ಪೆರೇಸಂದ್ರ (ಚಿಕ್ಕಬಳ್ಳಾಪುರ): ಬುದ್ಧದೇವನ ಬೆಳಕಿನಲ್ಲಿ ನಮ್ಮನ್ನು ನಾವು ಅರಿತು ವಿವೇಕಿಗಳಾಗಬೇಕು. ಬದುಕಿನ ಧನ್ಯತೆ ಕಾಣಬೇಕು ಎಂದು ಶಾಂತ ಶಿಕ್ಷಣ ಸಂಸ್ಥೆ ನಿರ್ದೇಶಕ ಪ್ರೊ. ಕೋಡಿ ರಂಗಪ್ಪ ತಿಳಿಸಿದರು.

ಪೆರೇಸಂದ್ರದ ಶಾಂತಾ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬುದ್ದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

2,500 ವರ್ಷಗಳ ಹಿಂದೆ ಮಗದ ಸಾಮ್ರಾಜ್ಯದ ಯುವರಾಜ ಸಿದ್ದಾರ್ಥನು ಜನಸಾಮಾನ್ಯರ ಸಂಕಷ್ಟಗಳಿಗೆ ಕಾರಣ ಮತ್ತು ಪರಿಹಾರಗಳನ್ನು ಕಾಣುವ ಇಚ್ಛೆಯಿಂದ ರಾಜ್ಯಾಧಿಕಾರ, ಅರಮನೆ, ಮಡದಿ, ಮಕ್ಕಳು ಮತ್ತು ತನ್ನ ಜನಸಮುದಾಯ ಎಲ್ಲವನ್ನು ತೊರೆದು ಸಮಾಜ ಸುಧಾರಕನಾಗಿ ಹತ್ತಾರು ವರ್ಷಗಳು ಅಲೆದು, ಚಿಂತನೆ ಮಾಡಿ ಮನುಷ್ಯನ ಜೀವನವನ್ನು ಅರ್ಥ ಮಾಡಿಕೊಂಡು ಬುದ್ಧನಾಗುತ್ತಾನೆ ಎಂದು ಸ್ಮರಿಸಿದರು.

ಏಷ್ಯಾದ ಬೆಳಕು ಹಾಗೂ ಮನುಕುಲದ ಗುರು ಎನಿಸಿರುವ ಬುದ್ದನು ಜೀವನದ ಪ್ರತಿ ವಿಷಯಗಳನ್ನು ಸಮನ್ವಹಿಸಿ ನೋಡಬೇಕು, ಅಂತರಂಗವನ್ನು ಅರಿಯಬೇಕು, ತನ್ನಲ್ಲಿರುವ ಶಕ್ತಿ ಸಾಮರ್ಥ್ಯಗಳನ್ನು ಗುರ್ತಿಸಿ ಅವುಗಳನ್ನು ಬಲಪಡಿಸಿಕೊಂಡು ಸಮನ್ವಯ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂಬ ತತ್ವವನ್ನು ಪ್ರತಿಪಾದಿಸಿದ್ದಾರೆ ಎಂದು ಹೇಳಿದರು.

ಬುದ್ಧನಿಂದ ಪ್ರೇರಿತರಾದ ಅಶೋಕ ಚಕ್ರವರ್ತಿ, ಹರ್ಷವರ್ಧನ ಮುಂತಾದ ದೊರೆಗಳು ಬುದ್ಧನ ನಂತರ ಅವರ ತತ್ವಗಳನ್ನು ಪಾಲಿಸುತ್ತ ಬೋಧಿಸುತ್ತ ಮಾನವೀಯತೆ ಆಧಾರದ ಸಾಮ್ರಾಜ್ಯವನ್ನು ಕಟ್ಟಿದರು ಎಂದರು.

ಪ್ರಾಂಶುಪಾಲ ನವೀನ್ ಸೈಮನ್ ಮಾತನಾಡಿ, ‘ನಮ್ಮ ದೇಶದ ಗುರು ಪರಂಪರೆಗೆ ಗೌತಮ ಬುದ್ಧರು ಸಾಕ್ಷಿ ಪ್ರಜ್ಞೆಗಳಾಗಿದ್ದಾರೆ. ದೇಶದ ಜನರ ಅಜ್ಞಾನ ತೊಡೆದು ಸುಜ್ಞಾನ ಮತ್ತು ಮಾನವೀಯತೆ ಬೆಳೆಸಲು ಬುದ್ಧನ ಸಂದೇಶಗಳು ಹಾಗೂ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಶಾಂತಾ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಪ್ರೊ. ನರೇಶ್ ಕುಮಾರ್, ಪ್ರೊ. ವಿಜಯಲಕ್ಷ್ಮಿ, ಪ್ರೊ. ಸುನಿಲ್ ಕುಮಾರ್, ಕಿರಣ್, ರೇವತಿ, ಆಕಾಂಕ್ಷಾ, ಪ್ರಾರ್ಥನಾ, ಸಿಜಾ, ಪ್ರಸೀತ, ಸಚಿನ್, ಕಿರಣ್, ಸುನಿಲ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-16-8353576

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.