ಬೀದರ್: ಕೇಶವ ಕಾರ್ಯ ಸಂವರ್ಧನ ಸಮಿತಿ ಬೀದರ್ ವತಿಯಿಂದ ನಗರದ ಸರಸ್ವತಿ ಶಾಲೆಯ ಗಿರಿಜಾ ಸಭಾಂಗಣದಲ್ಲಿ ಭಾನುವಾರ ನಾರದ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದ ವಕ್ತಾರ ಕೃಷ್ಣ ಜೋಶಿ ಅವರು ನಾರದ ಮಹರ್ಷಿಗಳ ವ್ಯಕ್ತಿತ್ವ ಹಾಗೂ ಮಾಧ್ಯಮ ಕ್ಷೇತ್ರದ ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿ, ತ್ರಿಲೋಕ ಸಂಚಾರಿಯಾಗಿದ್ದ ಮಹರ್ಷಿ ನಾರದರು ಲೋಕಕಲ್ಯಾಣಕ್ಕಾಗಿ ಎಲ್ಲೆಡೆ ಸುದ್ದಿಯನ್ನು ತಲುಪಿಸುವ ಕಾರ್ಯ ನಿರ್ವಹಿಸಿದ್ದರು. ಸಾಮಾನ್ಯವಾಗಿ ನಾರದರನ್ನು ‘ಕಲಹಪ್ರಿಯ’ ಎಂದು ಅರ್ಥೈಸಿಕೊಳ್ಳಲಾಗುತ್ತದಾದರೂ, ಅವರು ಧರ್ಮ ಸಂಸ್ಥಾಪನೆಗಾಗಿ ಸತ್ಯಸುದ್ದಿಗಳನ್ನು ಹರಡುವ ಕಾರ್ಯ ಮಾಡುತ್ತಿದ್ದರು ಎಂದು ತಿಳಿಸಿದರು.

18 ಪುರಾಣಗಳಲ್ಲಿ ಒಂದಾದ ನಾರದ ಪುರಾಣದಲ್ಲಿ ಮಾಧ್ಯಮಗಳ ಜವಾಬ್ದಾರಿಗಳ ಕುರಿತು ಮಹತ್ವದ ವಿಚಾರಗಳು ಉಲ್ಲೇಖಗೊಂಡಿವೆ. ನಾರದರು ನೀಡಿದ 84 ಭಕ್ತಿ ಸೂತ್ರಗಳಲ್ಲಿ ಸಮಾಜಕ್ಕೆ ಯಾವ ರೀತಿಯ ಸಂದೇಶಗಳನ್ನು ತಲುಪಿಸಬೇಕು ಎಂಬುದರ ಬಗ್ಗೆಯೂ ಸ್ಪಷ್ಟ ಮಾರ್ಗದರ್ಶನವಿದೆ ಎಂದು ವಿವರಿಸಿದರು.

1826ರಲ್ಲಿ ಆರಂಭವಾದ ಭಾರತದ ಮೊದಲ ಪತ್ರಿಕೆ ‘ಉದ್ಧಂತ ಮಾರ್ತಂಡ’ ಪತ್ರಿಕೆಯ ಸಂಪಾದಕೀಯದಲ್ಲಿಯೂ ನಾರದ ಮಹರ್ಷಿಗಳ ಉಲ್ಲೇಖವಿದ್ದು, ಮೇ 30ರಂದು ನಾರದ ಜಯಂತಿಯ ದಿನವೇ ಆ ಪತ್ರಿಕೆ ಆರಂಭಗೊಂಡಿತ್ತು ಎಂದು ಹೇಳಿದರು.

ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಎಲ್ಲಾ ಕ್ಷೇತ್ರಗಳ ಮಾಹಿತಿಗಳು ಲಭ್ಯವಾಗುತ್ತವೆ. ಆದ್ದರಿಂದ ಪ್ರಕೃತಿಗೆ ಪೂರಕವಾಗಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಸುದ್ದಿಗಳನ್ನು ಪ್ರಸಾರ ಮಾಡುವುದು ಇಂದಿನ ಮಾಧ್ಯಮಗಳ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಕಲಹ ಹುಟ್ಟಿಸುವ ಸುದ್ದಿಗಳ ಬದಲು ಜನರನ್ನು ಒಗ್ಗೂಡಿಸುವ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಪತ್ರಕರ್ತ ಚನ್ನಬಸವ ಮೊಕ್ತೆದಾರ್, ನಾಗೇಶ್ ಚಿನ್ನಾರೆಡ್ಡಿ, ಆರ್ಎಸ್ಎಸ್ ವಿಭಾಗ ಸಂಘ ಚಾಲಕ ಹನುಮಂತರಾವ್ ಪಾಟೀಲ್, ವಿಭಾಗ ಪ್ರಚಾರಕ ವಿಜಯ್ ಮಹಾಂತೇಶ್ ಹಾಜರಿದ್ದರು. ಶಿವಕಾಂತ್ ಪಾಟೀಲ್ ನಿರೂಪಿಸಿದರು. ಸತೀಶ್ ಪಾಂಚಾಳ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಎನ್. ಕೃಷ್ಣಾರೆಡ್ಡಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-33-1349086522

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.