ಬೆಂಗಳೂರು: ‘ಬಸವಣ್ಣ ಜಾತಿ, ಭೇದವನ್ನು ಮಾಡದೇ ಎಲ್ಲರನ್ನೂ ಸಮಾನವಾಗಿ ನೋಡಿದ ಸಾಂಸ್ಕೃತಿಕ ನಾಯಕ. ಅವರ ವಚನದಲ್ಲಿನ ತತ್ವಗಳು ಬದುಕಿನಲ್ಲಿ ಬದಲಾವಣೆಗೆ ದಾರಿಯಾಗಲಿವೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಬೆಂಗಳೂರು ಜಿಲ್ಲಾ ಘಟಕ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಬಸವಣ್ಣ ತಮ್ಮ ಚಿಂತನೆ, ವಚನಗಳ ಮೂಲಕವೇ ನಿಜವಾದ ಸಾಂಸ್ಕೃತಿಕ ನಾಯಕ ಎನ್ನಿಸಿದರು. ಅವರಿಗೆ ಎರಡು ವರ್ಷದ ಹಿಂದೆ ಸಾಂಸ್ಕೃತಿಕ ನಾಯಕ ಎನ್ನುವ ಗೌರವ ನೀಡಿದ್ದನ್ನು ಮೆಚ್ಚಲೇಬೇಕು. ಸಮಾನತೆ ತತ್ವ ಅಳವಡಿಸಿಕೊಂಡರೆ ಸಮಾಜದ ಸ್ವಾಸ್ಥ್ಯ ಹಾಳಾಗದಂತೆ ಮಾಡಬಹುದು ಎಂದು ಹಲವು ದಾರ್ಶನಿಕರು ಹೇಳಿದರು. ಆದರೆ, ಬಸವಣ್ಣ 12ನೇ ಶತಮಾನದಲ್ಲಿಯೇ ತೋರಿಸಿಕೊಟ್ಟ ಈ ಹಾದಿ ಜಗತ್ತಿಗೆ ಮಾದರಿಯಾಗಿದೆ’ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಕೀಲ ಸಿ.ಎಸ್.ದ್ವಾರಕಾನಾಥ್, ‘ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸುವಂತೆ 2011ರಲ್ಲಿ ಒತ್ತಾಯ ಮಾಡಿದ್ದೆ. ಆ ನಂತರ ಪ್ರಯತ್ನ ನಡೆದರೂ ಘೋಷಣೆಯಾಗಿರಲಿಲ್ಲ. ಸಿದ್ದರಾಮಯ್ಯ ಅವರು 2024ರಲ್ಲಿ ಘೋಷಣೆ ಮಾಡಿ ಬಸವಣ್ಣನವರ ಭಾವಚಿತ್ರ ಸರ್ಕಾರಿ ಕಚೇರಿಗಳಲ್ಲಿ ಬಳಸುವಂತೆ ಆದೇಶ ಮಾಡಿದರು. ಇಂತಹ ಯೋಚನೆಗೆ ಬಲ ತುಂಬಿದ ಸಿದ್ದರಾಮಯ್ಯ ಅಭಿನಂದನಾರ್ಹರು’ ಎಂದರು.

ನಿವೃತ್ತ ಜಿಲ್ಲಾ ನ್ಯಾಯಾಧೀಶ ಎಸ್.ಎಂ.ಕೆಂಪಗೌಡರ್ ಮಾತನಾಡಿ, ‘ಕೆಲವೊಮ್ಮೆ ನಮ್ಮ ಸಮುದಾಯದವರೇ ಉನ್ನತ ಹುದ್ದೆಯಲ್ಲಿದ್ದಾಗ ಸಮಾಜದ ಪರ ಬೇಡಿಕೆ ಇಟ್ಟಾಗ ನಿರ್ಧಾರಗಳು ತ್ವರಿತವಾಗಿ ಆಗುವುದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಪ್ರಮುಖ ನಿರ್ಧಾರ ಕೈಗೊಂಡರು. ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ಇಟ್ಟಿದ್ದು, ಅನುಭವ ಮಂಟಪ ಅಭಿವೃದ್ಧಿ, ಕಿತ್ತೂರು ಚನ್ನಮ್ಮ ಉತ್ಸವ, ಕಿತ್ತೂರಿಗೆ ಚನ್ನಮ್ಮನ ಹೆಸರು ಇಟ್ಟಿದ್ದು ಪ್ರಮುಖವಾದವು’ ಎಂದು ಹೇಳಿದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ.ಜಾಮದಾರ್, ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಮಹಾಸಭಾ ಬೆಂಗಳೂರು ನಗರ ಅಧ್ಯಕ್ಷ ವೀರಭದ್ರಯ್ಯ, ಪ್ರಧಾನ ಕಾರ್ಯದರ್ಶಿ ಕೃಪಾ ಶಂಕರ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-4-1483610231

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.