ಚಾಮರಾಜನಗರ: ವೈಭವೋಪೇತ ಜೀವನವನ್ನು ತೊರೆದು ಮನುಕುಲದ ಉದ್ಧಾರಕ್ಕಾಗಿ ಮಾನವೀಯ ಮೌಲ್ಯಗಳ ವಿಚಾರಧಾರೆಗಳನ್ನು ಬಿತ್ತಿದ ಬುದ್ಧ ಜಗತ್ತಿನ ಬೆಳಕು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2570ನೇ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿಯಲ್ಲಿ ಮಾತನಾಡಿ ‘ಮಹಾರಾಜ ಶುದ್ದೋಧನ, ಮಾಯಾವತಿ ದಂಪತಿಯ ಪುತ್ರನಾಗಿ ಜನಿಸಿದ ಬುದ್ಧರು ರಾಜವೈಭೋಗವನ್ನು ತೊರೆದು ಲುಂಬಿನಿವನದ ಬೋಧಿವೃಕ್ಷದ ಕೆಳಗೆ ಜ್ಞಾನೋದಯ ಪಡೆದರು ಎಂದರು.

ಮನುಕುಲದ ಉದ್ಧಾರಕ್ಕಾಗಿ ಮಾನವೀಯ ಮೌಲ್ಯವುಳ್ಳ ವಿಚಾರಧಾರೆಗಳನ್ನು ಜಗತ್ತಿಗೆ ಪಸರಿಸುತ್ತಾ ಹೋದರು. ಆಸೆಯೇ ದುಖಕ್ಕೆ ಮೂಲ ಎಂಬ ಸತ್ಯವನ್ನು ಹೇಳುವ ಮೂಲಕ ಆಸೆ ತ್ಯಜಿಸುವಂತೆ ಕರೆ ನೀಡಿದರು. ಎಲ್ಲ ಧರ್ಮಗಳ ಸಾರವೂ ಮಾನವಕುಲದ ಒಳಿತಿಗೆ ಪೂರಕವಾಗಿದೆ. ಸಕಲ ಜೀವರಾಶಿಗಳನ್ನು ಸಮಾನವಾಗಿ ಕಾಣಬೇಕು ಎಂದು ಬುದ್ಧ ತಿಳಿಸಿದ್ದಾರೆ. ಬೌದ್ಧ ಧರ್ಮದ ಸಾರವನ್ನು ಎಲ್ಲರೂ ಅರಿತು ಪಾಲಿಸಬೇಕು. ಬುದ್ಧಮಾರ್ಗದಲ್ಲಿ ನಡೆಯಬೇಕು ಎಂದು ಶಾಸಕ ಪುಟ್ಟರಂಗಶೆಟ್ಟಿ ತಿಳಿಸಿದರು.

ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ‘ಯುದ್ಧ, ಹಿಂಸೆ, ಆಶಾಂತಿ ತುಂಬಿರುವ ಜಗತ್ತಿನಲ್ಲಿ ಮತ್ತೆ ಶಾಂತಿ, ನೆಮ್ಮದಿ ಹರಡಲು ಬುದ್ಧನ ಸಂದೇಶ ಹಾಗೂ ವಿಚಾರಧಾರೆಗಳು ಅಗತ್ಯವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ ಬುದ್ಧ, ಬಸವ, ಅಂಬೇಡ್ಕರ್ ಸಹಿತ ಎಲ್ಲಾ ಮಹಾತ್ಮರ ಸಂದೇಶಗಳು ಮಾನವ ಕಲ್ಯಾಣವೇ ಆಗಿದೆ. ಪ್ರತಿಯೊಬ್ಬರು ಶಾಂತಿ, ನೆಮ್ಮದಿಗಾಗಿ ಬದುಕಲು ಬುದ್ಧನ ತತ್ವ ಆದರ್ಶಗಳ ಪಾಲನೆ ಅಗತ್ಯ ಎಂದು ಹೇಳಿದರು.

ಕಲಬುರ್ಗಿ ಜನಪರ ವೇದಿಕೆಯ ಬೌದ್ಧ ವಿಚಾರವಾದಿ ಜಿತೇಂದ್ರ ಕೆ.ತಳವಾರ್ ಮಾತನಾಡಿ, ‘ನಿನಗೆ ನೀನೆ ಬೆಳಕು’ ಎಂದು ಜಗತ್ತಿಗೆ ಸಾರಿದ ಬುದ್ಧರು ಜಗದ ಬೆಳಕಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳು ಜಗತ್ತಿಗೆ ಬೆಳಕು ನೀಡುತ್ತಿವೆ. ಮೂವರು ಮಹನೀಯರನ್ನು ಓದಿಕೊಂಡಾಗ ಮಾತ್ರ ಜಗತ್ತು ಉದ್ಧಾರವಾಗುತ್ತದೆ. ಬುದ್ಧನ ಪಂಚಶೀಲ ತತ್ವಗಳ ಸಾರವನ್ನು ಎಲ್ಲರೂ ಅರಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ಕೊಳ್ಳೇಗಾಲದ ಚೆನ್ನಲಿಂಗನಹಳ್ಳಿಯ ಜೀತವನ ಬುದ್ಧ ವಿಹಾರದ ಮನೋರಕ್ಕಿತ ಥೇರಾ ಬಂತೇಜಿ ಬುದ್ಧನ ಧ್ಯಾನದ ಮಹತ್ವವನ್ನು ತಿಳಿಸಿದರು.

ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ರಾಜು, ಭಾರತೀಯ ಬೌದ್ಧ ಮಹಾಸಬಾ ಅಧ್ಯಕ್ಷ ಬಸವರಾಜು, ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-37-1573674817

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.