ಬಸವಾಪಟ್ಟಣ: ‘ಮಾನವ ಜನ್ಮದ ಸಾರ್ಥಕತೆಗಾಗಿ ಅಧ್ಯಾತ್ಮ ಚಟುವಟಿಕೆಗಳು ನಮ್ಮ ಜೀವನದ ಉಸಿರಾಗಬೇಕು’ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಾಗತಿಕ ಕೇಂದ್ರವಾದ ರಾಜಸ್ಥಾನದ ಮೌಂಟ್ ಅಬುವಿನ ಮಧುವನದ ಸಂಚಾಲಕಿ ಸವಿತಾ ಅಕ್ಕ ಹೇಳಿದರು.

ಅವರು ಬುಧವಾರ ಇಲ್ಲಿನ ವೆಂಕಟರಮಣ ಸ್ವಾಮಿ ದೇಗುಲದ ರಸ್ತೆಯಲ್ಲಿ ಈಶ್ವರೀಯ ವಿ.ವಿ. ವತಿಯಿಂದ ನಿರ್ಮಿಸಲಾದ ಶಿವಜ್ಞಾನಾಮೃತ ಭವನವನ್ನು ಉದ್ಘಾಟಿಸಿ ಮಾತನಾಡಿದರು.

‘ಮನುಷ್ಯ ತನ್ನ ಜೀವನೋಪಾಯಕ್ಕಾಗಿ ಅವಲಂಬಿಸಿರುವ ಉದ್ಯೋಗಗಳು, ವ್ಯವಹಾರಗಳಲ್ಲಿ ಸತ್ಯ ನಿಷ್ಠೆ, ಧಾರ್ಮಿಕ ಮನೋಭಾವನೆ, ಶಾಂತಿಯುತ ಸಹಬಾಳ್ವೆ, ಎಲ್ಲರೊಂದಿಗೆ ಪ್ರೀತಿ ವಾತ್ಸಲ್ಯದ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇದರೊಂದಿಗೆ ಇವುಗಳನ್ನು ಸಂಪೂರ್ಣವಾಗಿ ತಮ್ಮದನ್ನಾಗಿಸಿಕೊಳ್ಳಲು ಪ್ರತಿದಿನ ನಿರ್ದಿಷ್ಟ ಅವಧಿಯ ಧ್ಯಾನವನ್ನು ಮಾಡುವುದರೊಂದಿಗೆ ಮನಸ್ಸಿನ ಚಂಚಲತೆಯನ್ನು ಹೋಗಲಾಡಿಸಿಕೊಂಡು, ಈ ಜಗತ್ತಿನ ಪರಿಪಾಲಕನಾದ ಪರಮಾತ್ಮನ ಅನುಸಂಧಾನದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಹೇಳಿದರು.

ದಾವಣಗೆರೆಯ ಬ್ರಹ್ಮಕುಮಾರಿ ಈಶ್ವರೀಯ ವಿ.ವಿ. ಶಾಖೆಯ ಸಂಚಾಲಕಿ ಲೀಲಾ ಅಕ್ಕ ಮಾತನಾಡಿ, ‘ಬಸವಾಪಟ್ಟಣದಲ್ಲಿ ಕೇವಲ ಕಡಿಮೆ ಅವಧಿಯಲ್ಲಿ ಸುಸಜ್ಕಿತವಾದ ಬ್ರಹ್ಮಕುಮಾರ ಬಾಬಾ ಅವರ ನಿಲಯ ಸ್ಥಾಪನೆಯಾಗಿ ಅಧ್ಯಾತ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಎಲ್ಲರನ್ನೂ ಸ್ವಾಗತಿಸುತ್ತಿದೆ. ಇಂತಹ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಎಲ್ಲಾ ದಾನಿಗಳು ಪರಮಾತ್ಮನ ಪ್ರೀತಿಗೆ ಪಾತ್ರರಾಗಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಮಲೇಬೆನ್ನೂರು ಈಶ್ವರೀಯ ವಿ.ವಿ. ಶಾಖೆಯ ಸಂಚಾಲಕಿ ಶಾಂತಾ ಅಕ್ಕ, ಬಸವಾಪಟ್ಟಣ ಕೇಂದ್ರದ ಸಂಚಾಲಕಿ ನೀಲಾ ಅಕ್ಕ ಮಾತನಾಡಿದರು.

ಭಕ್ತಿರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-43-349359774

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.