ಬ್ಯಾಡಗಿ: ‘ಪೂರ್ವಜರ ಆಚಾರ ವಿಚಾರಗಳನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಜಂಗಮರು ಧರ್ಮರಕ್ಷಣೆಗೆ ಮುಂದಾಗಬೇಕು’ ಎಂದು ಶಿಕಾರಿಪುರದ ದಿಂಡದಹಳ್ಳಿ ಪಶುಪತಿ ಶಿವಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ರೇಣುಕಾಚಾರ್ಯ ಮಂದಿರದಲ್ಲಿ ಪಂಚಾಚಾರ್ಯ ಯುವ ವೇದಿಕೆ ಜಿಲ್ಲೆಯ 34 ಜಂಗಮ ವಟುಗಳಿಗೆ ಈಚೆಗೆ ಆಯೋಜಿಸಿದ್ದ ಅಯ್ಯಾಚಾರ (ಶಿವದೀಕ್ಷೆ) ಕಾರ್ಯಕ್ರಮವನ್ನು ನೆರವೇರಿಸಿ ಆಶೀರ್ವಚನ ನೀಡಿದರು.

ಶಿವದೀಕ್ಷಾ ಪಡೆದವರು ನಿತ್ಯ ಸ್ನಾನದ ಬಳಿಕ ಶಿವಪೂಜೆ ನೆರವೇರಿಸುವುದನ್ನು ಜೀವನದುದ್ದಕ್ಕೂ ನೆರವೇರಿಸುವ ಮೂಲಕ ನೈತಿಕ ಮೌಲ್ಯ ಹಾಗೂ ಪರೋಪಕಾರ ಗುಣಗಳನ್ನು ಅಳವಡಿಕೊಳ್ಳಬೇಕೆಂದು ಸಲಹೆ ನೀಡಿದರು.

ರಾಣೆಬೆನ್ನೂರು ಶನೀಶ್ವರ ಹಿರೇಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಅಯ್ಯಾಚಾರ ಪಡೆದ ಎಲ್ಲರೂ ಕನಿಷ್ಠ 5 ಮನೆಗಳಿಗೆ ತೆರಳಿ ದವಸ, ಧಾನ್ಯ ಭಿಕ್ಷೆ ಪಡೆಯುವ ಪದ್ದತಿ ನಡೆಸಬೇಕೆಂದು ಹೇಳಿದರು.

ಕುಮಾರೇಶ್ವರರ ಧಾರ್ಮಿಕ ಪಾಠ ಶಾಲೆಯ ಮುಖ್ಯಸ್ಥ ರಾಚಯ್ಯ ಓದಿಸೋಮಠ, ವೀರಯ್ಯ ಹಿರೇಮಠ, ಚನ್ನಬಸವ ಹಿರೇಮಠ ನೇತೃತ್ವದಲ್ಲಿ ಶಿವದೀಕ್ಷಾ ಕಾರ್ಯಕ್ರಮ ನೆರವೇರಿಸಲಾಯಿತು. ಸಾಯಿಬಾಬಾ ಮಂದಿರದ ಧರ್ಮಾಧಿಕಾರಿ ಮಂಜಯ್ಯಸ್ವಾಮಿ ಹಿರೇಮಠ ಮಂತ್ರೋಚಾರದ ಮಹತ್ವ ಹಾಗೂ ಶಿಷ್ಟಾಚಾರಗಳ ಕುರಿತು ಮಾಹಿತಿ ನೀಡಿದರು.

ಈ ವೇಳೆ ಪಂಚಾಚಾರ್ಯ ಯುವ ವೇದಿಕೆಯ ಅಧ್ಯಕ್ಷ ಶರಣಯ್ಯ ಬೂದಿಹಾಳಮಠ, ಮೃತ್ಯುಂಜಯ ಹಿರೇಮಠ, ಗಿರಿಶ ಇಂಡಿಮಠ, ಕೆ.ಸಿ.ಸೊಪ್ಪಿನಮಠ, ರಾಜಶೇಖರ ಹಾಲೇವಾಡಿಮಠ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-22-45509779

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.