ಮೂಡಿಗೆರೆ: ‘ಉನ್ನತ ಶಿಕ್ಷಣದಿಂದ ಪಡೆದ ಅಧಿಕಾರ ಹಾಗೂ ಮೀಸಲಾತಿಯಲ್ಲಿ ಬ್ರಹ್ಮನ ಪಾತ್ರಕ್ಕಿಂತ ಹೆಚ್ಚಾಗಿ ಅಂಬೇಡ್ಕರ್ ಅವರ ಪಾತ್ರವಿದೆ ಎಂಬುದನ್ನು ಪ್ರತಿಯೊಬ್ಬ ಅಧಿಕಾರಸ್ಥರು ಅರ್ಥ ಮಾಡಿಕೊಂಡು, ನಗುಮುಖದ ಜನಸೇವೆಯಲ್ಲಿ ತೊಡಗಬೇಕು’ ಎಂದು ಅವಧೂತ ವಿನಯ್ ಗುರೂಜಿ ಹೇಳಿದರು.

ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಆಚರಣೆ ಸಮಿತಿಯಿಂದ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ 10 ಜೋಡಿಗಳ ಸರಳ ಸಾಮೂಹಿಕ ವಿವಾಹದಲ್ಲಿ ಅವರು ಮಾತನಾಡಿದರು.

‘ನನ್ನ ತಾಯಿ ವಿಪರೀತ ಮಡಿವಂತಿಕೆಯವರು. ನಮ್ಮ ಮನೆಯಲ್ಲಿ ಕೆಲಸಕ್ಕಿದ್ದ ಗಿರಿಜಾ ಎಂಬ ಮಹಿಳೆಯ ಸೀರೆ ಹರಿದಿತ್ತು. ಕೊಲ್ಲೂರು ದೇವಸ್ಥಾನಕ್ಕೆಂದು ಕೊಡಲು ಇಟ್ಟಿದ್ದ ಸೀರೆಯನ್ನು 5ನೇ ತರಗತಿಯಲ್ಲಿ ಓದುತ್ತಿದ್ದ ನಾನು ಮಹಿಳೆಗೆ ನೀಡಿದೆ. ಕೊಲ್ಲೂರು ದೇವಸ್ಥಾನಕ್ಕೆ ಪ್ರತಿದಿನ ಹತ್ತಾರು ಸೀರೆಗಳು ದಾನವಾಗಿ ಬರುತ್ತವೆ. ಆದರೆ, ಈ ಮಹಿಳೆಗೆ ಸೀರೆ ಕೊಡುವವರು ಯಾರೂ ಇಲ್ಲ ಎಂದು ನನ್ನ ಮನಸ್ಸು ಕರಗಿತ್ತು’ ಎಂದರು.

‘ಸೂರ್ಯನಿಗಿಲ್ಲದ ಭೇದ, ಹಸಿವಿಗಿಲ್ಲದ ಭೇದ, ನಮಗ್ಯಾಕೆ ಎಂದು ಜಾತಿ ವ್ಯವಸ್ಥೆಯ ಬಗ್ಗೆ ಮೃದುವಾಗಿ ಚಿಕ್ಕ ವಯಸ್ಸಿನಿಂದಲೇ ವರ್ತಿಸತೊಡಗಿದ್ದೇನೆ. ನಮ್ಮ ಆಶ್ರಮದಲ್ಲಿ ಜಾತಿ– ಭೇದವಿಲ್ಲ. ಆಶ್ರಮಗಳು ಮಾನವನ ವಿಕಾಸಕ್ಕಾಗಿರಬೇಕು ಎಂದು ನಮ್ಮ ಆಶ್ರಮವನ್ನು ಶಾಸ್ತ್ರದಲ್ಲಿ ಮುಳುಗಿಸದೆ ಬೈಬಲ್, ಕುರಾನ್, ಗುರು ಚರಿತ್ರೆಯನ್ನು ಅಳವಡಿಸಿಕೊಂಡಿದ್ದೇನೆ. ದೇಶದಲ್ಲಿ ಮಸೀದಿ, ಚರ್ಚ್, ದೇವಸ್ಥಾನ ಹಾಗೂ ರಾಜಕೀಯ ಪಕ್ಷಗಳ ಕಚೇರಿ ಎಲ್ಲವೂ ಇವೆ. ಭಾರತೀಯ ನೆಲ ಯಾವುದನ್ನೂ ತಿರಸ್ಕರಿಸಿಲ್ಲ. ಮನುಷ್ಯರಾದ ನಾವು ಮಾತ್ರ ಜಾತಿ, ಧರ್ಮ ಎಂಬ ಮೇಲಾಟದಲ್ಲಿ ತೊಡಗಿದ್ದೇವೆ’ ಎಂದರು.

