ತೆಕ್ಕಲಕೋಟೆ: ‘ವಾಲ್ಮೀಕಿ ಸಮಾಜದವರು ಸೇವಾ ಕಾರ್ಯದ ಜೊತೆಗೆ ಶೈಕ್ಷಣಿಕ, ಧಾರ್ಮಿಕ ಅರಿವು ಮೂಡಿಸಿಕೊಳ್ಳಬೇಕು’ ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ಪ್ರಸನ್ನಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ವಾಲ್ಮೀಕಿ ನಗರದಲ್ಲಿ ಬುಧವಾರ ನಡೆದ ನೂತನ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಮಂಗಳವಾರ ನೂತನ ಶಿಲಾ ಮೂರ್ತಿ ಹಾಗೂ ಕಳಸ ಮೆರವಣಿಗೆಯು ದ್ಯಾವಮ್ಮ ದೇವಸ್ಥಾನದದಿಂದ ಆರಂಭವಾಗಿ ಸಕಲ ವಾದ್ಯಮೇಳದೊಂದಿಗೆ ಜೋಡೆತ್ತಿನ ಬಂಡಿಯ ಮೂಲಕ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಸಾಗಿತು. ಈ ವೇಳೆ ಭಕ್ತರು ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ತುಲಾಭಾರ ಸೇವೆ ಸಲ್ಲಿಸಿದರು.

ಮೂರು ದಿನಗಳ ಕಾಲ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ವಾಲ್ಮೀಕಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಉಡೆಗೋಳ ನರಸಿಂಹ ನಾಯಕ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ, ಮುಖಂಡರಾದ ನರೇಂದ್ರ ಸಿಂಹ, ಪಿ.ತಿಮ್ಮಪ್ಪ, ನಾಗಪ್ಪ, ದೇವೇಂದ್ರ, ಚಿದಾನಂದಪ್ಪ, ಸಿದ್ದಪ್ಪ, ಲಚ್ಚಪ್ಪ, ಮಾರೆಪ್ಪ, ಚಿದಾನಂದ, ಪಂಪಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-25-1265091278

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.