ಬೀದರ್: ‘ನಡೆ-ನುಡಿ ಒಂದಾದರೆ ಜೀವನಕ್ಕೊಂದು ಅರ್ಥ, ಬೆಲೆ ಬರುತ್ತದೆ’ ಎಂದು ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.

ನಗರದ ಬಸವ ಮುಕ್ತಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಚಿಂತನ ಹಾಗೂ ಪ್ರಸಾದ ದಾಸೋಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಿದ್ಧೇಶ್ವರ ಸ್ವಾಮೀಜಿ ಅವರು ಬೀದರ್ನಲ್ಲಿ ಪ್ರವಚನ ನೀಡಿದ್ದ ಸಂದರ್ಭದಲ್ಲಿ ನಿಸರ್ಗದ ಮಡಿಲಲ್ಲಿ ಕೃಷಿ ಜತೆ ಆಧ್ಯಾತ್ಮಿಕ ಜೀವನ ನಡೆಸುವುದಾಗಿ ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದೇನೆ’ ಎಂದು ತಿಳಿಸಿದರು.

‘ಸಂಕಲ್ಪ ಪೂರ್ಣಗೊಳಿಸಲು ನಗರ ತ್ಯಜಿಸಿ ಭಾತಂಬ್ರಾದಲ್ಲಿ ನೆಲೆಸಿದ್ದೇನೆ. ಅಲ್ಲಿಯ ಮಠ ಜೀರ್ಣೋದ್ಧಾರ ಮಾಡಿದ್ದೇನೆ. ಮಠದ ಅಧೀನದ 32 ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಕೈಗೊಂಡಿದ್ದೇನೆ’ ಎಂದರು.

‘ಆರಂಭದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಅವರು ಮಠದ ಜಮೀನಿನಲ್ಲಿ 5 ಸಸಿ ನೆಟ್ಟಿದ್ದರು. ನಂತರ ನಾನು ಪ್ರತಿ ವರ್ಷ ಸಸಿಗಳನ್ನು ನೆಡುತ್ತಾ ಬಂದಿದ್ದೇನೆ. ಈಗ ಅಲ್ಲಿ ಮಾವು ಸೇರಿ 300 ಮರಗಳು ಇವೆ. ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಿದ್ದೇನೆ. ಶಾಂತಿ, ನೆಮ್ಮದಿ ಹಾಗೂ ಸಮಾಧಾನ ಕಂಡುಕೊಂಡಿದ್ದೇನೆ. 82ನೇ ವಯಸ್ಸಿನಲ್ಲೂ ಸಂತಸದಿಂದ ಇದ್ದೇನೆ’ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ಶಿವಯೋಗೀಶ್ವರ ಸ್ವಾಮೀಜಿ ಅವರು ನುಡಿದಂತೆ ನಡೆದು ಎಲ್ಲರಿಗೆ ಮಾದರಿಯಾಗಿದ್ದಾರೆ’ ಎಂದು ಹೇಳಿದರು.

‘ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅಪಾರವಾಗಿದೆ’ ಎಂದು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಅನೇಕ ಸ್ವಾಮೀಜಿಗಳು ಭಕ್ತರಿಂದ ಕಾಣಿಕೆ, ದೇಣಿಗೆ ಸ್ವೀಕರಿಸುತ್ತಾರೆ. ಆದರೆ, ಶಿವಯೋಗೀಶ್ವರ ಸ್ವಾಮೀಜಿ ಭಕ್ತರು ಹಾಗೂ ಸಮಾಜಕ್ಕೆ ಕೊಡುಗೆ ನೀಡುವವರಾಗಿದ್ದಾರೆ. ಬಸವ ಕೇಂದ್ರದ ಕಟ್ಟಡಕ್ಕೆ ₹1 ಲಕ್ಷ ದೇಣಿಗೆ ನೀಡಿದ್ದರು’ ಎಂದು ಸ್ಮರಿಸಿದರು.

ಬಸವ ಮುಕ್ತಿ ಮಂದಿರದ ಉತ್ತರಾಧಿಕಾರಿ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ಶಿವಯೋಗೇಶ್ವರ ಸ್ವಾಮೀಜಿ ಅವರ ಮಾರ್ಗದರ್ಶನದಂತೆ ಸಾಮಾಜಿಕ, ಧಾರ್ಮಿಕ ಹಾಗೂ ದೇಶ ಸೇವೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೇನೆ’ ಎಂದು ಹೇಳಿದರು.

‘ಬಸವಾದಿ ಶರಣರ ವಚನಗಳನ್ನು ಮನೆ, ಮನೆ ತಲುಪಿಸುವ ಕಾರ್ಯ ಮಾಡುವೆ’ ಎಂದು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಪ್ರಮುಖರಾದ ಎಂ.ಜಿ. ದೇಶಪಾಂಡೆ, ರೇವಣಸಿದ್ದಪ್ಪ ಜಲಾದೆ, ಕುಶಾಲ್ ಯಾಬಾ, ರಾಜಶೇಖರ ತಾಂಡೂರೆ, ಬಸವಣಪ್ಪ ನೇಳಗೆ, ಶಿವಮೂರ್ತಿ ಬಟನಾಪುರೆ, ವಿಶ್ವನಾಥ ಮಠಪತಿ, ವಿಜಯಕುಮಾರ ಬಾಬಣೆ, ನಾಗರಾಜ ಸ್ವಾಮಿ, ಕಾಶೀನಾಥ ಸೂರ್ಯವಂಶಿ, ಅರವಿಂದ ಕಾರಬಾರಿ, ವೀರಶೆಟ್ಟಿ ಪಾಟೀಲ, ಡಾ. ಸಿ.ಎಸ್. ಮಾಲಿಪಾಟೀಲ, ಸಿದ್ಧಾರೂಢ ಭಾಲ್ಕೆ, ಅಶೋಕ ದಿಡಗೆ, ವೀರಶೆಟ್ಟಿ ಚನ್ನಶೆಟ್ಟಿ, ವೀರಭದ್ರಪ್ಪ ಬುಯ್ಯಾ, ಮಲ್ಲಿಕಾರ್ಜುನ ಪಂಚಾಕ್ಷರಿ, ಸಂಗು ಸಾಹುಕಾರ, ರಾಕಿ ಚೌಧರಿ, ಸೋಮನಾಥ ಗಂಗಶೆಟ್ಟಿ, ನಾಗಶೆಟ್ಟೆಪ್ಪ ದಾಡಗಿ, ಭಗವಂತ ಔದತ್ತಪುರ, ಬಸವರಾಜ ಲಾಧಾ, ಕಲ್ಲಪ್ಪ ಮುಗಟೆ, ಪ್ರತಿಭಾ ಚಾಮಾ, ಗುರುನಾಥ ಬಿರಾದಾರ್, ರೇವಣಪ್ಪ, ಶಿವಶಂಕರ ಟೋಕರೆ, ಯೋಗೇಂದ್ರ ಯದಲಾಪುರೆ ಸೇರಿದಂತೆ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-33-743736770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.