ಚಿಕ್ಕಮಗಳೂರು: ‘ಸಂಸ್ಕಾರ ಸುಧಾ’ ಎಂಬ ಬೇಸಿಗೆ ಶಿಬಿರ ನಗರದ ಶಂಕರ ಮಠದ ಪ್ರವಚನ ಮಂದಿರದಲ್ಲಿ ಮೇ 4ರಿಂದ 10ರವರೆಗೆ ನಡೆಯಲಿದೆ ಎಂದು ಸಂಸ್ಕಾರ ಭಾರತಿಯ ಜಿಲ್ಲಾ ಘಟಕದ ಅಧ್ಯಕ್ಷ ನಾಯಕ ಸಚ್ಚಿದಾನಂದ ತಿಳಿಸಿದರು.

ಶಿಬಿರ ಸಂಜೆ 4 ಗಂಟೆಯಿಂದ 7.30 ರವರೆಗೆ ನಡೆಯಲಿದೆ. ಮಕ್ಕಳಲ್ಲಿ ಆಧುನಿಕತೆಯ ಜತೆಗೆ ಧಾರ್ಮಿಕ ಮೌಲ್ಯಗಳು, ನೈತಿಕತೆ ಹಾಗೂ ಸಂಸ್ಕಾರ ಬೆಳೆಯಬೇಕು ಎಂಬ ಉದ್ದೇಶದಿಂದ ಶಿಬಿರ ಆಯೋಜನೆ ಮಾಡಲಾಗಿದೆ. ಇದರಲ್ಲಿ 10 ರಿಂದ 16 ವರ್ಷ ವಯಸ್ಸಿನೊಳಗಿನ ಎಲ್ಲಾ ಸಮುದಾಯದ ಮಕ್ಕಳು ಭಾಗವಹಿಸಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರಳವಾಗಿ ನಿತ್ಯ ಪೂಜೆ ಮಾಡುವ ಕುರಿತ ತರಬೇತಿ, ಭಾರತೀಯ ಇತಿಹಾಸದ ಪರಿಚಯ, ಧರ್ಮ ಹಾಗೂ ಸಂಸ್ಕೃತಿಯ ಪರಿಚಯ, ಸಂಸ್ಕೃತ ಭಾಷೆಯ ಮೂಲ ಪಾಠಗಳು, ಆಟಗಳು, ವ್ಯಕ್ತಿತ್ವ ಅಭಿವೃದ್ಧಿ ಚಟುವಟಿಕೆಗಳು, ಭಕ್ತಿಗೀತೆಗಳನ್ನು ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಆಸಕ್ತ ಪೋಷಕರು ತಮ್ಮ ಮಕ್ಕಳ ಹೆಸರು ನೊಂದಾಯಿಸಿಕೊಳ್ಳಲು ನಾಗರಾಜ್ ರಾವ್ ಕಲ್ಕಟ್ಟೆ (ಮೊ.8722064169), ನಾಯಕ ಸಚ್ಚಿದಾನಂದ್ (94481 57054), ನಾಗರಾಜ್ (94485 548026) ಅವರನ್ನು ಸಂಪರ್ಕಿಸಬೇಕು. ಶಿಬಿರವು ಉಚಿತವಾಗಿದ್ದು, ಪ್ರಮಾಣಪತ್ರ ಹಾಗೂ ಕ್ಯಾಂಪ್ ಕಿಟ್ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲ್ಕಟ್ಟೆ ಪುಸ್ತಕದ ಮನೆ ವ್ಯವಸ್ಥಾಪಕಿ ರೇಖಾ ನಾಗರಾಜ್ ರಾವ್, ಸಂಸ್ಕಾರ ಭಾರತಿಯ ಸಂಚಾಲಕ ನಾಗರಾಜ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-126-1695816364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.