ಭಾಲ್ಕಿ: ‘ಆರ್ಥಿಕವಾಗಿ ಸಬಲರಾಗಲು ಸಮಾಜದ ಪ್ರತಿಯೊಬ್ಬರೂ ಬಸವಣ್ಣನವರು ನೀಡಿದ ಕಾಯಕ ತತ್ವವನ್ನು ಚಾಚೂ ತಪ್ಪದೇ ಪಾಲಿಸಬೇಕು’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮ ಸಮೀಪದ ಬೀದರ್ ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಮನ್ವಯ ವೇದಿಕೆ ಹಾಗೂ ಬೀದರ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವಣ್ಣನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದರು. ಅವರ ವಚನಗಳ ಪಾಲನೆಯಿಂದ ಸುಂದರ ಸಮಾಜ ನಿರ್ಮಾಣವಾಗುತ್ತದೆ. ಅವರ ಕಾಯಕ, ದಾಸೋಹ ತತ್ವ ಜಗತ್ತಿಗೆ ಅವರ ನೀಡಿದ ಬಹುದೊಡ್ಡ ಕೊಡುಗೆ’ ಎಂದು ಬಣ್ಣಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಬಿ.ಎಸ್.ಬಿರಾದಾರ ಮಾತನಾಡಿ, ‘ವಿಶ್ವಗುರು ಬಸವಣ್ಣನವರು ಸಮಾಜದಲ್ಲಿನ ಎಲ್ಲಾ ವರ್ಗದವರನ್ನು ಸಮಾನವಾಗಿ ಕಂಡಂತಹ ಮಹಾ ಮಾನವತಾವಾದಿಯಾಗಿದ್ದಾರೆ. ಬಸವಣ್ಣನವರು ಕೇವಲ ಕರ್ನಾಟಕಕ್ಕೆ ಮಾತ್ರ ಸಾಂಸ್ಕೃತಿಕ ನಾಯಕರಾಗದೇ ಇಡೀ ಭರತ ಖಂಡದ ಸಾಂಸ್ಕೃತಿಕ ನಾಯಕರಾಗಿದ್ದಾರೆ. ಅವರ ಖ್ಯಾತಿ ಹಾಗೂ ಪ್ರಭಾವದಿಂದ ದೂರ ದೂರದಿಂದ ಶರಣರು ಕಲ್ಯಾಣದ ಅನುಭವ ಮಂಟಪಕ್ಕೆ ಬಂದಿದ್ದರು’ ಎಂದು ಹೇಳಿದರು.

ಅಖಿಲ ಭಾರತ ಶರಣ ಸಮನ್ವಯ ವೇದಿಕೆ, ಕರ್ನಾಟಕದ ಸಂಚಾಲಕಿ ಪಲ್ಲವಿ ಪಾಟೀಲ ಸೇಡಂ, ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಶಾಂತಲಿಂಗ ಸಾವಳಗಿ, ವಿಠ್ಠಲ್ ದಾಸ್ ಪ್ಯಾಗೆ, ಅಬ್ದುಲ್ ಸತ್ತಾರ್ ಮಾತನಾಡಿದರು. ಆಡಳಿತ ಕುಲಸಚಿವ ಪರಮೇಶ್ವರ ನಾಯ್ಕ.ಟಿ, ವಿಶೇಷಾಧಿಕಾರಿ ರವೀಂದ್ರನಾಥ ವಿ.ಗಬಾಡಿ, ಗೀತಾ, ಅಂಬಿಕಾ, ಆನಂದ ಚಾಕೂರೆ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-33-1731437620

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.