ಬೀದರ್: ‘ಲಿಂಗಾಯತರು ಮತ್ತು ದಲಿತರು ಒಂದಾದರೆ ಧರ್ಮ ಸಹಿಷ್ಟುತೆ, ಸಾಮಾಜಿಕ ಸಾಮರಸ್ಯ ಹಾಗೂ ಬಹುಸಂಸ್ಕೃತಿಯ ರಾಷ್ಟ್ರ ಕಟ್ಟಬಹುದು’ ಎಂದು ಸಾಹಿತಿ ಬಸವರಾಜ ಬಲ್ಲೂರ ಹೇಳಿದರು.

ಬಸವ ಕೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೀದರ್ ಸಹಯೋಗದಲ್ಲಿ ನಗರದಲ್ಲಿ ಏರ್ಪಡಿಸಿದ್ದ ಶರಣ ಸಂಗಮ ಹಾಗೂ ಬುದ್ಧ-ಬಸವ-ಅಂಬೇಡ್ಕರ್ ಜಯಂತಿಯಲ್ಲಿ ಉಪನ್ಯಾಸ ನೀಡಿದರು.

‘ಬಸವಣ್ಣನವರು ಕಾಯಕ ತತ್ವ ಎತ್ತಿ ಹಿಡಿದು ವೃತ್ತಿ ಗೌರವ ತಂದುಕೊಟ್ಟರು. ಬುದ್ಧನು ‘ಅತ್ತ ದೀಪೋ ಭವ’ (ನಿನ್ನ ದೀಪ ನೀನೇ ಆಗು) ಎಂದು ಸ್ವಾವಲಂಬಿ ತತ್ವ ಬೋಧಿಸಿದರು. ಅಂಬೇಡ್ಕರ್ ಇದೇ ದಾರಿಯಲ್ಲಿ ನಡೆದರು. ಮೂವರೂ ಜಾತಿ ಭೇದ, ಅಂಧಶ್ರದ್ಧೆ, ಜಾತಿ ವ್ಯವಸ್ಥೆ, ಕಪಟ ಆಚರಣೆ, ಅಸ್ಪೃಶ್ಯತೆ, ಶೋಷಣೆ ತೀವ್ರವಾಗಿ ವಿರೋಧಿಸಿದರು. ಇವರ ಈ ತತ್ವಗಳು ಇಂದಿಗೂ ಜಾತಿಮುಕ್ತ, ಸುಶಿಕ್ಷಿತ ಮತ್ತು ಸರ್ವಸಮತೆಯ ಸಮಸಮಾಜವನ್ನು ನಿರ್ಮಿಸಲು ದಾರಿದೀಪವಾಗಿವೆ’ ಎಂದು ಹೇಳಿದರು.

‘ಬಸವಣ್ಣ ಲಿಂಗಾಯತರ ಬಂಧನದಲ್ಲಿದ್ದರೆ, ಅಂಬೇಡ್ಕರ್ ಜಾತಿಯ ಬಂಧನದಲ್ಲಿದ್ದಾರೆ. ಬಸವಣ್ಣ ಮತ್ತು ಅಂಬೇಡ್ಕರ್ ಇರದಿದ್ದರೆ, ಭಾರತದ ಚರಿತ್ರೆ ಭಿನ್ನವಾಗಿರುತ್ತಿತ್ತು. ಇಷ್ಟೊತ್ತಿಗೆ ಈ ದೇಶದಲ್ಲಿ ಬಹುಸಂಸ್ಕೃತಿ, ಬಹುಭಾಷೆ, ಸೌಹಾರ್ದತೆ, ಬಹುತ್ವಗಳು ಇಲ್ಲವಾಗುತ್ತಿದ್ದವು’ ಎಂದರು.

‘ಬುದ್ಧ, ಬಸವ ಹಾಗೂ ಅಂಬೇಡ್ಕರ್ ಬೇರೆ ಬೇರೆ ಕಾಲಘಟ್ಟಗಳಲ್ಲಿ ಬದುಕಿದ್ದರೂ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ, ಅಹಿಂಸೆ ಮತ್ತು ವೈಚಾರಿಕತೆ ಹಾಗೂ ಮಾನವೀಯ ಮೌಲ್ಯಗಳ ವಿಷಯದಲ್ಲಿ ಸಾಮ್ಯತೆಗಳಿವೆ. ಮೂವರ ಮುಖ್ಯ ಗುರಿ ದುಃಖ ನಿವಾರಣೆ, ಶಾಂತಿ, ಸಮಾಜ ಸುಧಾರಣೆ, ಸಮಾನತೆ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಪ್ರಜಾಪ್ರಭುತ್ವ ಪ್ರತಿಪಾದನೆ, ಸಾಂವಿಧಾನಿಕ ಹಕ್ಕುಗಳು ದಯಪಾಲಿಸುವುದಾಗಿತ್ತು’ ಎಂದರು.

‘ಮೂವರು ನಾಯಕರು ಜಾತಿ, ಲಿಂಗ ಮತ್ತು ವರ್ಗ ಆಧಾರಿತ ತಾರತಮ್ಯವನ್ನು ತೀವ್ರವಾಗಿ ವಿರೋಧಿಸಿದರು. ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾನತೆಯನ್ನು ಕಾನೂನಾತ್ಮಕಗೊಳಿಸಿದರೆ, ಬಸವಣ್ಣ ಅನುಭವ ಮಂಟಪದ ಮೂಲಕ ವಚನ ಸಾಹಿತ್ಯದಲ್ಲಿ ಸಮಾನತೆ ಸಾರಿದರು’ ಎಂದು ತಿಳಿಸಿದರು.