ಕಾಂಗ್ರೆಸ್ ನಾಯಕಿ ಮೋಟಮ್ಮ ಮಾತನಾಡಿ, ‘ಮದುವೆಗಾಗಿ ಮಾಡಿದ ಸಾಲವನ್ನು ತೀರಿಸುವುದರಲ್ಲೇ ಬಡವರ್ಗದವರ ಜೀವನ ಕಳೆದು ಹೋಗಬಾರದೆಂದು ಪ್ರತಿವರ್ಷ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ಹಸೆ ಶಾಸ್ತ್ರವನ್ನು ಮನೆಯವರು ಮಾತ್ರ ಮಾಡಿಕೊಳ್ಳಬೇಕು. ಬೀಗರ ಊಟ ಇತರ ಶಾಸ್ತ್ರ ಎಂದು ಖರ್ಚು ಮಾಡಿಕೊಳ್ಳದೆ ಸಾಲದಿಂದ ಮುಕ್ತರಾಗಬೇಕು’ ಎಂದು ತಿಳಿಸಿದರು.

ಶಾಸಕಿ ನಯನಾ ಮೋಟಮ್ಮ ಮಾತನಾಡಿ, ‘ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 1,020 ಹಳ್ಳಿಗಳಿವೆ. ಪ್ರತಿ ಹಳ್ಳಿಯಿಂದ ವರ್ಷದಲ್ಲಿ ಒಬ್ಬ ಯುವಕ ಹಾಗೂ ಯುವತಿ ಉನ್ನತ ಶಿಕ್ಷಣ ಪಡೆದು ಉದ್ಯೋಗವನ್ನು ಗಿಟ್ಟಿಸಿಕೊಂಡಾಗ ಅಂಬೇಡ್ಕರ್ ಅವರ ಸಿದ್ಧಾಂತಕ್ಕೆ ಬೆಲೆ ಸಿಗುತ್ತದೆ. ಅವಧೂತ ವಿನಯ್ ಗುರೂಜಿ ಅವರು ತಮ್ಮ ಆಶ್ರಮದಲ್ಲಿ ನನ್ನ ತಾಯಿ ಮೋಟಮ್ಮ ಅವರ ಕೈಯಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿಸಿದ್ದಾರೆ. ಅಂಬೇಡ್ಕರ್ ಅವರ ಸಿದ್ಧಾಂತವನ್ನು ವಿನಯ್ ಗುರೂಜಿ ಅವರು ಅಳವಡಿಸಿಕೊಂಡಿದ್ದಾರೆ’ ಎಂದರು.

ಕಾರ್ಯಕ್ರಮದಲ್ಲಿ ಸುಧೀರ್ ಅತ್ತಾವರ, ಸಬಿತಾ ಗುಣಮಿ, ಬೆಂಗಳೂರಿನ ರೇಷ್ಮಾ, ನಿರ್ಮಲ ಮಂಚೇಗೌಡ, ಡಿ.ಎಸ್.ರಘು, ಬಿ.ಆರ್. ಬಾಲಕೃಷ್ಣ, ಸುಬ್ರಾಯಗೌಡ, ಅಣ್ಣಪ್ಪ, ವೆಂಕಟರಮಣ, ಪೂರ್ಣೇಶ್ ಜಿ.ಹೊಸಳ್ಳಿ, ಎಂ.ಎನ್.ಅಶ್ವತ್ಥ್, ಹೊಸಕೆರೆ ರಮೇಶ್, ಸಿ.ಬಿ.ಶಂಕರ್, ಸುಧೀರ್ ಚಕ್ರಮಣಿ, ಬಿ.ಎಂ.ಶಂಕರ್, ಸುರೇಂದ್ರ, ಸೀತಮ್ಮ, ಇಂದಿರಾ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-126-2091667139

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.