ಬೀಳಗಿ: ‘ಅದ್ದೂರಿ ಮದುವೆಗಳು ಆರ್ಥಿಕ ಸಂಷ್ಟಕ್ಕೆ ಸಿಲುಕಿಸುತ್ತವೆ. ಹಾಗಾಗಿ, ಸರಳ ಸಾಮೂಹಿಕ ವಿವಾಹಗಳ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಸಾಲದ ಹೊರೆ ತಗ್ಗಿ, ಜೀವನ ನೆಮ್ಮದಿಯಿಂದ ಸಾಗುತ್ತದೆ’ ಎಂದು ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಬಸವೇಶ್ವರ ದೇವಸ್ಥಾನದಲ್ಲಿ ಬಸವ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿ, ‘ನಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ ಸರಳವಾಗಿ ವಿವಾಹ ಕಾರ್ಯಕ್ರಮ ಆಯೋಜಿಸಬೇಕು. ಜೀವನವನ್ನು ನೆಮ್ಮದಿಯಿಂದ ಕಳೆಯಲು ಸಾಲದಿಂದ ಮುಕ್ತರಾಗಬೇಕು’ ಎಂದರು.

ಬೀಳಗಿ ಗಾಂಧಿನಗರದ ಬೃಹನ್ಮಠದ ಶಿವಾನಂದ ದೇವರು ಮಾತನಾಡಿ, ‘ಇತರರ ಮದುವೆ ಆಧರಿಸಿ, ನಮ್ಮ ಕುಟುಂಬದವರ ಮದುವೆ ಮಾಡಬಾರದು. ಇದು ಕುಟುಂಬವನ್ನು ಆರ್ಥಿಕವಾಗಿ ಹಾನಿಗೊಳಿಸುತ್ತದೆ. ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನವಾಗಿವೆ. ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸರಳತೆಗೆ ಪ್ರೋತ್ಸಾಹ ನೀಡುತ್ತವೆ’ ಎಂದು ತಿಳಿಸಿದರು.

‘ಬಸವಣ್ಣನವರು ತುಳಿತಕ್ಕೊಳಗಾದವರು, ಅಸಹಾಯಕರು ಮತ್ತು ಸಮಾಜದ ಕಟ್ಟಕಡೆಯ ಜನರನ್ನೂ ಮುಖ್ಯವಾಹಿನಿಗೆ ತಂದು, ಅವರಿಗೆ ಬದುಕಿನ ಸನ್ಮಾರ್ಗ ತೋರಿಸುವ ಮೂಲಕ ವಿಶ್ವ ಗುರು ಎನಿಸಿಕೊಂಡರು. ಪ್ರತಿ ವರ್ಷ ಬಸವಣ್ಣನವರ ಜಯಂತಿ ಅಂಗವಾಗಿ ಕಮಿಟಿ ವತಿಯಿಂದ ಉಚಿತವಾಗಿ ಸಾಮೂಹಿಕ ವಿವಾಹ ಆಯೋಜಿಸುತ್ತಿರುವುದು ಶ್ಲಾಘನೀಯ’ ಎಂದರು.

ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಗಣಪತಿ ಮರಾಠೆ, ನೂರಲಿಸಾಬ್ ಮುಜಾವರ, ಅಣವೀರಯ್ಯ ಪ್ಯಾಟಿಮಠ, ಯಲ್ಲಪ್ಪ ಮೇಟಿ, ಸಿದ್ದು ಸಾರಾವರಿ, ಲಕ್ಷ್ಮಣ ತೋಟದ, ಬಸು ಬೆಣ್ಣಿರೊಟ್ಟಿ, ಬಸವರಾಜ ನರಿ, ಶೇಖಪ್ಪ ಮೇಟಿ, ಮುತ್ತಪ್ಪ ಬೆಣ್ಣಿರೊಟ್ಟಿ, ಈರಪ್ಪ ಗಲಗಲಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-19-1180430016

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.