ಕೊಲ್ಹಾರ: ಶಿಕ್ಷಣ ಪ್ರಸಾರ ಹಾಗೂ ಸಮಾಜ ಸುಧಾರಣೆಯ ಹರಿಕಾರ ಬಂಥನಾಳ ಸಂಗನಬಸವ ಶಿವ ಯೋಗಿಗಳ 125ನೇ ಜಯಂತಿ ಉತ್ಸವ ಸ್ಮರಣಾರ್ಥವಾಗಿ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹಾಗೂ ಸಾಹಿತಿ ಜಗದೀಶ್ವರ ಗು. ಸಾಲಳ್ಳಿ ಸಂಪಾದಿಸಿದ ‘ಅಕ್ಷರ ಕ್ರಾಂತಿಯ ನೇಗಿಲಯೋಗಿ ಬಂಥನಾಳ ಶಿವಯೋಗಿ’ ಕೃತಿಯನ್ನು ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠದ ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ‘ಬಂಥನಾಳ ಶಿವಯೋಗಿಗಳು ಉತ್ತರ ಕರ್ನಾಟಕದ ಭಾಗದಲ್ಲಿ ದಾಖಲೆಯ ಅಕ್ಷರ ಕ್ರಾಂತಿ ಮತ್ತು ಧಾರ್ಮಿಕ ಕಾರ್ಯ ಮಾಡಿದ ಶ್ರೇಷ್ಠ ಮಹಾನ್ ಚೇತನ. ಅವರ ತತ್ವಗಳನ್ನು ಇಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಕೃತಿಗಳು ಸಹಕಾರಿಯಾಗಲಿವೆ’ ಹೇಳಿದರು.

ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ, ಬಂಥನಾಳ ಮಠದ ವೃಷಭಲಿಂಗ ಸ್ವಾಮೀಜಿ, ಮಸಬಿನಾಳದ ಸಿದ್ಧರಾಮ ಸ್ವಾಮೀಜಿ, ಹೂವಿನಹಿಪ್ಪರಗಿಯ ದ್ರಾಕ್ಷಾಯಿಣಿ ಅಮ್ಮನವರು ಸಾನ್ನಿಧ್ಯ ವಹಿಸಿದ್ದರು.

ಆಂಧ್ರಪ್ರದೇಶ ಬಸವ ಸಮಿತಿ ಅಧ್ಯಕ್ಷ ನಾಗನಾಥ ಮಾಶೆಟ್ಟಿ, ಗುಲ್ಬರ್ಗ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎಂ.ಹಿರೇಮಠ, ವೇದ ಅಕಾಡೆಮಿಯ ದಯಾನಂದ ಕೆಲೂರ, ಸಹ ಸಂಪಾದಕಿ ಗಿರಿಜಾ ಪಾಟೀಲ ಮುಂತಾದವರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-26-1847223432

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.