ಬಸವಕಲ್ಯಾಣ: ನಗರದಲ್ಲಿ ಗುರುವಾರ ಬಸವಜಯಂತಿ ನಿಮಿತ್ತ ಬಸವೇಶ್ವರ ದೇವಸ್ಥಾನದ ಮೂರು ದಿನಗಳ ಜಾತ್ರೆ ಅಂಗವಾಗಿ ಕಾರುಗಳ ಬೃಹತ್ ರ್ಯಾಲಿ ನಡೆಸಲಾಯಿತು.

ಪುಷ್ಪಗಳಿಂದ ಸಿಂಗರಿಸಿದ ಕಾರೊಂದರ ಮೇಲೆ ಇಟ್ಟಿದ್ದ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ ತೇರು ಮೈದಾನದಿಂದ ಕಾರುಗಳ ರ್ಯಾಲಿ ಆರಂಭಿಸಲಾಯಿತು. ಎಲ್ಲ ಕಾರುಗಳಿಗೂ ಷಟಸ್ಥಲ ಧ್ವಜಗಳನ್ನು ಕಟ್ಟಲಾಗಿತ್ತು. ಧ್ವನಿವರ್ಧಕದ ಮೂಲಕ ವಚನಗಳ ಝೇಂಕಾರ ಮೊಳಗಿತು. ಕೆಲವೊಂದಕ್ಕೆ ಭಾವಚಿತ್ರಗಳನ್ನು ಕಟ್ಟಲಾಗಿತ್ತು. ಕಾರುಗಳು ಸಾಲಾಗಿ ಹೋಗುವುದನ್ನು ಜನರು ನಿಂತು ನೋಡುವ ದೃಶ್ಯ ಗಮನ ಸೆಳೆಯುವಂತಿತ್ತು.

ಮುಖ್ಯ ರಸ್ತೆಯ ಮೂಲಕ ಕೋಟೆ ಮಾರ್ಗವಾಗಿ 108 ಅಡಿ ಎತ್ತರದ ಬಸವಣ್ಣನವರ ಪುತ್ಥಳಿಯ ಎದುರಿನಿಂದ ಕಾರುಗಳ ರ್ಯಾಲಿ ನಡೆಯಿತು. ಅಲ್ಲಲ್ಲಿ ಕಾರುಗಳ ಮೇಲೆ ಪುಷ್ಪಗಳನ್ನು ಸಿಂಪಡಿಸಿ ಸ್ವಾಗತಗೈಯಲಾಯಿತು.

ಸಿದ್ಧಬಸವ ಕಬೀರ ಸ್ವಾಮೀಜಿ ಚಾಲನೆ ನೀಡಿದರು. ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಮಲ್ಲಿಕಾರ್ಜುನ ಕುರಕೋಟೆ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಬಸವರಾಜ ಬಾಲಿಕಿಲೆ, ಸುನಿಲ ರಾಯವಾಡೆ, ಈರಣ್ಣ ಹಲಶೆಟ್ಟೆ, ಬಸವರಾಜ ಕೋರಕೆ, ವಿವೇಕಾನಂದ ಹೊದಲೂರೆ, ಬಸವರಾಜ ತೊಂಡಾರೆ, ಬದ್ರಿನಾಥ ಪಾಟೀಲ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-33-923592273

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.