ಚನ್ನಗಿರಿ: ‘12ನೇ ಶತಮಾನದ ಬಸವಾದಿ ಶಿವಶರಣರು ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರು. ಹಾಗೆಯೇ ನಾವು ಮಾಡುತ್ತಿರುವ ವೃತ್ತಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು’ ಎಂದು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಎಚ್.ಎಸ್. ಮಲ್ಲಿಕಾರ್ಜುನಪ್ಪ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ಶುಕ್ರವಾರ ನಡೆದ ಕಾಯಕ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಯಕ ಯೋಗಿಗಳನ್ನು ಸನ್ಮಾನಿಸಿ ಮಾತನಾಡಿದರು.

‘ನಾವು ಕೈಗೊಳ್ಳುವ ವೃತ್ತಿಯ ಬಗ್ಗೆ ಯಾವತ್ತೂ ಕೀಳರಿಮೆ ಹೊಂದಬಾರದು. ಪ್ರತಿಯೊಂದು ವೃತ್ತಿಗೂ ಅದರ ಹಿರಿಮೆ ಇರುತ್ತದೆ. ವೃತ್ತಿ ಧರ್ಮದ ಬಗ್ಗೆ ನಿಷ್ಠೆ ಹೊಂದಿರುವುದು ಅಗತ್ಯ. ಪ್ರಾಮಾಣಿಕತೆ, ತಾಳ್ಮೆಯಿಂದ ವೃತ್ತಿ ಮಾಡಬೇಕು’ ಎಂದರು.

ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಸ್. ಮಲ್ಲೇಶಪ್ಪ, ಖಜಾಂಚಿ ಬಿ. ಶಿವಲಿಂಗಪ್ಪ, ಬಸವ ಬಳಗದ ಕಾರ್ಯದರ್ಶಿ ಜಿ.ಎಸ್. ಚಂದ್ರಪ್ಪ, ಎನ್.ಎಸ್. ರಾಜಪ್ಪ, ಟಿ. ಮಂಜಪ್ಪ, ಎಂ.ಎಸ್. ಸಿದ್ದಯ್ಯ, ಜಿ.ಎಸ್. ಶಂಕರಪ್ಪ, ವಿಶ್ವ ಮಾನವ ಹಕ್ಕುಗಳ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸಿ.ಆರ್. ನಾಗೇಂದ್ರಪ್ಪ ಉಪಸ್ಥಿತರಿದ್ದರು.

ಕಾಯಕ ಯೋಗಿಗಳಾದ ಜಾಕೀರ್ ಆಲಿ, ಮನು, ಬಸವರಾಜ್, ದಿನೇಶ್ ಹಾಗೂ ರಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-43-691209639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.