ಬೈಲಹೊಂಗಲ: ‘ಅನಾದಿ ಕಾಲದಿಂದಲೂ ಭಾರತ ದೇಶ ಸಂಪ್ರದಾಯಗಳಿಗೆ ಹೆಸರುವಾಸಿಯಾಗಿದೆ. ಮಠಗಳು ಅದರ ಆದರ್ಶದಲ್ಲೇ ಸಾಗಬೇಕು. ಭಕ್ತರ ಉದ್ಧಾರವೇ ಮಠಗಳ ಮುಖ್ಯ ಗುರಿ' ಎಂದು ಮುರಗೋಡ ಮಹಾಂತ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

ನಗರದ ಹೊಸೂರ ರಸ್ತೆಯಲ್ಲಿನ ಶ್ರೀ ಭಗಳಾಂಭಾದೇವಿ ದೇವಸ್ಥಾನದಲ್ಲಿ ನಡೆದ 2026 ನೇ ಸಾಲಿನ ಶ್ರೀ ಭಗಳಾಂಭಾದೇವಿ ಜಾತ್ರಾ ಮಹೋತ್ಸವ ಹಾಗೂ ಶ್ರೀ ಭಗಳಾಂಭಾದೇವಿ ಮಂಗಳ ಕಾರ್ಯಾಲಯ ಉದ್ಘಾಟಣಾ ಹಾಗೂ ಸಾಧಕರಿಗೆ ಮಾತಾಶ್ರೀ ಭಗಳಾಂಬಾದೇವಿ ಪ್ರಶಸ್ತಿ ವಿತರಣಾ ಸಮಾರಂಭ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

‘ಯುವ ಜನಾಂಗ ಆಧ್ಯಾತ್ಮದತ್ತ ಸಾಗಬೇಕು. ಬದುಕಿನಲ್ಲಿ ಸಾಧನೆ ಮಾಡಿ ಇತರರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು’ ಎಂದರು.

ಸಾನ್ನಿಧ್ಯ ವಹಿಸಿದ್ದ ಸತ್ತಿಗೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಮಠಗಳು ಬದುಕಿಗೆ ಸನ್ಮಾರ್ಗ ಕಲ್ಪಿಸಲಿದ್ದು ಮನದ ಮೈಲಿಗೆ, ಜಂಜಡ ಕಳೆಯುವಲ್ಲಿ ಸ್ಪೂರ್ತಿಯಾಗಿದ್ದು ಗುರುವಿನ ಮಾರ್ಗದರ್ಶನದಲ್ಲಿ ಸಾಗಿ ನಡೆಯಬೇಕು’ ಎಂದರು.

ಧರ್ಮಾಧಿಕಾರಿ ಡಾ.ವೀರಯ್ಯ ಸ್ವಾಮಿ ಹಿರೇಮಠ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುರಗೋಡದ ಗಣ್ಯರಾದ ವೀರಭದ್ರಪ್ಪ ದೇಸಾಯಿ, ಅಶೋಕ ಶಟ್ಟರ, ವಿಶ್ವ ಹಿಂದೂ ಪರಿಷತ್ತಿನ್ ಜಿಲ್ಲಾ ಘಟಕದ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ, ಪುರಸಭೆ ಮಾಜಿ ಸದಸ್ಯ ವಿರೂಪಾಕ್ಷ ವಾಲಿ, ಸೋಮೇಶ್ವರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ವಕೀಲ ಜಿ.ಬಿ.ಗಿರಿಜನ್ನವರ, ವೈದ್ಯ ಮಹಾಂತೇಶ ಪುರಾಣಿಮಠ, ಗೀತಾ ಪುರಾಣಿಕಮಠ, ಹಿರಿಯರಾದ ಬಸಪ್ಪ ಪರುಣವರ, ಶಿವನಗೌಡಾ ಪಾಟೀಲ, ದುಂಡಯ್ಯ ಹಿರೇಮಠ, ಉದ್ಯಮಿ ಶಿವರಾಜ ಪಟ್ಟಣಶಟ್ಟಿ, ಮಹಮ್ಮದ ಶಾ ನಧಾಪ್, ರಾಯಣಗೌಡಾ ಪಾಟೀಲ, ಮಹಾಂತೇಶ ದಾಡಿಗುಂಡಿ, ನಾಗಮ್ಮ ಬಡ್ಲಿ, ಅನಿತಾ ಹೋಟಿ, ಡಿ.ಎನ್.ಅಕ್ಕಿ, ಬಸವರಾಜ ಹೊಂಗಲ ವೇದಿಕೆ ಮೇಲಿದ್ದರು.

ಪತ್ರಕರ್ತ ಮಹಾಂತೇಶ ರಾಜಗೋಳಿ ಸ್ವಾಗತಿಸಿದರು. ಬಸವರಾಜ ದೊಡಮನಿ ನಿರೂಪಿಸಿದರು. ಕಿರಣ ಕುಡಚಿಮಠ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಪ್ರಶಸ್ತಿ ವಿತರಣೆ ಜರುಗಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-21-1123139616

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.