ಬೆಂಗಳೂರು: ‘ಸನಾತನ ಧರ್ಮ ಕ್ಷೀಣಿಸುತ್ತಿದ್ದ ಕಾಲಘಟ್ಟದಲ್ಲಿ ಶಂಕರಾಚಾರ್ಯರ ಜನ್ಮವಾಗುತ್ತದೆ. ಅವರು ಬದುಕಿದ್ದ 32 ವರ್ಷದಲ್ಲಿ ಅಪಾರ ಸಾಧನೆ ಮಾಡಿದರು’ ಎಂದು ನಿವೃತ್ತ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಹೇಳಿದರು.

ಮಲ್ಲೇಶ್ವರ ಬ್ರಾಹ್ಮಣ ಸಭಾ ಟ್ರಸ್ಟ್ ಶನಿವಾರ ಆಯೋಜಿಸಿದ್ದ ಶಂಕರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.

‘ಶಂಕರಾಚಾರ್ಯರ ಸಾಧನೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ಅವರ ಬಗ್ಗೆ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ಅವರ ಗುರು ಗೋವಿಂದ ಪಾದರ ಆದೇಶದಂತೆ ದೇಶದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪನೆ ಮಾಡಿದರು. ಭಾರತವನ್ನು ಧಾರ್ಮಿಕವಾಗಿ ಒಗ್ಗೂಡಿಸುವುದರ ಜತೆಗೆ ಭೌಗೋಳಿಕವಾಗಿ ಏಕತೆಯನ್ನು ಸ್ಥಾಪನೆ ಮಾಡಿದರು’ ಎಂದು ತಿಳಿಸಿದರು.

‘ದೇಶದಲ್ಲಿ ಸಾಕಷ್ಟು ರಾಜರು ಇದ್ದರು. ಅವರಲ್ಲಿ ಯಾರಲ್ಲೂ ಭಾರತೀಯತೆ ಇರಲಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಒಂದೇ ಒಂದು ನೆಲ ಅಂದರೆ ಭಾರತ. ಅವರನ್ನೆಲ್ಲಾ ಒಂದುಗೂಡಿಸದಿದ್ದರೆ ಸನಾತನ ಧರ್ಮ ಇರುತ್ತಿರಲಿಲ್ಲ’ ಎಂದರು.

‘ದೇಶದ ಸಂವಿಧಾನದಲ್ಲಿ ಜಾತ್ಯತೀತ ತತ್ವ ಸೇರ್ಪಡೆಯಾಗಿದೆ. ಆದರೆ, ಅದರ ನೈಜ ಆಶಯಕ್ಕೆ ತಕ್ಕಂತೆ ನಡೆದು ಕೊಳ್ಳುತ್ತಿಲ್ಲ. ಹುಸಿ ಜಾತ್ಯತೀತತೆ ನಡೆಯು ತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭಗವಾತ್ಪದರ ಬ್ರಹ್ಮ ಚಿಂತನೆ’ ಕುರಿತು ಅದ್ವೈತ ಮಹಾ ಮಂಡಲ ಅಧ್ಯಕ್ಷ ಪಾವಗಡ ಪ್ರಕಾಶ್ ರಾವ್ ಮಾತ ನಾಡಿದರು. ನಿವೃತ್ತ ನ್ಯಾಯಮೂರ್ತಿ ಕೆ.ವಿ. ನರಸಿಂಹನ್ ಅಧ್ಯಕ್ಷತೆ ವಹಿಸಿದ್ದರು.

ನಿರ್ದೇಶಕಿ ರೂಪಾ ಅಯ್ಯರ್, ಗಮಕ ಕಲಾವಿದೆ ಗಂಗಮ್ಮ ಕೇಶವ ಮೂರ್ತಿ, ಎಸ್.ಆರ್.ನಂದಿನಿ ದೇವಿ ಹಾಗೂ ‘ಪ್ರಜಾವಾಣಿ’ ಸುದ್ದಿಸಂಪಾದಕ ನಾಗೇಶ್ ಶೆಣೈ ಅವರನ್ನು ಸನ್ಮಾನಿಸಲಾಯಿತು.

ಜತ್ತಿ ಫೌಂಡೇಷನ್ ಟ್ರಸ್ಟಿ ಶಿಲ್ಪಾ ಜತ್ತಿ, ಜ್ಯೋತಿಷಿ ರಾಜಗುರು ಬಿ.ಎಸ್. ದ್ವಾರಕಾನಾಥ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-4-35495905

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.