ಬೀದರ್: ‘ಲಿಂಗಾಯತ ಧರ್ಮದ ಮೂಲ ತತ್ವಗಳು ಬಸವಣ್ಣ ಹಾಗೂ ಶರಣರ ವಚನ ಸಾಹಿತ್ಯದಲ್ಲಿ ಅಡಗಿವೆ’ ಎಂದು ಬಸವ ಸೇವಾ ಪ್ರತಿಷ್ಠಾನದ ಸಿದ್ಧರಾಮ ಶರಣರು ಹೇಳಿದರು.

ನಗರದ ಶರಣ ಉದ್ಯಾನದಲ್ಲಿ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಶರಣ, ಲಿಂಗ ಹಾಗೂ ವೀರಗೊಳ್ಳೇಶ್ವರರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಿಂಗಾಯತ ಧರ್ಮವು 12ನೇ ಶತಮಾನದಲ್ಲಿ ಮಹಾತ್ಮ ಬಸವಣ್ಣನವರಿಂದ ಸ್ಥಾಪನೆಯಾದ ಸ್ವತಂತ್ರ ವೈಚಾರಿಕ ಮತ್ತು ಸಮಾನತೆಯ ಧರ್ಮವಾಗಿದೆ. ಇದು ಜಾತಿ-ಮತ ಭೇದವನ್ನು ವಿರೋಧಿಸಿ ಮಾನವೀಯತೆ ಹಾಗೂ ಕಾಯಕ ತತ್ವಗಳಿಗೆ ಹೆಚ್ಚಿನ ಮಹತ್ವ ನೀಡಿದೆ’ ಎಂದು ಹೇಳಿದರು.

ಗಂಗಾಧರ ಸ್ವಾಮೀಜಿ ಮಾತನಾಡಿ, ‘ವೀರಗೊಳ್ಳೇಶ್ವರರು 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಒಬ್ಬರಾಗಿದ್ದರು. ಸಾಮಾನ್ಯ ಭಕ್ತನಾಗಿದ್ದ ಅವರು ಜೀವನದಲ್ಲಿ ಬದಲಾವಣೆಯ ಹಾದಿ ಹಿಡಿದು ಶರಣತ್ವವನ್ನು ಅಳವಡಿಸಿಕೊಂಡರು. ಅವರ ಹೆಸರಿನಲ್ಲಿ ಕೇವಲ ಹತ್ತು ವಚನಗಳು ಮಾತ್ರ ಲಭ್ಯವಿದ್ದರೂ, ಅವುಗಳಲ್ಲಿನ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ತಿಳಿಸಿದರು.

ಬಸವ ಸೇವಾ ಪ್ರತಿಷ್ಠಾನದ ಗಣನಾಯಕಿ ಕರುಣಾ ಲಗರ ಮಾತನಾಡಿದರು. ನೀಲಮ್ಮ ಬಳಗದ ಕರುಗಾ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.

ಕಲ್ಪನಾ ಚಂದ್ರಕಾಂತ ಬಿರಾದಾರ್ ಧ್ವಜಾರೋಹಣ ನೆರವೇರಿಸಿದರು. ರಾಮಪುರ ಬಸವ ಸೇವಾ ಪ್ರತಿಷ್ಠಾನದ ರೂಪಕುಮಾರ ಲೂಗಾರ್, ಗಿರೀಶ ಮೂಲಗೆ, ರಾಜಕುಮಾರ ನೆಲವಾಳ, ಸೋಮನಾಥ ಯಾಳವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಗಂಗಾಂಬಿಕಾ ಮಹಿಳಾ ಮಂಗಲಗೀತೆ ಮಂಡಳಿಯವರು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. ಕುಮಾರಿ ಗುರುಕಿರಣ ಹಾಗೂ ಕುಮಾರಿ ಮಾಣಿಕೇಶ್ವರಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆದರ್ಶ ಕಾಲೋನಿ ನೀಲಮ್ಮ ಬಳಗದ ಸದಸ್ಯರು ವಚನ ಪ್ರಾರ್ಥನೆ ಸಲ್ಲಿಸಿದರು. ಬಸವಜ್ಯೋತಿ ಸ್ವಾಗತಿಸಿದರು. ಧನಲಕ್ಷ್ಮೀ ಪಾಟೀಲ ನಿರೂಪಿಸಿದರು. ಉಮಾದೇವಿ ಮತ್ತು ಮಂಗಲಾ ಭಕ್ತಿಗೀತೆಗಳನ್ನು ಹಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಬಸವ ಪುರಸ್ಕಾರ ಪಡೆದ ಸಿದ್ಧರಾಮ ಶರಣರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-33-7024534

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.