ಹುಲಸೂರ ಗುರುಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಬುದ್ಧ–ಬಸವ– ಅಂಬೇಡ್ಕರ್ ತತ್ವಗಳು ವಿಶ್ವಮಾನ್ಯವಾಗಿವೆ. ಜಾಗತಿಕ ಶಾಂತಿ, ಸೌಹಾರ್ದ ನೆಲೆಸಲು ಅವರ ತತ್ವಾದರ್ಶಗಳ ಅನುಷ್ಠಾನ ಅಗತ್ಯವಾಗಿದೆ ಎಂದರು.

ಬೀದರ್ ಜಿ.ಪಂ ಮಾಜಿ ಉಪಾಧ್ಯಕ್ಷ ನೀಲಮ್ಮ ರೂಗನ್ ಮಾತನಾಡಿ, ‘ಮನುಷ್ಯ ಘನತೆ ಎತ್ತಿ ಹಿಡಿಯಬೇಕು. ದಯೆ, ಕರುಣೆ ನಮ್ಮ ಬದುಕಿನ ಭಾಗವಾಗಬೇಕು. ಜನ ಬದುಕಬೇಕು, ಜಗತ್ತಿನ ಅಸಮಾನತೆ ಅಳಿಯಬೇಕು. ಅದಕ್ಕೆ ಬುದ್ದ ಬಸವ ಅಂಬೇಡ್ಕರ್ ಹೋರಾಡಿದರು. ಅವರ ತತ್ವ ನಾವು ಅಳವಡಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನಶೆಟ್ಟಿ ಅಧ್ಯಕ್ಷತೆ ವಹಿಸಿ, ‘ದಾರ್ಶನಿಕರ ಜಯಂತಿಗಳ ಆಚರಣೆ ನಮ್ಮಲ್ಲಿ ಸದ್ಭಾವ ತಂದು ಸತ್ಪ್ರೇರಣೆ ಮೂಡಿಸುತ್ತವೆ. ಬುದ್ದ ಬಸವ ಅಂಬೇಡ್ಕರ್ ತತ್ವಗಳು ನಮ್ಮ ಬದುಕಿನ ಭಾಗವಾದಾಗ ಮಾತ್ರ ಜಯಂತಿಗಳಿಗೆ ಅರ್ಥ ಬರುತ್ತದೆ. ಆ ದಿಶೆಯಲ್ಲಿ ಎಲ್ಲರೂ ಪ್ರಯತ್ನಿಸೋಣ’ ಎಂದರು.

ಜಾನಪದ ಸಮೂಹ ಗಾಯನ ಮೂಲಕ ರಾಷ್ಟ್ರಮಟ್ಟದ 3ನೇ ಬಹುಮಾನಕ್ಕೆ ಪಾತ್ರರಾದ ಎಂ.ಎಸ್. ಮನೋಹರ್, ಮಲ್ಲಮ್ಮ, ದೀಪಾ, ಗಂಗಮ್ಮ, ಚಂದ್ರಕಾಂತ ದಂಡೆ, ಶಿವಪ್ಪ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ನೂತನ ಗೌರವಾಧ್ಯಕ್ಷ ಬಾಬುರಾವ್ ದಾನಿ ಅವರನ್ನು ಸನ್ಮಾನಿಸಲಾಯಿತು.

ಗಾಯಕಿ ಭಾನುಪ್ರಿಯಾ ಅರಳಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹೇಶ ಗೋರನಾಳಕರ್, ಮಾಜಿ ಎಪಿಎಂಸಿ ಅಧ್ಯಕ್ಷ ವಿಜಯಕುಮಾರ ಆನಂದೆ, ಉದ್ಯಮಿ ಶಾಮರಾವ್ ಭೀಮರಾವ, ಗುತ್ತಿಗೆದಾರ ಗುರುನಾಥ ಬಿರಾದಾರ, ತಾಲ್ಲೂಕು ಬಸವಕೇಂದ್ರ ಅಧ್ಯಕ್ಷ ಸೋಮನಾಥ ಕಂದಗೂಳೆ, ಭಾಗ್ಯಶ್ರೀ ಮುದ್ದಾ, ಮಹಿಳಾ ಬಸವಕೇಂದ್ರ ನಗರ ಘಟಕದ ಅಧ್ಯಕ್ಷೆ ಅಶ್ವಿನಿ ರಾಜಕುಮಾರ ಹಿರೇಮಠ, ಕರುಣಾ ಶೆಟಕಾರ, ಪಂಪಾವತಿ ಪಾಟೀಲ, ವಿದ್ಯಾವತಿ ಬಲ್ಲೂರ ಇದ್ದರು. ರಾಜಮ್ಮ ಚಿಕಪೇಟ್, ವಿರೂಪಾಕ್ಷ ದೇವರು, ರೇವಣಪ್ಪ ಮೂಲಗೆ ಮೊದಲಾದವರು ವಚನ ಪ್ರಾರ್ಥನೆ ನಡೆಸಿಕೊಟ್ಟರೆ, ಅಶ್ವಿನಿ ರಾಜಕುಮಾರ ಹಿರೇಮಠ ಸಂಗೀತ ನಡೆಸಿಕೊಟ್ಟರು. ಬೀದರ್ ತಾಲ್ಲೂಕು ಕಸಾಪ ಅಧ್ಯಕ್ಷ ಟಿ. ಎಮ್. ಮಚ್ಚೆ ನಿರೂಪಿಸಿದರೆ, ಎಂಜಿನಿಯರ್ ಗಣೇಶ ಶೀಲವಂತ ವಂದಿಸಿದರು. ಜಗನ್ನಾಥ ಶಿವಯೋಗಿ ಸ್ವಾಗತಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-33-941632715

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.