ಬೆಂಗಳೂರು: ದೇಶದ ವಾಸ್ತವ ತಿಳಿದುಕೊಳ್ಳಲು ಲೇಖಕ ಕಂಚ ಐಲಯ್ಯ ಅವರ ಎಲ್ಲ ಪುಸ್ತಕಗಳು ಕನ್ನಡ ಭಾಷೆಗೆ ಅನುವಾದವಾಗಬೇಕು ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ನಾರಾಯಣ ಹೇಳಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ ಬಿ. ಅವರು ಕನ್ನಡಕ್ಕೆ ಅನುವಾದಿಸಿರುವ ಕಂಚ ಐಲಯ್ಯ ಶೆಫರ್ಡ್ ಅವರ ‘ಶೂದ್ರ ಬಂಡಾಯ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅವರ ಪುಸ್ತಕಗಳಲ್ಲಿ ಧರ್ಮ, ಜಾತಿ, ಸಮಾಜ ಮತ್ತು ರಾಜಕೀಯದ ಬಗ್ಗೆ ವಿಸ್ತಾರವಾಗಿ ತಿಳಿಸಲಾಗಿದೆ. ಈ ವಿಚಾರವನ್ನು ಕರ್ನಾಟಕದ ಜನರು ಓದುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಶೂದ್ರ ವರ್ಗಕ್ಕೆ ಈ ದೇಶದಲ್ಲಿ ಚಾರಿತ್ರಿಕವಾಗಿ ಮತ್ತು ಚರಿತ್ರೆಯಲ್ಲಿ ಅನ್ಯಾಯವಾಗಿದೆ. ದೇಶದ ಜನರ ಮೂಲಭೂತ ಅಗತ್ಯತೆಗಳನ್ನು ಸಮಗ್ರವಾಗಿ ಪೂರೈಸಿದವರು ಈ ವರ್ಗ. ಚರಿತ್ರೆ ಬರೆಯುವವರು ಶೂದ್ರವರ್ಗವನ್ನು ಹೊರಗಿಟ್ಟು ಬರೆದಿದ್ದಾರೆ. ವ್ಯವಹಾರಿಕ ಮತ್ತು ಸಾಂಸ್ಕೃತಿಕ ಚರಿತ್ರೆಗಳಲ್ಲಿ ಈ ವರ್ಗವನ್ನು ಕಡೆಗಣಿಸಲಾಗಿದೆ. ಪುರಾಣಗಳಲ್ಲಿ ಪ್ರಸ್ತಾಪವೇ ಇಲ್ಲ. ಚಾರಿತ್ರಿಕವಾಗಿ ಆಗಿರುವ ಅಪಚಾರವನ್ನು ಸರಿಪಡಿಸುವ ಕೆಲಸವನ್ನು ಈ ಪುಸ್ತಕದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು.

ಶೂದ್ರವರ್ಗವನ್ನು ತುಳಿಯುವ ಕೆಲಸ 1925ರಿಂದಲೋ, 2014ರಿಂದಲೋ ಪ್ರಾರಂಭವಾಗಲಿಲ್ಲ, ನಾಗರಿಕತೆ ಯುಗದಿಂದಲೂ ಈ ವರ್ಗವನ್ನು ಕೆಳಗಿಟ್ಟು ನೋಡಲಾಗಿದೆ. ಈ ವರ್ಗಕ್ಕೆ ವ್ಯವಸ್ಥಿತವಾಗಿ ಅಕ್ಷರ ಜ್ಞಾನವನ್ನು ನಿರಾಕರಿಸಿ ಜ್ಞಾನಪರಂಪರೆ ದಾಖಲಾಗದಂತೆ ನೋಡಿಕೊಳ್ಳಲಾಗಿದೆ. ಒಂದು ವೇಳೆ, ಈ ವರ್ಗಕ್ಕೆ ಅಕ್ಷರಾಭ್ಯಾಸ ಇದ್ದಿದ್ದರೆ ಇವತ್ತಿನ ಭಾರತದ ಜ್ಞಾನಪರಂಪರೆ ಭಿನ್ನವಾಗಿ, ವೈಜ್ಞಾನಿಕವಾಗಿ ಇರುತ್ತಿತ್ತು ಎಂದು ವಿವರಿಸಿದರು.

ಲೇಖಕ ಕಂಚ ಐಲಯ್ಯ ಮಾತನಾಡಿ, ‘1946ರಲ್ಲಿ ಅಂಬೇಡ್ಕರ್ ಅವರು ಶೂದ್ರರ ಬಗ್ಗೆ ಪುಸ್ತಕ ಬರೆದರು. ಅದಾದ ಬಳಿಕ ಯಾವ ವಿಶ್ವವಿದ್ಯಾಲಯಗಳಾಗಲಿ, ಸಂಶೋಧಕರಾಗಲಿ ಪುಸ್ತಕ ಬರೆಯಲಿಲ್ಲ. ಶಾಲೆಯಲ್ಲಿ ಓದಬೇಕಾದರೆ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದಲ್ಲಿ ಬ್ರಾಹ್ಮಣರು, ಸನ್ಯಾಸಿಗಳು ಮತ್ತು ಕ್ಷತ್ರಿಯ ರಾಜರ ಬಗ್ಗೆ ಪ್ರಸ್ತಾಪವಿತ್ತು. ಎಲ್ಲಿಯೂ ಶೂದ್ರರ ಬಗ್ಗೆ ಮಾಹಿತಿ ಇರಲಿಲ್ಲ. ಆಗಲೇ ನನಗೆ ಅನುಮಾನ ಶುರುವಾಯಿತು’ ಎಂದರು.

ಶ್ರೀಮಂತರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗೆ ಸೇರಿಸಲು ಬಯಸುತ್ತಾರೆ. ಸರ್ಕಾರಿ ಶಾಲೆ ಮಕ್ಕಳು ಮಾತೃ ಭಾಷೆಯಲ್ಲಿ ಶಿಕ್ಷಣ ಕಲಿಯುತ್ತಾರೆ. ನಾನು ಇಂಗ್ಲಿಷ್ ಕಲಿತು ಅಮೆರಿಕ ಅಥವಾ ಬ್ರಿಟನ್ನ ಇಂಗ್ಲಿಷ್ನಲ್ಲಿ ಪುಸ್ತಕ ಬರೆಯಲಿಲ್ಲ. ಶೆಪರ್ಢ್ ಇಂಗ್ಲಿಷ್ನಲ್ಲಿ ಬರೆದಿದ್ದೇನೆ. ಈ ಪುಸ್ತಕಗಳು ಅತಿ ಹೆಚ್ಚು ಮಾರಾಟವಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೋಷಕರು ಮಕ್ಕಳ ಮುಂದೆ ಪ್ರತಿ ವಾರ ಒಂದು ತಾಸು ಪುಸ್ತಕ ಓದಬೇಕು. ಆಗ ಮಕ್ಕಳು ಪುಸ್ತಕ ಓದಲು ಪ್ರಾರಂಭಿಸುತ್ತಾರೆ ಎಂದು ಕಿವಿಮಾತು ಹೇಳಿದರು.

ಭಾರತಿ ದೇವಿ ಮಾತನಾಡಿದರು. ಸಚಿವ ಮಧು ಬಂಗಾರಪ್ಪ, ಕಾಂಗ್ರೆಸ್ ಮುಖಂಡ ಶಿವಣ್ಣ, ಪ್ರಕಾಶಕ ಧನಂಜಯ್ ಅವರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-4-1331077509

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.