಿದ್ದ ಹೇಮರಡ್ಡಿ ಮಲ್ಲಮ್ಮ ಮಹಿಳಾ ಕುಲದ ದಿಕ್ಸೂಚಿ ಆಗಿದ್ದಾರೆ ಎಂದು ಹೇಳಿದರು.

ಆಧ್ಯಾತ್ಮಿಕ ಚಿಂತಕ ಪ್ರದೀಪ ಗುರೂಜಿ ಮಾತನಾಡಿ, ಹೇಮರಡ್ಡಿ ಮಲ್ಲಮ್ಮ ಮನುಕುಲವನ್ನು ಆದರ್ಶದ ಬೆಳಕಿನೆಡೆಗೆ ಕೊಂಡೊಯ್ಯದ ಮಹಾನ್ ಶರಣೆ ಎಂದರು.

ರಡ್ಡಿ ಗುರುಪೀಠದ ವೇಮನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಎಂ.ಎನ್.ಪಾಟೀಲ ಮಾತನಾಡಿದರು. ಆರ್.ಎಲ್.ಕಟಗೇರಿ, ಮಲ್ಲಿಕಾರ್ಜುನ ಮೆಳ್ಳಿಗೇರಿ, ಡಿ.ಎಂ.ಫೈಲ್, ಚಂದ್ರಶೇಖರ ಕಾಮಾ, ರಾಮನಗೌಡ ಜಕ್ಕನಗೌಡ್ರ, ಪಂಡಿತ ಮಾಚಾ, ನಾರಾಯಣ ಹಾದಿಮನಿ, ಚಂದ್ರಶೇಖರ ಅರಳಿಮಟ್ಟಿ, ಮಾಲತೇಶ ಅಮಾತೆಪ್ಪನವರ ಉಪಸ್ಥಿತರಿದ್ದರು

ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಮಂಡಳಿ ಸದಸ್ಯರು ವೇಮನ ವಚನ ಸುಧೆ ಪ್ರಸ್ತುತಪಡಿಸಿದರು. ನಂತರ ಗದುಗಿನ ಪಂಚಾಕ್ಷರ ಗವಾಯಿಗಳವರ ನಾಟ್ಯ ಸಂಘದ ಕಲಾವಿದರಿಂದ ‘ಸಂಪೂರ್ಣ ಹೇಮರಡ್ಡಿ ಮಲ್ಲಮ್ಮ’ ನಾಟಕ ಪ್ರದರ್ಶನಗೊಂಡಿತು.

ಎಸ್.ಟಿ.ಬೆಳಕೊಪ್ಪದ ಸ್ವಾಗತಿಸಿದರು. ಸೇವಾ ಸಮಿತಿ ಅಧ್ಯಕ್ಷ ಮಹೇಶ ಕಕರಡ್ಡಿ ಪ್ರಾಸ್ತಾವಿಕ ಮಾತನಾಡಿದರು. ಸೋನಾ ಕಟಗೇರಿ ಮತ್ತು ಪಾಂಡು ಕಟಗೇರಿ ನಿರೂಪಿಸಿದರು. ನಕುಲ ಬೆಳ್ಳುಬ್ಬಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-19-1412754563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.