ಬೀದರ್: ಬೌದ್ಧ ಧರ್ಮದ ವಿಧಿ ವಿಧಾನಗಳ ಪ್ರಕಾರ ಹಸೆಮಣೆ ಏರಿದ ವರ ಸಿದ್ಧಾರ್ಥ ಮತ್ತು ವಧು ಸಂಜೀವಿನಿ ಅವರು ವಿವಾಹದ ಬಳಿಕ ನಗರದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಎದುರು ಭಾನುವಾರ ಪ್ರತಿಜ್ಞೆ ಸ್ವೀಕರಿಸಿದರು.

ಅಂಬೇಡ್ಕರ್ ಪುತ್ಥಳಿಗೆ ಗೌರವ ಸಲ್ಲಿಸಿದ ನೂತನ ವಧು–ವರರು ಬುದ್ಧನ ತತ್ವಾದರ್ಶ ಹಾಗೂ ಬಾಬಾ ಸಾಹೇಬರ ವೈಚಾರಿಕ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೊಸ ಜೀವನ ನಡೆಸುವ ಪ್ರತಿಜ್ಞೆ ಸ್ವೀಕರಿಸಿದರು.

ನಗರದ ಬ್ಯಾಂಕ್ ಕಾಲೊನಿಯ ನಿವಾಸಿ ಸಿದ್ದಾರ್ಥ ಹೈದರಾಬಾದ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಾರೆ. ಸಂಜೀವಿನಿ ನಗರದ ಕುಂಬಾರವಾಡ ನಿವಾಸಿಯಾಗಿದ್ದು, ಬಿಎಸ್ಸಿ ಪದವೀಧರೆ.

‘ಕೇವಲ ಶಾಸ್ತ್ರಗಳಿಗೆ ಸೀಮಿತವಾಗದೆ, ವೈಚಾರಿಕವಾಗಿ ಹಾಗೂ ಸಾಮಾಜಿಕ ಬದ್ಧತೆಯೊಂದಿಗೆ ದಾಂಪತ್ಯ ಜೀವನ ನಡೆಸುವ ಉದ್ದೇಶದಿಂದ ಬಾಬಾ ಸಾಹೇಬರ ಪುತ್ಥಳಿ ಎದುರು ಪ್ರತಿಜ್ಞೆ ಸ್ವೀಕರಿಸಿದ್ದೇವೆ’ ಎಂದು ನೂತನ ವಧು–ವರರು ತಿಳಿಸಿದ್ದಾರೆ. ಪ್ರೊ. ರಾಜಕುಮಾರ್ ಬನ್ನೇರ್, ಕುಟುಂಬ ಸದಸ್ಯರಾದ ಸುರೇಶ್ ಶಿಂಧೆ, ಶ್ರೇಯಾ ಬ್ಯಾನರ್, ವಿಹಾನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-33-1093832469

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.