ಬೆಳಗಾವಿ: ‘ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ, ಉತ್ತಮ ಆಹಾರಚರ್ಯೆ, ಉತ್ತಮ ನಡುವಳಿಕೆ ನೀಡುವುದು ಇಂದಿನ ಅಗತ್ಯ’ ಎಂದು ಕೆ.ಎಲ್ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸಲಹೆ ನೀಡಿದರು.

ಕೋಟೆ ಆವರಣದಲ್ಲಿನ ಕಮಲ ಬಸದಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಧರ್ಮಚಕ್ರ ಆರಾಧನಾ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ಜೈನ ಧರ್ಮದ ಇತಿಹಾಸ ಅಪಾರವಾಗಿದೆ. ಇಲ್ಲಿನ ಕಮಲ ಬಸದಿ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ಈ ಹಿಂದೆಯೂ ಈ ಬಸದಿ ಜಿರ್ಣೋದ್ದಾರಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಈ ಬಾರಿ ಈ ಬಸದಿಯನ್ನು ಇನ್ನಷ್ಟು ಸುಶೋಭೀಕರಣ ಮಾಡುವ ಮೂಲಕ ಈ ಬಸದಿಗೆ ಐತಿಹಾಸಿಕ ಸ್ಥಳಕ್ಕೆ ಇನ್ನಷ್ಟು ಮೆರಗು ತಂದಿದೆ’ ಎಂದರು.

ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ‘ಧಾರ್ಮಿಕ ಕಾರ್ಯಗಳು ಸಂಸ್ಕಾರ ಬೆಳೆಸಲು ಸಹಕಾರಿಯಾಗುತ್ತವೆ. ಸದಾ ಧರ್ಮದ ಚಿಂತನೆ ಮತ್ತು ಧರ್ಮದ ಪಾಲನೆಯಲ್ಲಿ ಜೀವನ ನಡೆಸಿ ಸಕಲ ಸಮಾಜಗಳ ಉನ್ನತಿಗೆ ಜೈನ ಸಮಾಜ ಶ್ರಮಿಸುತ್ತಿರುವ ಕಾರ್ಯ ಶ್ಲಾಘನೀಯ’ ಎಂದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಯಾವುದೇ ವ್ಯಕ್ತಿ ಹಣದಿಂದ ಶ್ರೀಮಂತನಾಗುವುದಿಲ್ಲ. ಧರ್ಮ ಆಚರಣೆ ಮತ್ತು ಸಂಸ್ಕಾರದಿಂದ ಮಾತ್ರ ಶ್ರೀಮಂತನಾಗಿರಬೇಕು. ಆಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ’ ಎಂದರು.

ಭರತ ಪಾಟೀಲ, ಡಾ.ರಮೇಶ ದೊಡ್ಡಣ್ಣವರ, ಸನ್ಮತಿ ಕಸ್ತೂರಿ, ಅಭಿನಂದನ ಜಾಬನ್ನವರ, ಹೀರಾಚಂದ ಕಲಮನಿ ಮೊದಲಾದವರು ಇದ್ದರು. ಪ್ರಭಾಕರ ಕೋರೆ, ಅನಿಲ ಬೆನಕೆ, ಅಭಯ ಪಾಟೀಲ, ವಕೀಲ ಸದಾಶಿವ ಶಾಂತನಗೌಡ ಮತ್ತು ರವಿರಾಜ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ ಮುನ್ನ 150 ಮಕ್ಕಳಿಗೆ ಮೌಂಜಿ ಬಂಧನ ಉಪನಯನದ ಕಾರ್ಯಕ್ರಮ ನಡೆಯಿತು. ಆಚಾರ್ಯ ಧರ್ಮಸೇನ ಮುನಿಗಳು ಮೌಂಜಿ ಬಂಧನ ಮಕ್ಕಳಿಗೆ ವೃತಧಾರಣೆ ಮತ್ತು ನಿಯಮಗಳನ್ನು ನೀಡಿದರು. ವಿನೋದ ದೊಡ್ಡಣ್ಣವರ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಪಂಡಿತರಾದ ಅಮೋಲ ಉಪಾಧ್ಯೆ, ಮಹಾವೀರ ಉಪಾಧ್ಯೆ ಧಾರ್ಮಿಕ ವಿಧಿ ವಿಧಾನಗಳು ನಡೆಸಿಕೊಟ್ಟರು. ಪದ್ಮರಾಜ ವೈಜನ್ನವರ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-21-394910822

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.