ಬೈಲಹೊಂಗಲ: ‘ಲಿಂಗೈಕ್ಯ ಗಂಗಾಧರ ಸ್ವಾಮೀಜಿ ಅವರು ಕೇವಲ ಧಾರ್ಮಿಕ ಗುರುಗಳಲ್ಲ, ಅವರು ಸಮಾಜದ ದಿಕ್ಕು ತೋರಿದ ಮಹಾನ್ ದಾರ್ಶನಿಕರು. ಶಿಕ್ಷಣವೇ ಸಮಾಜದ ಶಕ್ತಿ ಎಂದು ನಂಬಿ, ಬಡತನದಲ್ಲಿದ್ದ ಮಠವನ್ನು ತಮ್ಮ ಪರಿಶ್ರಮ, ದೂರದೃಷ್ಟಿ ಮತ್ತು ಸೇವಾಭಾವದಿಂದ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಕೇಂದ್ರವಾಗಿ ರೂಪಿಸಿರುವ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಪೀಠಾಧಿಪತಿ ಪ್ರಭುನೀಲಕಂಠ ಸ್ವಾಮೀಜಿ ಹೇಳಿದರು.

ನಗರದ ಮೂರುಸಾವಿರಮಠದಲ್ಲಿ ಗುರುವಾರ ಶಿಕ್ಷಣ ಕ್ಷೇತ್ರದ ಹರಿಕಾರ ಲಿಂಗೈಕ್ಯ ಗಂಗಾಧರ ಸ್ವಾಮೀಜಿ 17ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಂಗಾಧರ ಶ್ರೀಗಳು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಕಾರ್ಯಗಳನ್ನು ನಡೆಸಿ ರಾಜ್ಯಮಟ್ಟದಲ್ಲಿ ಮಠಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅವರ ಸೇವಾ ಕಾರ್ಯಗಳು ಕೇವಲ ಮಠದ ವಲಯಕ್ಕೆ ಸೀಮಿತವಾಗಿರಲಿಲ್ಲ. ಗ್ರಾಮೀಣ ಭಾಗದ ಜನರಿಗೆ ಶಿಕ್ಷಣದ ಬೆಳಕು ತಲುಪುವಂತೆ ಮಾಡಿ, ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸಿದ್ದಾರೆ. ಕೃಷಿ ಕಾಯಕದಿಂದ ಆರಂಭಿಸಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಅವರ ಜೀವನವೇ ಒಂದು ಪ್ರೇರಣಾದಾಯಕ ಅಧ್ಯಾಯವಾಗಿಸಿದ್ದಾರೆ. ಅವರು ಹಾಕಿದ ಅಡಿಪಾಯದ ಮೇಲೆ ಮಠವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಉತ್ತಮವಾಗಿ ಬೆಳೆಯುತ್ತಿದೆ’ ಎಂದರು.

ಮಾದನ ಹಪ್ಪರಗಿ ಅಭಿನವ ಶಿವಲಿಮಗ ಸ್ವಾಮೀಜಿ, ಚಿಕ್ಕಲಪರ್ವಿ ಸದಾಶಿವ ಸ್ವಾಮೀಜಿ, ದೇವರಶೀಗಹಳ್ಳಿ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಳಗಾನೂರ ಸಿದ್ಧಬಸವ ಸ್ವಾಮೀಜಿ, ಯಡ್ರಾವಿಯ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಲಿಂಗೈಕ್ಯ ಗಂಗಾಧರ ಸ್ವಾಮೀಜಿ ಅವರ ಗದ್ದುಗೆಗೆ ಬೆಳಿಗ್ಗೆ ಮಹಾ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಮಧ್ಯಾಹ್ನ 12 ಗಂಟೆಗೆ ಭಕ್ತರಿಗಾಗಿ ಮಹಾಪ್ರಸಾದ ನಡೆಯಿತು.

ಎಸ್.ಎನ್.ವಿ.ವಿ.ಎಸ್ ಸಂಸ್ಥೆಯ ನಿಯೋಜಿತ ವೃದ್ಧಾಶ್ರಮ ಹಾಗೂ ನೂತನವಾಗಿ ಪ್ರಾರಂಭವಾಗುತ್ತಿರುವ ಪ್ಯಾರಾಮೆಡಿಕಲ್ ಕೋರ್ಸ್ ಉದ್ಘಾಟಿಸಲಾಯಿತು.

ಗುರು ಮೆಟಗುಡ್ಡ, ಶಿವಾನಂದ ಬಡ್ಡಿಮನಿ, ಸಂಗಯ್ಯ ಯರಗಂಬಳಿಮಠ, ಡಾ.ಸುಭಾಸ ಬಗಾಡೆ, ಪ್ರಾಚಾರ್ಯ ಎನ್.ಎಸ್.ಚಿಲಮೂರ, ವಿರುಪಾಕ್ಷ ಕೋರಿಮಠ, ವಿ.ಕೆ. ಬಡಿಗೇರ, ಬಸವರಾಜ ಗುರನ್ನವರ, ಸಿ.ಎಸ್.ಭಾಂವಿಹಾಳ, ನಂದು ಹರುಕುಣಿ, ಶಂಕರ ತಲ್ಲೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-21-1710760468

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.