ಬೆಳ್ತಂಗಡಿ: ‘ಕೆಳದಿ ಮಹಾಸಂಸ್ಥಾನದ ಶಿವಪ್ಪ ನಾಯಕ ಹಾಗೂ ಕೆಳದಿ ರಾಣಿ ಚೆನ್ನಮ್ಮಾಜಿ ಕಾಲದಲ್ಲಿ ಮಲೆನಾಡು, ಕರಾವಳಿ ಹಾಗೂ ಕೇರಳದ ಭಾಗದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ, ಕೃಷಿ ವಿಚಾರಗಳಿಗೆ ಒತ್ತು ನೀಡಲಾಗಿತ್ತು. ಈಗ ಅದೇ ಸಮಾಜ ಬಾಂಧವರು ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ’ ಎಂದು ತೀರ್ಥಹಳ್ಳಿ ಕವಲೇದುರ್ಗ ಮಠದ ಕೆಳದಿ ಸಂಸ್ಥಾನದ ಮರಳಸಿದ್ಧ ಶಿವಾಚಾರ್ಯರು ಹೇಳಿದರು.

ಬೆಳ್ತಂಗಡಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ ಅವರಣದ ಬಯಲು ಮಂದಿರದಲ್ಲಿ ಮಾಳವ ಯಾನೆ ಮಲ್ಲವ ಸಮಾಜಾಭ್ಯುದಯ ಸಂಘ, ಮಾಳವ ಯಾನೆ ಮಲ್ಲವರ ಯುವಕರ ಸಂಘ ಮತ್ತು ಮಹಿಳಾ ಸಂಘದ ಆಶ್ರಯದಲ್ಲಿ ನಡೆದ 30ನೇ ವಾರ್ಷಿಕೋತ್ಸವ ಮತ್ತು ಶಿವಪೂಜೆ, ರುದ್ರಾಭಿಷೇಕ, ಲಲಿತಾ ಸಹಸ್ತ್ರನಾಮ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ಇಡೀ ಸಮಾಜಕ್ಕೆ ಮಲ್ಲವ ಸಮಾಜದ ಕೊಡುಗೆ ಇದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಮಲ್ಲವ ಸಮಾಜದವರು ಹಲವು ವರ್ಷಗಳಿಂದ ಸಮಾಜದ ಅಭ್ಯುದಯಕ್ಕೆ ಶ್ರಮಿಸುತ್ತಿದ್ದಾರೆ. ಮುಂದೆಯೂ ಸಮಾಜದ ಅಭ್ಯುದಯಕ್ಕೆ ಎಲ್ಲರೂ ಅಹಂ ತೊರೆದು ದುಡಿಯಬೇಕು’ ಎಂದರು.

ಮಾಳವ ಯಾನೆ ಮಲ್ಲವ ಸಮಾಜದ ಅಧ್ಯಕ್ಷ ಶಿವಶಂಕರ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ಮಹಾಸತಿ ದೇವಸ್ಥಾನದ ಅಧ್ಯಕ್ಷ ಎಚ್.ಎನ್. ಜಗದೀಶ್ ಮಲ್ ಮತ್ತು ದುರ್ಗ ಮಲ್ಲಿಕಾರ್ಜುನ ಜಟ್ಟಿ ಮನೆತನದ ಅಧ್ಯಕ್ಷ ಬಿ.ನವನೀತ ಮಾಳವ ಮಾತನಾಡಿದರು.

ವೇದಿಕೆಯಲ್ಲಿ ಕಾಞಂಗಾಡ್ ಇಕ್ಕೇರಿ ಮಲ್ಲವ ಸಮಾಜ ಸಂಘದ ಅಧ್ಯಕ್ಷ ದಯಾನಂದ ಕುದ್ರು, ಚಿತ್ತಾರಿ ಕುದ್ರು ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ನಾಗರಾಜ್ ಕೆ.ಪಿ., ಚಿತ್ತಾರಿ ಎಲ್ಲಾಂಬಿಕಾ ದೇವಸ್ಥಾನದ ಅಧ್ಯಕ್ಷ ಒ.ರಮೇಶ್, ರಾವಣೇಶ್ವರ ಓರವಂಗೆರೆ ಜಟಕೇಶ್ವರ ದೇವಸ್ಥಾನದ ಅಧ್ಯಕ್ಷ ಎನ್.ಪ್ರಭಾಕರ, ಮಿತ್ತಬೆಟ್ಟು ಮಹಮ್ಮಾಯಿ ವನದುರ್ಗ ದೇವಿ ದೇವಸ್ಥಾನದ ಅಧ್ಯಕ್ಷ ಎನ್. ಮೋಹನ ಹೆಗ್ಡೆ, ಯುವಕ ಸಂಘದ ಅಧ್ಯಕ್ಷ ಮೋಹನ ಬೆಳ್ತಂಗಡಿ, ಮಹಿಳಾ ಸಂಘದ ಅಧ್ಯಕ್ಷೆ ಮಂಜುಳ ಬೆಳ್ತಂಗಡಿ ಮೊದಲಾದವರು ಇದ್ದರು.

ಇದೇ ಸಂದರ್ಭದಲ್ಲಿ ಸಮಾಜದ ಸಾಧಕರು, ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಆಟೋಟ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಗೀತ ರಸಮಂಜರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಮಳವ ಯಾನೆ ಮಲ್ಲವ ಸಂಘದ ಕೋಶಾಧಿಕಾರಿ ಸತೀಶ್ ರಾಜ್ ವರದಿ ವಾಚಿಸಿದರು. ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ ಅಲ್ಲಟಬೈಲು ಪ್ರಸ್ತಾವಿಸಿದರು. ಗೌತಮ್ ಹೆಗ್ಡೆ ಬೆಳ್ತಂಗಡಿ ಕಾರ್ಯಕ್ರಮ ನಿರ್ವಹಿಸಿ, ಮಹಿಳಾ ಸಂಘದ ಕಾರ್ಯದರ್ಶಿ ಅಶ್ವಿನಿ ಉಜಿರೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-2015634896

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.