ಬೆಂಗಳೂರು: ‘ದಯೆಯೇ ಧರ್ಮದ ಮೂಲವಯ್ಯ’ ಎಂದು ಸಾರಿದ ಬಸವಣ್ಣನ ವಚನಗಳನ್ನು ಅಳವಡಿಸಿಕೊಂಡರೆ ಜಗತ್ತಿನಲ್ಲಿ ಯುದ್ಧದ ಸನ್ನಿವೇಶವೇ ಸೃಷ್ಟಿಯಾಗುವುದಿಲ್ಲ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್ ಹೇಳಿದರು.

ಜರಗನಹಳ್ಳಿಯ ವೀರಶೈವ ಸೇವಾ ಸಮಾಜ ಭಾನುವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ, ವಿದ್ವಾಂಸ ಗೊ.ರು.ಚನ್ನಬಸಪ್ಪ ಅವರಿಗೆ ಶರಣ ಮುಕುಟ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಶರಣರ ವಚನಗಳಲ್ಲಿರುವ ಸಮಾನತೆ, ಮಾನವೀಯತೆ ಸಂದೇಶಗಳು ಎಂದಿಗೂ ಸಮಾಜವನ್ನು ಬೆಸೆಯುವ ಕೆಲಸ ಮಾಡುತ್ತಾ ಬಂದಿವೆ. ಬಸವಣ್ಣ ಇದನ್ನು 12ನೇ ಶತಮಾನದಲ್ಲೇ ಪ್ರತಿಪಾದನೆ ಮಾಡಿ ಅನುಷ್ಠಾನಕ್ಕೆ ತಂದರು. ಇವುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಂಘರ್ಷವೇ ಇರದು’ ಎಂದು ಹೇಳಿದರು.

ಗೊರುಚ ಅವರ ವಚನ ಹಾಗೂ ಜನಪದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ದೊಡ್ಡದು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ತಮ್ಮ ಕಾಯಕ ಕ್ರಾಂತಿ ಮೂಲಕವೇ ಅಜರಾಮರರಾಗಿದ್ದಾರೆ’ ಎಂದು ಸೋಮಶೇಖರ್ ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಗೊರುಚ ಮಾತನಾಡಿ, ‘ಸಮಾಜಕ್ಕೆ ಅಗತ್ಯವಾಗಿ ಆಗಬೇಕಾದ ಕೆಲಸಗಳನ್ನು ಹಲವರು ಮಾಡಿದ್ದಾರೆ. ಶರಣರ ಚಿಂತನೆಗಳ ಪ್ರಭಾವದಿಂದಲೇ ನಾನೂ ಇದರಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಯಿತು. ಶರಣರ ಆದರ್ಶಗಳೇ ನಮಗೆ ಈಗಲೂ ದಾರಿದೀವಿಗೆ’ ಎಂದು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಸಾಹಿತಿ ಹಂಪನಾ ಮಾತನಾಡಿ, ‘ಕನ್ನಡವನ್ನು ಕಟ್ಟಿ ಬೆಳೆಸಿದ ಮಹಾನ್ ಪರಂಪರೆಯೇ ನಮ್ಮಲ್ಲಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನಾನು, ಗೊರುಚ ಕೆಲಸ ಮಾಡಿದೆವು. ಪರಿಷತ್ತಿನ ಮೂಲಕ ಕನ್ನಡದ ಕೆಲಸ ಆಗಲು ಸಿ.ಸೋಮಶೇಖರ್ ಮುಂದಿನ ಅಧ್ಯಕ್ಷರಾಗಬೇಕು ಎಂದು ಆಶಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-4-1547746574

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.