ಬಳ್ಳಾರಿ: ‘ಹಿಂದೂ ಧರ್ಮದ ಪುನರುಜ್ಜೀವನಕ್ಕೆ ಆದಿ ಶಂಕರಾಚಾರ್ಯರ ಕೊಡುಗೆ ಅಪಾರ. ಸಮಾಜವನ್ನು ಸುಸ್ಥಿತಿಗೆ ಕೊಂಡೊಯ್ಯುವಲ್ಲಿ ಅವರ ಪಾತ್ರ ಮಹತ್ವದ್ದು’ ಎಂದು ಬಾಬು ಜಗಜೀವನ್ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತ (ಲಿಡ್ಕರ್)ದ ಅಧ್ಯಕ್ಷ ಮುಂಡರಗಿ ನಾಗರಾಜ್ ಹೇಳಿದರು.

ನಗರದ ಭಾರತಿ ತೀರ್ಥ ಸಭಾ ಭವನದಲ್ಲಿ ಮಂಗಳವಾರ ನಡೆದ ಶಂಕರಾಚಾರ್ಯ ಜಯಂತಿಯಲ್ಲಿ ಮಾತನಾಡಿದ ಅವರು, ‘ಶೃಂಗೇರಿ, ದ್ವಾರಕಾ, ಪುರಿ ಹಾಗೂ ಬದರಿನಾಥದಲ್ಲಿ ಮಠಗಳನ್ನು ಸ್ಥಾಪಿಸಿ ಧಾರ್ಮಿಕ ಏಕತೆಯನ್ನು ಶಂಕರಾಚಾರ್ಯರು ಬಲಪಡಿಸಿದರು’ ಎಂದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಅವರು, ‘ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ಜಗತ್ತಿಗೆ ಮಹತ್ವದ ಕೊಡುಗೆ’ ಎಂದು ಹೇಳಿದರು.

ರಾಮಕೃಷ್ಣ ಆಶ್ರಮದ ಸ್ವಾಮಿ ಮಂಗಳನಾಥಾನಂದಜಿ ಮಹಾರಾಜ್ ಅವರು ಶಂಕರಾಚಾರ್ಯರ ಜೀವನ ಮತ್ತು ತತ್ವಗಳ ಕುರಿತು ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ನಡೆಯಿತು. ವಿವಿಧ ಗಣ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಕುರುಗೋಡು: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಆದಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು.

ನರಸಪ್ಪ ತಹಶೀಲ್ದಾರ್ ಪೂಜೆ ಸಲ್ಲಿಸಿ ಜಯಂತಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಭಾರತದ ಆತ್ಮೀಯ ಚಿಂತನೆಗಳಿಗೆ ಹೊಸ ದಿಕ್ಕು ನೀಡಿದ ಅದ್ವೈತತತ್ವದ ಪ್ರವರ್ಧಕ ಆದಿ ಶಂಕರಾಚಾರ್ಯರು ನಮ್ಮ ಸಂಸ್ಕೃತಿ ಮತ್ತು ಸನಾತನ ಧರ್ಮದ ಶಾಶ್ವತ ದೀಪಸ್ತಂಭರಾಗಿದ್ದಾರೆ ಎಂದರು.

ಬ್ರಹ್ಮ ಸತ್ಯಂ ಜಗತ್ ಮಿಥ್ಯಂ ಎಂಬ ಮಹಾ ಬೋಧನೆ ಮೂಲಕ ಜೀವ ಮತ್ತು ಪರಮಾತ್ಮ ಒಂದೇ ಎಂಬ ಮಹತ್ವದ ಸಂದೇಶವನ್ನು ಜಗತ್ತಿಗೆ ಸಾರಿದ ಅವರು, ಭಕ್ತಿಜ್ಞಾನ ಮತ್ತು ವೈರಾಗ್ಯದ ಮಾರ್ಗದಲ್ಲಿ ಮನುಕುಲವನ್ನು ನಡೆಸಿದವರು. ಅವರ ತತ್ವ ಮತ್ತು ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗ್ರೇಡ್-2 ತಹಶೀಲ್ದಾರ್ ಮಲ್ಲೇಶಪ್ಪ, ಶಿರಸ್ತೇದಾರ್ ರಾಜಶೇಖರ್, ಉಪ ತಹಶೀಲ್ದಾರ್ ರವೀಂದ್ರ ಬಾಬು, ಕಂದಾಯ ನಿರೀಕ್ಷಕ ಭದ್ರಯ್ಯ, ರವಿ, ಸ್ವಾತಿ ಮತ್ತು ರಾಜೇಶ್ವರಿ ಇದ್ದರು.

ಕೂಡ್ಲಿಗಿ: ‘ಆದಿಗುರು ಶಂಕರಾಚಾ ರ್ಯರು ಸಾಂಸ್ಕೃತಿಕ ಮತ್ತು ಧಾರ್ಮಿಕ ಅವನತಿಯ ಸಂದರ್ಭದಲ್ಲಿ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು’ ಎಂದು ಉಪ ತಹಶೀಲ್ದಾರ್ ರಾಘವೇಂದ್ರ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಶಂಕರಾಚಾರ್ಯರ ಜಯಂತ್ಯುತ್ಸ ವದಲ್ಲಿ ಮಾತನಾಡಿ, ಶಂಕರಾಚಾರ್ಯರು ಆಳವಾದ ಆಧ್ಯಾತ್ಮಿಕ ಮತ್ತು ಬೌದ್ಧಿಕ ಮೈಲಿಗಲ್ಲುಗಳನ್ನು ಸಾಧಿಸಿದವರು ಎಂದು ಬಣ್ಣಿಸಿದರು.

ಶಂಕರಾಚಾರ್ಯರ ಜೀವನವನ್ನು ಪ್ರದರ್ಶಿಸುವ ಕನಿಷ್ಠ 14 ಪ್ರಸಿದ್ಧ ಜೀವನ ಚರಿತ್ರೆಗಳಿವೆ. ಅವುಗಳಲ್ಲಿ ಹೆಚ್ಚಿನವು ಶಂಕರ ವಿಜಯ ಅಥವಾ ಗುರು ವಿಜಯ, ಶಂಕರ ಅಭ್ಯುದಯ ಮತ್ತು ಶಂಕರಾಚಾರ್ಯ ಚರಿತಾ ಎಂದು ಕರೆಯಲ್ಪಡುತ್ತವೆ ಎಂದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ವೆಂಕಟೇಶ್, ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಜಿ.ಕೆ.ಮುರುಳೀಧರ, ಕಾರ್ಯದರ್ಶಿ ವಿರೂಪಾಕ್ಷ ಮೂರ್ತಿ, ಜೋಯಿಸ್ ಹಯವಧನಾಚಾರ್, ಚಂದ್ರಶೇಖರ, ಮಾಲತೇಶ್ ಭಟ್, ಕಂದಾಯ ಸಿಬ್ಬಂದಿ ಮಂಜುನಾಥ, ಪ್ರಭು ಕುಮಾರ್, ಸವಿತಾ, ಸುನೀತಾ, ರಾಧ, ವಿದ್ಯಾ ಚೌಹಾಣ್ ಇತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-25-1444538561

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.