ಆಲ್ದೂರು: ವಸ್ತಾರೆ ಹೋಬಳಿ, ಆಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಕ್ಕುಂದ ಗ್ರಾಮದಲ್ಲಿರುವ ಶ್ರೀಕಾಲಭೈರವೇಶ್ವರ, ಶ್ರೀಮಲ್ಲೇಶ್ವರ ಹಾಗೂ ಶ್ರೀಗಣಪತಿ ದೇವಸ್ಥಾನಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಗುರುವಾರ ಸಂಪನ್ನಗೊಂಡಿತು.

ಕೋಟೆವೂರು ಅಣ್ಣೇಗೌಡ ಅವರು, ದೇವಸ್ಥಾನ ಹಾಗೂ ದೇವರ ಐತಿಹಾಸಿಕ ಹಿನ್ನೆಲೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ‘ದೇವಾಲಯಗಳು ಆಧ್ಯಾತ್ಮಿಕ ಪರಂಪರೆಯ ಆಲದ ಮರದಂತಿವೆ. ಆಲದ ಮರವು ಅನೇಕ ಜೀವಿಗಳಿಗೆ ಆಶ್ರಯ ನೀಡುವಂತೆ, ದೇವಸ್ಥಾನಗಳು ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿ–ಬೆಳೆಸುವ ಕೇಂದ್ರಗಳಾಗಬೇಕು’ ಎಂದರು.

‘ಅಂತರಂಗ ಶುದ್ಧಿಯಾಗಿದ್ದರೆ ಜೀವನ ಸೌಂದರ್ಯಮಯವಾಗುತ್ತದೆ. ಆದ್ದರಿಂದ ಅಂತರಂಗದ ಶುದ್ಧತೆಗೆ ಪ್ರಾಮುಖ್ಯ ನೀಡಬೇಕು. ಧರ್ಮದ ಸಾರವನ್ನು ಮುಂದಿನ ಪೀಳಿಗೆಗೆ ಒಯ್ಯುವವರು ಮಕ್ಕಳೇ ಆಗಿರುವುದರಿಂದ ಮಕ್ಕಳನ್ನು ದೇವಸ್ಥಾನಗಳ ಕಡೆಗೆ ಆಕರ್ಷಿಸಬೇಕು’ ಎಂದರು.

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ‘ಸಾಧಾರಣ ಗುಡಿಯನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ದೇವಾಲಯವಾಗಿ ರೂಪಿಸಿರುವುದು ಶ್ಲಾಘನೀಯ. ದೇವಾಲಯಗಳು ಸುಂದರವಾಗಿದ್ದರೆ ಊರು ಸುಭಿಕ್ಷವಾಗಿರುತ್ತದೆ. ನಮ್ಮ ವ್ಯಕ್ತಿತ್ವವನ್ನು ಸರಿದಾರಿಗೆ ತರಲು ಅಂತರಂಗದ ಕನ್ನಡಿ ಅಗತ್ಯ, ಅದನ್ನು ತೆರೆಯುವಂತೆ ದೇವಸ್ಥಾನಗಳು ಪ್ರೇರೇಪಿಸುತ್ತವೆ’ ಎಂದರು.

ಆದಿಚುಂಚನಗಿರಿ ಶಾಖಾ ಮಠ ಶೃಂಗೇರಿಯ ಪೀಠಾಧ್ಯಕ್ಷ ಗುಣಾನಾಥ ಸ್ವಾಮೀಜಿ, ಹಾಸನದ ಆದಿಚುಂಚನಗಿರಿ ಶಾಖಾ ಮಠದ ಪೀಠಾಧ್ಯಕ್ಷ ಶಂಭುನಾಥ ಸ್ವಾಮೀಜಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.

ಶ್ರೀಕಾಲಭೈರವೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಚ್.ಎ. ವಿಶ್ವನಾಥ ಗೌಡ ಧಾರ್ಮಿಕ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನಕ್ಕೆ ಕೊಡುಗೆ ನೀಡಿದ ದಾನಿಗಳನ್ನು ಹಾಗೂ ನಾಲ್ಕು ದಿನಗಳ ಪೂಜಾ ಕೈಂಕರ್ಯಗಳಿಗೆ ನೇತೃತ್ವ ವಹಿಸಿದ್ದ ಶಿವಪ್ರಸಾದ್ ಭಟ್ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಎಚ್.ಜಿ. ಪ್ರಭಾಕರ್ ಇದ್ದರು.

ಬೆಳಿಗ್ಗೆ ಶ್ರೀಕ್ಷೇತ್ರ ಹೊರನಾಡು ಧರ್ಮಕರ್ತ ಡಾ. ಭೀಮೇಶ್ವರ ಜೋಶಿ ಅವರ ನೇತೃತ್ವದಲ್ಲಿ ನ್ಯಾಸಾದಿ ವಿಧಿಗಳು, ಪ್ರಸನ್ನ ಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಯು.ಬಿ. ಲೋಕಪ್ಪಗೌಡ, ಕಾರ್ಯದರ್ಶಿ ಎಚ್.ಎನ್. ಮಹೇಶ್, ಖಜಾಂಚಿ ಎಚ್.ಎ. ಗಿರೀಶ್, ನಿರ್ದೇಶಕರಾದ ಯು.ಬಿ. ರಾಮೇಗೌಡ, ಎಚ್.ಟಿ. ಗುರುನಾಥ್ ಗೌಡ, ಎಚ್.ಎ. ಲೋಕಪ್ಪಗೌಡ, ಎಂ.ಆರ್. ನಾರಾಯಣ, ಎಚ್.ಡಿ. ನಾಗೇಶ್, ಪ್ರವೀಣ್ ಎಚ್.ಡಿ., ನಾಗೇಂದ್ರ ಎಚ್.ಟಿ., ಚಂದ್ರೇಶ್ ಎಚ್.ಟಿ., ಧರ್ಮಶೆಟ್ಟಿ ಎಚ್.ಕೆ., ಮಂಜುನಾಥ್ ಎಚ್.ಎಂ., ಮಲ್ಲೇಶ್ ಎಚ್.ಆರ್., ಪ್ರಶಾಂತ್ ಎಚ್.ಎನ್., ದಿನೇಶ್, ಪರಮೇಶ್ ಎಚ್.ಟಿ., ಡಿ.ಬಿ. ಲತಾ, ಬಿಜೆಪಿ ಮಂಡಲ ಅಧ್ಯಕ್ಷ ರವಿ ಬಸರವಳ್ಳಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-126-1671722524

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.