ಬ್ರಹ್ಮಾವರ: ಪಾಕಿಸ್ತಾನದ ಗಡಿಯಲ್ಲಿದ್ರೂ ಅಪ್ಪ ಉಪದೇಶಿಸಿದ ಹತ್ತು ಗಾಯತ್ರಿ ಮಂತ್ರ ಪಠಿಸಿದರೆ ಮಾತ್ರ ಸಮಾಧಾನವಾಗುತ್ತಿತ್ತು ಎಂದು ನಿವೃತ್ತ ಸೈನಿಕ ಬೈಂದೂರು ಚಂದ್ರಶೇಖರ ನಾವಡ ಹೇಳಿದರು.

ಸಾಲಿಗ್ರಾಮದ ಶ್ರೀಗುರುನರಸಿಂಹ ದೇವಸ್ಥಾನದಲ್ಲಿ ನಡೆದ ವಸಂತ ವೇದ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮಗೆ ಬಾಲ್ಯದಲ್ಲಿ ಸಂಧ್ಯಾವಂದನೆ, ಸಂಜೆ ಭಜನೆ ಮೊದಲಾದ ಸಂಸ್ಕಾರಗಳು ಹೇಳಿಕೊಡುತ್ತಿದ್ದರು. ಈಗ ಬೇರೆಯವರು ಅಪಹಾಸ್ಯ ಮಾಡುತ್ತಾರೆ, ಮೊದಲಾದ ಕಾರಣಗಳಿಗೆ ಈ ಸಂಸ್ಕಾರಗಳಿಂದ ವಿಮುಖರಾಗುತ್ತಿದ್ದಾರೆ ಎಂದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಪರಶುರಾಮ ಭಟ್ ವಿದ್ಯಾರ್ಥಿಗಳಿಗೆ ಶಿಬಿರದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ಆಡಳಿತ ಮಂಡಳಿ ಉಪಾಧ್ಯಕ್ಷ ಚಂದ್ರಶೇಖರ ಉಪಾಧ್ಯ, ಸದಸ್ಯರಾದ ತಾರಾನಾಥ ಹೊಳ್ಳ, ಜಗದೀಶ್ ಕಾರಂತ, ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀಪತಿ ಅಧಿಕಾರಿ ಇದ್ದರು. ಅಖಿಲೇಶ್ ನಿರೂಪಿಸಿದರು. ನಾಗರಾಜ್ ಹಂದೆ ಸ್ವಾಗತಿಸಿದರು. ಪಿ.ಸಿ ಹೊಳ್ಳ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-28-1633642336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.