ಚನ್ನರಾಯಪಟ್ಟಣ: ‘ಬದುಕಿನಲ್ಲಿ ಯಶಸ್ಸು, ಕೀರ್ತಿ ಪಡೆಯಬೇಕಾದರೆ ಭಗವಂತನ ಅನುಗ್ರಹ ಇರಬೇಕು. ಸಮಾಜಮುಖಿ ಕೆಲಸದಿಂದ ಮನಸಿಗೆ ನೆಮ್ಮದಿ ದೊರಕುತ್ತದೆ’ ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಪಟ್ಟಣದ ಗುರುರಾಘವೇಂದ್ರ ಮಠದ 34ನೇ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ‘ನಾಡಿನ ಅನೇಕ ದಾನಿಗಳು ಕಾಣಿಕೆ ರೂಪದಲ್ಲಿ ಭಗವಂತನ ಕಾರ್ಯಕ್ಕೆ ಸಮರ್ಪಣೆ ಮಾಡಿದ್ದಾರೆ. ಎಲ್ಲರ ಮೇಲೆ ಭಗವಂತನ ಆಶೀರ್ವಾದ ನಿರಂತರವಾಗಿರುತ್ತದೆ’ ಎಂದು ಹೇಳಿದರು.

ಗುರುರಾಘವೇಂದ್ರ ಮಠದ ಸಮಿತಿ ಅಧ್ಯಕ್ಷ ಸಿ.ವಿ.ರಾಜಪ್ಪ ಮಾತನಾಡಿ, ಭಕ್ತರ ಸಹಕಾರದಿಂದ ರಾಘವೇಂದ್ರಮಠ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಪುರಸಭಾ ಸದಸ್ಯ ಸಿ.ಎನ್. ಶಶಿಧರ್ ಮಾತನಾಡಿ, ‘ಗುರು ಮತ್ತು ಗುರಿ ಇಲ್ಲದಿದ್ದರೆ ಸಾಧನೆ ಶೂನ್ಯ. ಮಠಕ್ಕೆ ಪೂಜಾ ಕೈಂಕರ್ಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರತಿ ಗುರುವಾರ ದಾಸೋಹ ಏರ್ಪಡಿಸಬೇಕು’ ಎಂದರು. ಮಠದ ಕಾರ್ಯದರ್ಶಿ ಸಿ.ಎನ್. ಪುಟ್ಟಸ್ವಾಮಿಗೌಡ ಮಾತನಾಡಿದರು. ರಾಘುರಾಜಪ್ಪ, ಮಹೇಶ್, ರೂಪೇಶ್, ವಿಜಯ್, ಸಿ.ಎನ್. ಶಶಿಧರ್ ಅವರನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-36-148439362

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.